ಬೆಂಗಳೂರು: ಇತ್ತೀಚಿಗಷ್ಟೇ ನಟಿ ಹಾಗೂ ದಿವಂಗತ ನಟ ಚಿರಂಜೀವಿ ಪತ್ನಿ ಮೇಘನಾ ರಾಜ ಅವರ ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕೆಲವು ತಿಂಗಳ ಹಿಂದಷ್ಟೇ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರಿಂದಾಗಿ ಎರಡು ಕಡೆ ಕುಟುಂಬ ಸದಸ್ಯರು ದುಃಖತಪ್ತರಾಗಿದ್ದರು.


COMMERCIAL BREAK
SCROLL TO CONTINUE READING

ಈಗ ಮಗುವಿಗೆ ಜನ್ಮ ನೀಡುವ ಸಂತಸದಲ್ಲಿರುವ ಮೇಘನಾಗೆ ಸರ್ಜಾ ಕುಟುಂಬ ಸೀಮಂತ ಕಾರ್ಯಕ್ರಮವನ್ನು ನಡೆಸುವ ಮೂಲಕ ಖುಷಿಯಲ್ಲಿದೆ.ಸೀಮಂತ ಕಾರ್ಯಕ್ರಮದಲ್ಲಿ ಚಿರಂಜೀವಿ ಅನುಪಸ್ಥಿತಿ ಕಾಡದಿರುವಂತೆ ಮೇಘನಾ ಪಕ್ಕದಲ್ಲಿ ದೊಡ್ಡ ಪೋಸ್ಟರ್ ವೊಂದನ್ನು ಇಡಲಾಗಿತ್ತು. ಈಗ ಇದರ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಕೂಡ ತಾರಾ ದಂಪತಿಗಳ ಚಿತ್ರಗಳು ವೈರಲ್ ಆಗಿವೆ.


ಚಿರಂಜೀವಿ ಸರ್ಜಾ ಅವರ ಅನುಪಸ್ಥಿತಿ ಕಾಡದಿರುವಂತೆ ಕಲಾಕೃತಿಯೊಂದನ್ನು ರಚಿಸಿದ್ದಾರೆ.ಈ ಚಿತ್ರದಲ್ಲಿ ತುಂಬು ಗರ್ಭಿಣಿ ಮೇಘನಾ ರಾಜ್ ರನ್ನು ಮದುವೆ ಸಂದರ್ಭದಲ್ಲಿನ ಚಿರಂಜೀವಿ ಫೋಟೋಗೆ ಸಿಂಕ್ ಮಾಡಿ ಜೀವ ತುಂಬಿದ್ದಾರೆ. ಆ ಮೂಲಕ ಅವರು ಇಲ್ಲವೆನ್ನುವ ಕೊರಗನ್ನು ಈ ಚಿತ್ರದ ಮೂಲಕ ಹೋಗಲಾಡಿಸಿದ್ದಾರೆ.