ಲಂಡನ್ನಲ್ಲಿ ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನ
Actress Pooja Gandhi : ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ.
Actress Pooja Gandhi : ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ. ಬಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ ದಂಪತಿ ಭಾಗಹಿಸಿದ್ದಾರೆ. ಇದೇ ವೇಳೆ ಅಲ್ಲಿನ ಕನ್ನಡ ಸಂಘಗಳು ಈ ಜೋಡಿಯನ್ನು ಸನ್ಮಾನಿಸಿದೆ.
ಲಂಡನ್‌ನಲ್ಲಿರುವ ಎರಡು ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಆಫ್ ದಿ ಯುನೈಟೆಡ್ ಕಿಂಗ್‌ಡಮ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಮತ್ತು ಯೂನೈಟೆಡ್ ಕಿಂಗ್‌ಡಮ್ ಕನ್ನಡಿಗರು ಸಂಘದ ಅಧ್ಯಕ್ಷ ಡಾ. ನೀರಜ್ ಪಾಟೀಲ್, ಶ್ರೀ ಗಣಪತಿ ಭಟ್, ಯುಕೆ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಅಭಿಜೀತ್ ಸಾಲಿಮಠ್, ಶ್ರೀ ಮಿರ್ಗಿ ರಂಗನಾಥ್ ಮತ್ತು ಶ್ರೀ ಶರಣ್ ಭೇಮಳ್ಳಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಬಿಟೌನ್‌ಗೆ "ಧ್ರುವ" ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್ ನಟ!
ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. 12 ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ತನಗೆ ಬಸವಣ್ಣನವರ ಬಗ್ಗೆ ಅಪಾರ ಅಭಿಮಾನವಿದೆ ಮತ್ತು ಅವರ ಬೋಧನೆಗಳ ಸಮರ್ಪಿತ ಅನುಯಾಯಿ ಎಂದು ಪೂಜಾ ಗಾಂಧಿ ಹೇಳಿದರು.
ನವೆಂಬರ್ 14, 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಭಗವಾನ್ ಬಸವೇಶ್ವರರ ಐತಿಹಾಸಿಕ ಪ್ರತಿಮೆಯು ಯುಕೆಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1854ರ UK ಶಾಸನಗಳ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಅನುಮೋದನೆಯನ್ನು ಪಡೆದ ಕೆಲವು ಪರಿಕಲ್ಪನಾ ಪ್ರತಿಮೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಹಿಂದೆ, ಮಾರ್ಚ್ 5, 2023 ರಂದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಸವೇಶ್ವರ ದೇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದನ್ನೂ ಓದಿ: ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸುತ್ತ "ವೃತ್ತ" ಸಿನಿಮಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.