/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ಬಿಟೌನ್‌ಗೆ "ಧ್ರುವ" ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!

Happy Birthday Dhurva Sarja: ಕನ್ನಡದ ಸ್ಟಾರ್‌ ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಇದೇ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.. ಭರ್ಜರಿ ವೆಚ್ಚದಲ್ಲಿ ಸಿನಿಮಾ ರೆಡಿಯಾಗಿದ್ದು, ಸದ್ಯ ಈ ಮಾಸ್‌ ಚಿತ್ರದ ಟೈಟಲ್‌ ಸಾಂಗ್‌ ಹೊರಬಿದ್ದು, ಅದ್ದೂರಿಯಾಗಿ ಸಕ್ಸಸ್‌ ಕಾಣುತ್ತಿದೆ.. 

Written by - Savita M B | Last Updated : Oct 6, 2024, 10:57 AM IST
  • ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಧ್ರುವ ಸರ್ಜಾ
  • ಬಿಟೌನ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು..
ಬಿಟೌನ್‌ಗೆ "ಧ್ರುವ" ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!  title=

 Dhurva Sarja: ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಧ್ರುವ ಸರ್ಜಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.. ಅಲ್ಲದೇ ಇದೇ ವೇಳೆ ಮಾರ್ಟಿನ್‌ ಸಿನಿಮಾ ಮತ್ತೊಂದು ಗ್ಲಿಂಪ್ಸ್‌ ರಿಲೀಸ್‌ ಆಗುವ ನಿರೀಕ್ಷೆಯಿದೆ.. 

ಇದೆಲ್ಲದರ ನಡುವೆ ಧ್ರುವ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದು ಸಿಗುವಂತಿದೆ.. ಹೌದು.. ನಟನ ಹುಟ್ಟುಹಬ್ಬದಂದು ಬಾಲಿವುಡ್ ಕಡೆಯಿಂದ ಸರ್‌ಪ್ರೈಸ್ ಬರಬಹುದು ಎಂದು ಅವರ ಪ್ಯಾನ್ಸ್‌ ಕಾಯುತ್ತಿದ್ದಾರೆ.. ಅಲ್ಲದೇ ಕೆಲವು ದಿನಗಳಿಂದ ಧ್ರುವ ಬಿಟೌನ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು..

ಇದನ್ನೂ ಓದಿ-'ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ... ಒಂಟಿಯಾಗಿರಲು ಸಾಧ್ಯವಿಲ್ಲ'... ಜೈಲು ಅಧಿಕಾರಿಗಳಿಗೆ ದರ್ಶನ್ ದೂರು!

ಹೃತಿಕ್ ರೋಷನ್ ಹಾಗೂ ತೆಲುಗು ನಟ ಜ್ಯೂ. ಎನ್‌ಟಿಆರ್ ಅಭಿನಯಿಸಲಿರುವ ಯಶ್‌ ರಾಜ್‌ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣದಲ್ಲಿ ರೆಡಿಯಾಗುತ್ತಿರುವ ವಾರ್‌ 'ವಾರ್-2' ಸಿನಿಮಾದಲ್ಲಿ ಧ್ರುವ ಸರ್ಜಾ ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಗುಸುಗುಸು ಶುರುವಾಗಿತ್ತು.. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ.. ಇದೀಗ ಈ ಸುದ್ದಿ ಮತ್ತೇ ಸದ್ದು ಮಾಡುತ್ತಿದೆ.. ಇದರ ಹಿಂದೆ ದೊಡ್ಡ ಕಾರಣವೂ ಇದೆ.. 

ಇದನ್ನೂ ಓದಿ-69 ನೇ ವಯಸ್ಸಿನಲ್ಲಿ ʼಈʼ ಖ್ಯಾತ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದಾರಾ ನಟಿ ರೇಖಾ!? ಇಂಡಸ್ಟ್ರೀಯನ್ನೇ ನಡಗಿಸುತ್ತಿದೆ ಆ ಹೆಸರು!!

ಕೆಲವು ವರ್ಷಗಳ ಹಿಂದೆ ವಾರ್‌ ಸಿನಿಮಾ ಮೊದಲ ಭಾಗ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡಿತ್ತು.. ಈ ಚಿತ್ರ 475 ಕೋಟಿ ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಸೃಷ್ಟಿಸಿತ್ತು.. ಸದ್ಯ ಇದರ ಸೀಕ್ವೆಲಾ ಮಾಡಲು ತಯಾರಿ ನಡೆಸಲಾಗುತ್ತಿದೆ.. 

ಇತ್ತೀಚೆಗೆ ಸಂದರ್ಶನದಲ್ಲಿ ಭಾಗವಹಿಸಿದ ಧ್ರುವ ಸರ್ಜಾ ಅವರಿಗೆ ಈ ಪ್ರಶ್ನೆ ಎದುರಾಗಿತ್ತು.. ಆಗ ನಟ ಅದಕ್ಕೆ ಸರಿಯಾಗಿ ಉತ್ತರವನ್ನೂ ನೀಡದೇ.. ಇಲ್ಲ ಎಂದು ಕ್ಲೀಯರ್‌ ಆಗಿ ಹೇಳದೇ. ಎಲ್ಲ ಗೊತ್ತಾದ ಮೇಲೆ ಹೇಳುವೆ.. ಮುಂದೆ ಏನಾಗುತ್ತೋನ ಕಾದು ನೋಡೋಣ ಎಂದಿದ್ದರು.. ಹೀಗಾಗಿ ಅವರು ಬಾಲಿವುಡ್‌ಗೆ ಎಂಟ್ರಿ ಕೊಡಬಹುದು ಎನ್ನಲಾಗ್ತಿದೆ. ಅಲ್ಲದೇ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.