Rabha re entry : 90ರ ದಶಕ ಸಿನಿರಸಿಕರ ನೆಚ್ಚಿನ ನಾಯಕಿಯರಲ್ಲಿ ರಂಭಾ ಕೂಡ ಒಬ್ಬರು. ಕಳೆದ 30 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಎಲ್ಲಾ ಪ್ರಮುಖ ನಾಯಕರ ಜೊತೆ ನಟಿಸಿದ್ದಾರೆ. ಮದುವೆಯ ನಂತರ ಚಿತ್ರರಂಗ ತೊರೆದಿದ್ದ ರಂಭಾ ಇದೀಗ ರೀ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. 


COMMERCIAL BREAK
SCROLL TO CONTINUE READING

ಹೌದು.. ಕನ್ನಡ ಚಿತ್ರರಂಗವನ್ನು ಆಳಿದ ನಾಯಕಿಯರಲ್ಲಿ ರಂಬಾ ಕೂಡ ಒಬ್ಬರು. ಇವರ ನಿಜವಾದ ಹೆಸರು ವಿಜಯಲಕ್ಷ್ಮಿ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ 8 ಭಾರತೀಯ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ರಂಬಾ ಅವರು 15 ನೇ ವಯಸ್ಸಿನಲ್ಲಿ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ದಕ್ಷಿಣ ಭಾರತದ ಭಾಷೆಗಳಲ್ಲಿ ಪ್ರಮುಖ ನಾಯಕರ ಜೊತೆ ನಟಿಸಿದ್ದಾರೆ. 


ಇದನ್ನೂ ಓದಿ: ಕಿಂಗ್ ಖಾನ್ 'ಡಂಕಿ' ಟೀಸರ್‌ಗೆ ಮಿಲಿಯನ್ಸ್ ವೀವ್ಸ್ : ಈ ವರ್ಷ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್


ಕಡಿಮೆ ಸಮಯದಲ್ಲಿ 100 ಚಿತ್ರಗಳಲ್ಲಿ ನಟಿಸಿರುವ ರಂಭಾ, 1993 ರಲ್ಲಿ ಸರ್ವರ್‌ ಸೋಮಣ್ಣ ಸಿನಿಮಾ ಮೂಲಕ ಕನ್ನಡ ಸಿನಿರಂಗ ಪ್ರವೇಶ ಮಾಡಿದರು. ಕೆಂಪಯ್ಯ ಐಪಿಎಸ್‌, ಓ ಪ್ರೇಮವೆ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರ ರಾಮ, ಅನಾಥರು ಸಿನಿಮಾದಲ್ಲಿ ನಟಿಸಿದ್ದಾರೆ. 


ಟಾಪ್ ಹೀರೋ ಆಗಿದ್ದ ರಂಬಾ 2010ರಲ್ಲಿ ಉದ್ಯಮಿ ಇಂದ್ರಕುಮಾರ್ ಪದ್ಮನಾಪನ್ ಅವರನ್ನು ವಿವಾಹವಾದರು. ರಂಭಾ ಅವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಪ್ರಸ್ತುತ, ಅವರು ಕುಟುಂಬದ  ಜೊತೆ ಕೆನಡಾದ ಟೊರೊಂಟೊ ನಗರದಲ್ಲಿ ವಾಸಿಸುತ್ತಿದ್ದಾರೆ. 


ಇದನ್ನೂ ಓದಿ:ಬಿಗ್ ಬಾಸ್ scripted ನಿಜ, ಅರ್ಥ ಮಾಡ್ಕೊಳಿ : ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಬಚ್ಚಿಟ್ಟ ಸತ್ಯ!


ಸಧ್ಯ ರಂಭಾ ಸಿನಿಮಾರಂಗಕ್ಕೆ ಕಮ್‌ ಬ್ಯಾಕ್‌ ಮಾಡಲು ಬಯಸಿದ್ದು, ಕೆಲವರ ಬಳಿ ಕಥೆ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಮಾತನಾಡಿರುವ ರಂಭಾ, ಮದುವೆಯಾದ ಮೇಲೂ ಅನೇಕರು ನಟಿಸುವಂತೆ ಕೇಳಿದ್ದರು. ಇಂದಿಗೂ ಅಭಿಮಾನಿಗಳು ನಟಿಸುವಂತೆ ಕೇಳಿಕೊಳ್ಳುತ್ತಿದ್ದು, ಅವರ ಪ್ರೀತಿಯೇ ಮತ್ತೆ ನಟಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದರು.


ಈಗ ಸಿನಿಮಾ ಟ್ರೆಂಡ್ ಬದಲಾಗಿದೆ. 47ರ ಹರೆಯದ ರಂಭಾ ತಮ್ಮ ವಯಸ್ಸಿಗೆ ತಕ್ಕಂತೆ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದು, ಈ ಬಗ್ಗೆ ತಮ್ಮ ಆನ್ ಸ್ಕ್ರೀನ್ ಫ್ರೆಂಡ್ಸ್ ಜೊತೆ ಚರ್ಚಿಸುತ್ತಿದ್ದಾರೆ. ಮತ್ತೆ ನಟಿಸಲು ಬಂದರೆ ಬಹುಶಃ ತೆಲುಗು ಅಥವಾ ತಮಿಳು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.