ಬಿಗ್ ಬಾಸ್ scripted ನಿಜ, ಅರ್ಥ ಮಾಡ್ಕೊಳಿ : ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಬಚ್ಚಿಟ್ಟ ಸತ್ಯ!

Kirik Keerthi On Bigg Boss : ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಒಂದು ಸ್ಕ್ರಿಪ್ಟೆಡ್‌ ಶೋ ಹೌದು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. 

Written by - Chetana Devarmani | Last Updated : Nov 3, 2023, 07:20 PM IST
  • ಬಿಗ್ ಬಾಸ್ ಕನ್ನಡ ಸೀಸನ್ 10
  • ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ
  • ಬಿಗ್‌ ಬಾಸ್‌ ಬಗ್ಗೆ ಕಿರಿಕ್‌ ಕೀರ್ತಿ ಹೇಳಿದ್ದೇನು?
ಬಿಗ್ ಬಾಸ್ scripted ನಿಜ, ಅರ್ಥ ಮಾಡ್ಕೊಳಿ : ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಬಚ್ಚಿಟ್ಟ ಸತ್ಯ!  title=
Kirik Keerthi

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ವೀಕ್ಷಕರು ಅಸಮಾಧಾನಗೊಂಡಿದ್ದಾರೆ. ಪ್ರತಿ ಮಾತಿಗೂ ಜಗಳವೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಬಿಗ್‌ ಬಾಸ್‌ ವಿರುದ್ಧ ಟ್ರೋಲ್‌ ಮಾಡುತ್ತಿದ್ದಾರೆ. ಈ ನಡುವೆ ಕೆಲವರು ಇದೊಂದು ಸ್ಕ್ರಿಪ್ಟೆಡ್‌ ಶೋ ಎನ್ನುತ್ತಿದ್ದಾರೆ. ಬಿಗ್‌ ಬಾಸ್‌ ಬಗ್ಗೆ ಈ ಆರೋಪ ಹೊಸದಲ್ಲ. ಹಲವು ಬಾರಿ ಸ್ಕ್ರಿಪ್ಟೆಡ್‌ ಶೋ ಎಂದು ಅನೇಕರು ಬಿಂಬಿಸಿದ್ದಾರೆ. ಇದರ ಬಗ್ಗೆ ಈಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಒಂದು ಸ್ಕ್ರಿಪ್ಟೆಡ್‌ ಶೋ ಹೌದು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. 

ಇದನ್ನೂ ಓದಿ : ಖ್ಯಾತ ತೆಲುಗು ನಟನೊಂದಿಗೆ 'ಸೀತಾ ರಾಮಂ' ನಟಿ ಮೃಣಾಲ್ ಮದುವೆ..! 

ಈ ಬಗ್ಗೆ ವಿಡಿಯೋ ಮಾಡಿರುವ ಕಿರಿಕ್‌ ಕೀರ್ತಿ, ಈ ಬಾರಿ ಬಿಗ್‌ ಬಾಸ್‌ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸುಮಾರು ಜನರ ತಲೆಯಲ್ಲಿ ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಎಂಬ ಅನುಮಾನವಿದೆ. ಅನೇಕ ಬಾರಿ ಹಲವರು ಇದಕ್ಕೆ ಉತ್ತರಿಸಿದ್ದಾರೆ. ನನ್ನ ಕೇಳೋದಾದ್ರೆ ಹೌದು, ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಎಂದಿದ್ದಾರೆ. 

 

 

ಆದರೆ ಯಾವ ಥರ ಎಂದು ತಿಳಿಯುವುದು ಮುಖ್ಯ. ಉದಾಹರಣೆಗೆ ಕನ್ಫೆಷನ್‌ ರೂಮ್‌ನಲ್ಲಿ ಒಂದು ಲೆಟರ್‌ ಬರುತ್ತೆ. ಅದನ್ನು ತಂದು ಎಲ್ಲರ ಎದುರು ಓದುತ್ತಾರೆ. ಇದೇ ಸ್ಕ್ರಿಪ್ಟೆಡ್‌. ಅಲ್ಲಿ ಏನು ಮಾಡಬೇಕು ಅಂತ ಮಾತ್ರ ಬರೆದಿರುತ್ತಾರೆ. ಹೇಗೆ ಮಾಡಬೇಕೆಂದು ಬರೆದಿರಲ್ಲ ಎಂದಿದ್ದಾರೆ. 

ಇದನ್ನೂ ಓದಿ : ಹಾವಿನ ವಿಷ- ರೇವ್ ಪಾರ್ಟಿ..! ಪೊಲೀಸರಿಗೆ ಸಿಕ್ಕಿಬಿದ್ದ ಬಿಗ್ ಬಾಸ್ ವಿಜೇತ 

ಏನು ಮಾಡಬೇಕೆಂದು ಬಿಗ್‌ ಬಾಸ್‌ ಹೇಳಿದ್ದನ್ನು ಹೇಗೆ ಮಾಡ್ತಾರೆ ಎಂಬುದು ಆಯಾ ಕಂಟೆಸ್ಟಂಟ್‌ಗಳಿಗೆ ಬಿಟ್ಟಿದ್ದು̤  ಸುದೀಪ್‌ ವೀಕೆಂಡ್‌ ನಲ್ಲಿ ಎಲ್ಲರನ್ನೂ ಪ್ರಶ್ನೆ ಮಾಡಲ್ಲ ಎಂಬ ಆರೋಪ ಕೇಳಿ ಬರ್ತಿದೆ. ಇದು ಅಪ್ಪಟ ಸುಳ್ಳು. ನೀವು ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ಕಿರಿಕ್‌ ಕೀರ್ತಿ ಹೇಳಿದರು. ಹೀಗೆ ಬಿಗ್‌ ಬಾಸ್‌ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಕಿರಿಕ್‌ ಕೀರ್ತಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News