Actress Rachita Rams photo: ರಚಿತಾ ರಾಮ್… ಸ್ಯಾಂಡಲ್ವುಡ್ ನ ಡಿಂಪಲ್ ಬ್ಯೂಟಿ. ಇತ್ತೀಚಿಗೆ ಮಾಧ್ಯಮಗಳಿಂದ ಕೊಂಚ ದೂರ ಉಳಿದಿರೋ ಡಿಂಪಲ್ ಕ್ವೀನ್ ರಚಿತಾ ಅಂದ್ರೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಫುಲ್ ವೈರಲ್ ಆಗಿ ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shubman Gill: ಶೀಘ್ರದಲ್ಲೇ ಬಾಲಿವುಡ್‌ಗೆ ಕ್ರಿಕೆಟರ್‌ ಶುಭ್ಮನ್‌ ಗಿಲ್‌ ಎಂಟ್ರಿ.!


“ಸ್ಯಾಂಡಲ್ವುಡ್ ಗೆ CEO ಅಂತ ಇದ್ರೆ ಅದು ರಚಿತಾ ರಾಮ್ ಮಾತ್ರ” ಎಂಬ ಫೋಟೋ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವು ದೊಡ್ಡ ಕಂಪನಿಗಳ CEO ಫೋಟೋಗಳನ್ನ ಎಡಿಟ್ ಮಾಡಿದ್ದು, ಅದರ ಜೊತೆಗೆ ರಚಿತಾ ರಾಮ್ ಫೋಟೋ ಕೂಡ ಹಾಕಿ ಫ್ಯಾನ್ಸ್ ವೈರಲ್ ಮಾಡಿದ್ದಾರೆ.


ನಿಮಗೆಲ್ಲ ಗೊತ್ತಿರೋ ಹಾಗೇ ನಟಿ ರಚಿತಾ ರಾಮ್ ಬುಧವಾರ ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜ ಮೂಲ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಮುಂಬರುವ ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ ಮಾಡಲು ಬಂದಿರುವುದಾಗಿ ನಟಿ ತಿಳಿಸಿದ್ದಾರೆ. ಇದು ನನ್ನ ಮೊದಲ ಭೇಟಿ, ಖುಷಿಯಾಗುತ್ತಿದೆ ಎಂದಿದ್ದಾರೆ ರಚಿತಾ ರಾಮ್.


“ನಾನು ಮೊದಲ ಬಾರಿಗೆ ಭೇಟಿ ಕೊಡುತ್ತಿದ್ದೇನೆ. ಈ ದೇವಸ್ಥಾನ ಬಗ್ಗೆ, ಜೊತೆಗೆ ಇಲ್ಲಿ ಬಂದರೆ ತುಂಬಾ ನೆಮ್ಮದಿ ಅನಿಸುತ್ತದೆ ಎಂದು ಫ್ರೆಂಡ್ಸ್ ಹೇಳಿದ್ದರು. ಅವರಿಗೆ ಥ್ಯಾಂಕ್ಸ್. ಅವರಿಂದಲೇ ನಾನು ಇಲ್ಲಿಗೆ ಬರುವ ಹಾಗಾಯಿತು” ಎಂದಿದ್ದಾರೆ.


ಮುಂಬರುವ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಯಶಸ್ಸಿಗೆ ಪ್ರಾರ್ಥನೆ ಮಾಡಿದ್ದಾಗಿ ನಟಿ ತಿಳಿಸಿದ್ದಾರೆ. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣಿಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಕೊರಗಜ್ಜ ದೈವದಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಅನ್ನಿಸಿತು ಎಂದಿದ್ದಾರೆ.


ಇದನ್ನೂ ಓದಿ: IPL ಮುಗಿಯುತ್ತಿದ್ದಂತೆ ಆಸ್ಪತ್ರೆ ಸೇರಿದ ಎಂ ಎಸ್ ಧೋನಿ! ಏನಾಯ್ತು ಗೊತ್ತಾ?


ಈ ಕ್ಷೇತ್ರ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡು ತುಂಬಾ ಚೆನ್ನಾಗಿದೆ. ಇಲ್ಲಿ ತುಂಬಾ ಪಾಸಿಟಿವ್ ವೈಬ್ಸ್ ಅನುಭವವಾಗುತ್ತದೆ. ನನ್ನ ಮುಂಬರುವ ಚಿತ್ರಗಳ ಬಗ್ಗೆ ಪ್ರಾರ್ಥಿಸಿದ್ದೇನೆ ಎಂದು ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ನಟಿ ರಚಿತಾ ರಾಮ್ ಹೇಳಿಕೆ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ