MS Dhoni in Hospital: ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಗುಜರಾತ್ ಇನ್ನಿಂಗ್ಸ್ ವೇಳೆ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ಸಮಯದಲ್ಲಿ ಗಾಯಗೊಂಡರು. ಧೋನಿಗೆ ತುಂಬಾ ನೋವಿರುವಂಯೆ ಕಾಣಿಸುತ್ತಿತ್ತು. ಇನ್ನು ಈ ಸೀಸನ್ ಆರಂಭಕ್ಕೂ ಮುನ್ನವೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಸೀಸನ್ 16ರಲ್ಲಿ ಧೋನಿ ಸತತ ಪಂದ್ಯಗಳನ್ನು ಆಡಿದ್ದರಿಂದ ಸೀಸನ್ ಮುಗಿದ ಕೂಡಲೇ ಆಸ್ಪತ್ರೆಗೆ ಹೋಗಬೇಕಾಗಿಬಂದಿದೆ.
ಇಡೀ ಐಪಿಎಲ್ 2023 ರ ಸಮಯದಲ್ಲಿ, ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ 2023 ಮುಗಿದ ತಕ್ಷಣ, ಅವರು ಆಸ್ಪತ್ರೆಗೆ ಹೋಗಿ ತಮ್ಮ ಪರೀಕ್ಷೆಯನ್ನು ಮಾಡಿಸಿದ್ದಾರೆ. ಧೋನಿ ಮೊಣಕಾಲಿನ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿದ್ದಾರೆ ಎಂಬ ವರದಿಗಳಿವೆ. ಗಾಯವು ಎಷ್ಟು ಗಂಭೀರವಾಗಿದೆ ಎಂಬುದನ್ನು ಕಂಡುಹಿಡಿಯಲು ಅವರು ಈ ವಾರ ಹಲವಾರು ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಸಮಯದಲ್ಲಿ, CSK ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಧೋನಿಯ ಗಾಯದ ಬಗ್ಗೆ ಹೇಳಿಕೆಯನ್ನು ನೀಡಿದ್ದರು. “ಅವರಿಗೆ ಮೊಣಕಾಲು ಗಾಯವಾಗಿದೆ. ಅದನ್ನು ಧೋನಿ ನಡೆಯುವ ಸಂದರ್ಭದಲ್ಲಿ ಗಮನಿಸಬಹುದು. ಆದರೆ ಗಾಯವು ತುಂಬಾ ಗಂಭೀರವಾಗಿಲ್ಲ. ಶೀಘ್ರವೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ” ಎಂದು ಅವರು ಹೇಳಿದ್ದಾರೆ. ಧೋನಿ ಐಪಿಎಲ್ ಫೈನಲ್ ಆಡಲು ಬಂದಾಗ, ಬಸ್ ನಿಂದ ಇಳಿಯುವಾಗಲೂ ಮೊಣಕಾಲಿನ ನೋವಿರುವುದು ಕಂಡುಬಂದಿತ್ತು.
ಇದನ್ನೂ ಓದಿ: 14 ಪಂದ್ಯ, 27 ವಿಕೆಟ್…IPL ನಲ್ಲಿ ಧೂಳೆಬ್ಬಿಸಿದ್ದ ಈ ಆಟಗಾರ 8 ವರ್ಷಗಳ ಬಳಿಕ Team Indiaಗೆ ಮತ್ತೆ ಎಂಟ್ರಿ!
ಐಪಿಎಲ್ 2023ರ ಅಂತಿಮ ಪಂದ್ಯ ಸೋಮವಾರ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ 5ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್ ಗಳ ಜಯ ಸಾಧಿಸಿದ ನಂತರ, ಇದು ಧೋನಿ ಅವರ ಕೊನೆಯ ಸೀಸನ್ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಉತ್ತರಿಸಿದ ಧೋನಿ, “ನಾವು ಸಂದರ್ಭಗಳನ್ನು ನೋಡಿದರೆ, ನಾನು ನಿವೃತ್ತಿಯಾಗಲು ಇದು ಉತ್ತಮ ಸಮಯ. ನಾನು ಈಗ ಹೊರಡುತ್ತಿದ್ದೇನೆ ಎಂದು ಹೇಳುವುದು ನನಗೆ ತುಂಬಾ ಸುಲಭ ಆದರೆ ಮುಂದಿನ ಒಂಬತ್ತು ತಿಂಗಳು ಕಷ್ಟಪಟ್ಟು ಮತ್ತೆ ಒಂದು ಸೀಸನ್ ಆಡುವುದು ಕಷ್ಟ. ದೇಹವು ಬೆಂಬಲಿಸಬೇಕು. ಚೆನ್ನೈ ಅಭಿಮಾನಿಗಳು ನನ್ನ ಮೇಲೆ ಪ್ರೀತಿಯನ್ನು ಧಾರೆಯೆರೆದ ರೀತಿಗೆ, ನಾನು ಇನ್ನೂ ಒಂದು ಸೀಸನ್ ಆಡುವುದರ ಮೂಲಕ ಅವರಿಗೆ ನನ್ನ ಕೊಡುಗೆಯನ್ನು ನೀಡುತ್ತೇನೆ. ಅವರು ತೋರಿದ ಪ್ರೀತಿ ಮತ್ತು ಉತ್ಸಾಹಕ್ಕೆ ನಾನು ಕೂಡ ಅವರಿಗಾಗಿ ಏನಾದರೂ ಮಾಡಬೇಕು” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ