Actress Rakshita Prem: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತುಂಬಾ ಬೋಲ್ಡ್. ಯಾವಾಗಲೂ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಮಾತನಾಡುವುದಕ್ಕೆ ರಕ್ಷಿತಾ ಹೆಸರುವಾಸಿ. ಅಪ್ಪ ಗೌರಿಶಂಕರ್, ಅಮ್ಮ ಮಮತಾ ರಾವ್, ಅವರಿಬ್ಬರ ಸಂಬಂಧ, ಪತಿ ಪ್ರೇಮ್ ಎಲ್ಲರ ಬಗ್ಗೆಯೂ ಯಾವಾಗಲೂ ಮುಕ್ತವಾಗಿ ಮಾತಾನಾಡುತ್ತಾರೆ ರಕ್ಷಿತಾ. ಆದರೆ ಈ ಸಲ ರಕ್ಷಿತಾ ಪ್ರೇಮ್ ತುಂಬಾ ಎಮೋಷನಲ್ ಆಗಿ ಮಾತನಾಡಿದ್ದಾರೆ. ನನ್ನ ಅಪ್ಪ ತೀರಿಕೊಂಡ ನಂತರ ಆ ಜಾಗವನ್ನು ತುಂಬಿದ್ದು ಇವರೇ ಅಂತಾ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

‘ಭೈರತಿ ರಣಗಲ್’ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್ ಮಾಮೂಲಿಯಂತೆ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಸಿನಿಮಾದ ವಿಶೇಷತೆ ಬಗ್ಗೆ ಮತ್ತು ಸಿನಿಮಾದ ನಾಯಕ ಶಿವರಾಜಕುಮಾರ್ ಬಗ್ಗೆ ಮಾತನಾಡಿದರು. ಹಾಗೆ ಮಾತನಾಡುತ್ತಾ ಮಧ್ಯೆ ಎಮೋಷನ್ ಆದರು. ತಮ್ಮ ಮತ್ತು ದೊಡ್ಡಮನೆಯ ಸಂಬಂಧ ಎಂಥಹುದು ಎಂದು ಹೇಳಿಕೊಂಡರು. 


ಜನುಮದ ಜೋಡಿ’ ಸಿನಿಮಾ ರಿಲೀಸ್ ಆದ ದಿನವೇ (ನವೆಂಬರ್ 15) ‘ಭೈರತಿ ರಣಗಲ್’ ಬಿಡುಗಡೆ ಆಗುತ್ತಿದೆ. ಅಂದು ‘ಜನುಮದ ಜೋಡಿ’ ಸಿನಿಮಾ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಮ್ಮ ಅಪ್ಪ ಗೌರಿಶಂಕರ್ ಇದ್ದರು. ಆ ಚಿತ್ರಕ್ಕೆ ನನ್ನ ತಂದೆ ಸಿನಿಮಾಟೋಗ್ರಾಫರ್ ಆಗಿದ್ದರು. ಇಂದು ‘ಭೈರತಿ ರಣಗಲ್’ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ನಟ ಶಿವರಾಜಕುಮಾರ್ ಅವರಿಗಾಗಿ ನಾನು ಬಂದಿದ್ದೇನೆ ಎಂದು ರಕ್ಷಿತಾ ಪ್ರೇಮ್ ಹೇಳುತ್ತಲೇ ಎಮೋಷನಲ್ ಆಗಿಬಿಟ್ಟರು.


ಇದನ್ನೂ ಓದಿ- ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತು


ರಕ್ಷಿತಾ ಪ್ರೇಮ್ ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗಿಬಿಟ್ಟರು. ನಮ್ಮ ಅಪ್ಪ ಯಾವತ್ತೂ ಅವರ ರೂಮಿನಲ್ಲಿ ಯಾವ ದೇವರ ಫೋಟೋಗಳನ್ನು ಇಟ್ಟುಕೊಂಡಿರಲಿಲ್ಲ. ಅವರ ರೂಮಿನಲ್ಲಿ ಇದ್ದದ್ದು ಅಣ್ಣಾವ್ರು ಅಂದ್ರೆ ಡಾ. ರಾಜಕುಮಾರ್ ಮತ್ತು ಅಮ್ಮ ಅಂದ್ರೆ ಪಾರ್ವತಮ್ಮ ಅವರ ಫೋಟೋ ಮಾತ್ರ. ನಾನು ‘ಎಲ್ಲರ ಮನೆಯಲ್ಲಿ ಇಡುವಂತೆ ನೀವ್ಯಾಕೆ ದೇವರ ಫೋಟೋ ಇಟ್ಟಿಲ್ಲ’ ಎಂದು ಕೇಳಿದೆ. ಅದಕ್ಕೆ ನಮ್ಮ ಅಪ್ಪ, ‘ನನ್ನ ಪಾಲಿಗೆ ಇವರೇ ದೇವರು’ ಎಂದು ರಾಜಕುಮಾರ್ ಮತ್ತು ಪಾರ್ವತಮ್ಮ ಫೋಟೋ ತೋರಿಸಿದರು. ನಮ್ಮ ಅಪ್ಪನಿಗೆ ಅಣ್ಣಾವ್ರು ಮತ್ತು ಅಮ್ಮ ಅಂದ್ರೆ ಅಷ್ಟು ಇಷ್ಟ. ನನ್ನ ಪಾಲಿಗೆ ‘ನಮ್ಮ ಅಪ್ಪ ತೀರಿಕೊಂಡ ನಂತರ ಆ ಜಾಗ ತುಂಬಿದ್ದು ಈ ಅಣ್ಣ, ಅಂದ್ರೆ ಶಿವರಾಜಕುಮಾರ್’ ಎಂದಾಗ ರಕ್ಷಿತಾ ಪ್ರೇಮ್ ಅವರ ಕಂಠ ಗದ್ಗದಿತವಾಗಿತ್ತು. 


ನಮ್ಮ ಅಪ್ಪ ಗೌರಿ ಶಂಕರ್ ಮತ್ತು ಅಣ್ಣ ಶಿವರಾಜಕುಮಾರ್ ಒಳ್ಳೆಯ ಸ್ನೇಹಿತರು. ಹಾಗಾಗಿ ನನ್ನ ಪಾಲಿಗೆ ಶಿವರಾಜಕುಮಾರ್ ತಂದೆ ಮತ್ತು ಅಣ್ಣನ ಸಮಾನ. ನನ್ನ ಬಗ್ಗೆ ಅಣ್ಣನಷ್ಟೇ ಗೀತಾಕ್ಕ ಕೂಡ ಪ್ರೀತಿ ತೋರುತ್ತಾರೆ. ನನಗೆ ಈಗಲೂ ಏನಾದ್ರೂ ಸಮಸ್ಯೆಯಾದ್ರೆ, ನಾನು ಡಿಸ್ಟರ್ಬ್ ಆದ್ರೆ ಗೀತಾಕ್ಕನಿಗೆ ಕಾಲ್ ಮಾಡುತ್ತೇನೆ. ಪತಿ ಪ್ರೇಮ್ ನಂತರ ನಾನು ಅತ್ಯಂತ ಕಂಫರ್ಟ್ ಆಗಿ ಯಾವುದೇ ವಿಷಯವನ್ನು ಹಂಚಿಕೊಳ್ಳುವುದು ಗೀತಾಕ್ಕ ಅವರ ಬಳಿ ಎಂದು ತಮ್ಮ ಮತ್ತು ಶಿವರಾಜಕುಮಾರ್ ಕುಟುಂಬದ ಸಂಬಂಧದ ಬಗ್ಗೆ ಹೇಳಿಕೊಂಡರು ರಕ್ಷಿತಾ ಪ್ರೇಮ್. 


ಇದನ್ನೂ ಓದಿ- ತಾಯಿಯೊಂದಿಗೆ ಇಡೀ ರಾತ್ರಿ ರಸ್ತೆಯಲ್ಲಿ ಕಳೆದಿದ್ದ ಖ್ಯಾತ ನಟಿ..! ಕ್ರೇಜಿ ಕ್ವೀನ್ ಕಹಾನಿ..!


ಭಾವುಕರಾದ ರಕ್ಷಿತಾ ಪ್ರೇಮ್ ವಿಡಿಯೋ ಇಲ್ಲಿದೆ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.