ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತು

Actress Rakshita: ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ತುಂಬಾ ಚಿಕ್ಕವರಿದ್ದಾಗಲೇ ಅವರ ತಂದೆ ತಾಯಿ ಬೇರ್ಪಟ್ಟಿದ್ದರು. 

Written by - Yashaswini V | Last Updated : Oct 25, 2024, 01:25 PM IST
  • ತಂದೆ ಹಿಂದಿ ಸಿನಿಮಾಗಳ ಚಿತ್ರೀಕರಣಕ್ಕಾಗಿ ಮುಂಬೈಗೆ ಬರುತ್ತಿದ್ದರು.
  • ಆದರೆ ನನ್ನನ್ನು ಭೇಟಿಯಾಗುತ್ತಿದ್ದದ್ದು ಅಪರೂಪ.
  • ತಂದೆ ಬಗ್ಗೆ ನಟಿ ರಕ್ಷಿತಾ ಮನದಾಳದ ಮಾತು
ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ:  ಖ್ಯಾತ ನಟಿಯ ಅಂತರಾಳದ ಮಾತು  title=

Actress Rakshita: ನಟಿ ರಕ್ಷಿತಾ ಪ್ರೇಮ್ ಹೊಸಬೆಳಕು ಚಿತ್ರದಲ್ಲಿ ಡಾ ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಖ್ಯಾತ ನಟಿ ಮಮತಾ ರಾವ್ ಅವರ ಪುತ್ರಿ ಎಂದು ಎಲ್ಲರಿಗೂ ಗೊತ್ತಿದೆ. ಸಾಕಷ್ಟು ಮಂದಿಗೆ ಅವರ ತಂದೆಯ ಬಗ್ಗೆ ತಿಳಿದಿಲ್ಲ. ರಕ್ಷಿತಾ ಅವರ ತಂದೆ ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದವರ ಖ್ಯಾತ ಛಾಯಾಗ್ರಾಹಕ. 

ರಕ್ಷಿತಾ ತುಂಬಾ ಚಿಕ್ಕವರಿದ್ದಾಗಲೇ ತಂದೆ-ತಾಯಿ ಬೇರ್ಪಟ್ಟಿದ್ದರಿಂದ ಅವರಿಬ್ಬರು ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. 11-12ನೇ ವಯಸ್ಸನಲ್ಲಿ ಇದ್ದಾಗ ರಕ್ಷಿತಾ ತಮ್ಮ ತಂದೆಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರಂತೆ. ಪರಸ್ಪರ ಬೇರೆ ಆಗಿದ್ದರೂ ಸಹ ರಕ್ಷಿತಾ ತಾಯಿ ಮಮತಾ ರಾವ್ "ಅವರೇ ನಿಮ್ಮ ಅಪ್ಪ,  ತುಂಬಾ ಒಳ್ಳೆಯವರು, ಹೋಗಿ ಮಾತನಾಡು" ಎಂದಿದ್ದರಂತೆ. 

ಇದನ್ನೂ ಓದಿ- ತಾಯಿಯೊಂದಿಗೆ ಇಡೀ ರಾತ್ರಿ ರಸ್ತೆಯಲ್ಲಿ ಕಳೆದಿದ್ದ ಖ್ಯಾತ ನಟಿ..! ಕ್ರೇಜಿ ಕ್ವೀನ್ ಕಹಾನಿ..!

ಯಾವತ್ತೂ ಅಪ್ಪನ ಬಗ್ಗೆ ಕೆಟ್ಟದಾಗಿ ಮಾತನಾಡದ ತಾಯಿ: 
ತಂದೆ ಹಿಂದಿ ಸಿನಿಮಾಗಳ ಚಿತ್ರೀಕರಣಕ್ಕಾಗಿ ಮುಂಬೈಗೆ ಬರುತ್ತಿದ್ದರು. ಆದರೆ ನನ್ನನ್ನು ಭೇಟಿಯಾಗುತ್ತಿದ್ದದ್ದು ಅಪರೂಪ. ಅಮ್ಮ ಯಾವತ್ತೂ ಅಪ್ಪನ ಬಗ್ಗೆ ಕೆಟ್ಟದಾಗಿ ಹೇಳಲಿಲ್ಲ. ಹಾಗಾಗಿ ನನಗೆ ಅಪ್ಪ ಎಂದರೆ ಯಾವತ್ತೂ ಬೇಸರ ಆಗಿಲ್ಲ ಎಂದು ರಕ್ಷಿತಾ ತಮ್ಮ ತಂದೆ ಬಗೆಗಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. 

ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮಾತನಾಡಿರುವ ನಟಿ ರಕ್ಷಿತಾ ಪ್ರೇಮ್, ಅಪ್ಪ ಗೌರಿಶಂಕರ್ 2ನೇ ಮದುವೆಯಾದಾಗ ಪಾರ್ವತಮ್ಮ ರಾಜಕುಮಾರ್ ಅವರು ಕಾಲ್ ಮಾಡಿದರು. ನಾನು ಯಾವಾಗಲೂ ಅವರನ್ನು ಅಮ್ಮ ಎಂದೇ ಕರೆಯುತ್ತೇನೆ.  ಆ ಮದುವೆ ವೇಳೆ ನಮ್ಮಮ್ಮ ಮಮತಾ ರಾವ್ ‘ಅಮ್ಮ ಕಾಲ್ ಮಾಡಿದ್ದಾರೆ ಮಾತನಾಡು’ ಎಂದು ಫೋನ್ ಕೊಟ್ಟರು. ಆ ಕಡೆಯಿಂದ ಪಾರ್ವತಮ್ಮ ರಾಜಕುಮಾರ್ ಅವರು ‘ಅಪ್ಪಾಜಿದು ಮದುವೆ ಆಯ್ತು, ಆದ್ರೆ ನಾನು ಯಾವಾಗಲೂ ನಿನ್ನ ಜೊತೆ ಇರುತ್ತೇನೆ’ ಅಂತಾ ಹೇಳಿದರು. ನಿಜಕ್ಕೂ ನನಗೆ ಅವರು ಹೇಳಿದ ಮಾತಿನಿಂದ ತುಂಬಾ ಧೈರ್ಯ ಬಂತು’’ ಎಂದು ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ- ನಟಿ ಖುಷ್ಬೂ ಸುಂದರ್‌ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!

ಯಾರೂ ಕೆಟ್ಟವರಲ್ಲ: 
ಇಲ್ಲಿ ಯಾರು ಕೆಟ್ಟವರಲ್ಲ, ಪರಿಸ್ಥಿತಿ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತದೆ. ಹಾಗಾಗಿ ನಮ್ಮಿಂದ ದೂರವೇ ಇದ್ದ ತಂದೆಯ ಬಗ್ಗೆ ನನಗೆ ಯಾವುದೇ ದ್ವೇಷ-ಕೋಪಗಳಿಲ್ಲ. ಅದಕ್ಕೆ ಬದಲಾಗಿ ನನಗೆ ಅವರ ಬಗ್ಗೆ ಅಪಾರವಾದ ಗೌರವ ಇದೆ. ಅದೇ ಕಾರಣಕ್ಕೆ ನಾನು ಈಗಲೂ ಯಾವುದೇ ಶೂಟಿಂಗ್ ಇದ್ದರು ಮೊದಲು ಕ್ಯಾಮರಾಗೆ ನಮಸ್ಕಾರ ಮಾಡುತ್ತೇನೆ. ಒಮ್ಮೆ ಹಾಗೆ  ಕ್ಯಾಮರಾಗೆ ನಮಸ್ಕಾರ ಮಾಡಿದರೆ, ನನ್ನ ತಂದೆ ನನ್ನ ಜೊತೆ ಇದ್ದಾರೆ ಎನ್ನುವ ಫಿಲಿಂಗ್ ಬರುತ್ತದೆ ಎಂದು  ರಕ್ಷಿತಾ ಪ್ರೇಮ್  ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News