Ramya Wedding : ಚಂದನವನದ ಮುದ್ದು ನಟಿ ರಮ್ಯಾ. ಸ್ಯಾಂಡಲ್‌ವುಡ್‌ ಕ್ವೀನ್‌ ಸದ್ಯ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ಗಳಲ್ಲಿ ಒಬ್ಬರು. ಇವರ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ ಎಲ್ಲವನ್ನೂ ತಳ್ಳಿಹಾಕಿದ್ದರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿರುವ ನಟಿ ರಮ್ಯಾಗೆ ಎಲ್ಲೇ ಹೋದರು ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ ಅದು ಮದುವೆ ಯಾವಾಗ ಅಂತ. ಸಿನಿಮಾ ತಯಾರಿಯಲ್ಲಿ ಬ್ಯುಸಿಯಿರುವ ನಟಿ ರಮ್ಯಾ ಇದೀಗ ಸಮಾರಂಭವೊಂದಕ್ಕೆ ತೆರಳಿದ್ದರು. ಅಲ್ಲಿ ಮದುವೆ ಮಾತಿಗೆ ಮೌನ ಮುರಿದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ರಶ್ಮಿಕಾ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ ಮಾತು ಕೇಳಿ ಫ್ಯಾನ್ಸ್‌ ಶಾಕ್!


14ನೇ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಸಹ ಭಾಗಿಯಾಗಿದ್ದರು. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಬಿಜಿಎಸ್ ಉತ್ಸವ 2022 ನಡೆಯಿತು. ಚಿತ್ರನಟಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ರಮ್ಯಾ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಸ್ಟೂಡೆಂಟ್‌ ಇಬ್ಬರು ಕೇಳಿದ ಮದುವೆ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರ ಸದ್ಯ ವೈರಲ್‌ ಆಗುತ್ತಿದೆ. 


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಮ್ಯಾ ಅವರಿಗೆ ವಿದ್ಯಾರ್ಥಿಗಳು ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ಇದೇ ವೇಳೆ ಒಬ್ಬ ವಿದ್ಯಾರ್ಥಿ "ರಮ್ಯಾ ಮೇಡಮ್‌, ನಿಮ್ಮ ಮದುವೆ ಯಾವಾಗ?" ಎಂದು ಕೇಳಿದ್ದಾನೆ. "ಮದುವೆ ಯಾಕೋ ಆಗಬೇಕು? ಅದೇ ನನಗೆ ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಆಗ ಆ ವಿದ್ಯಾರ್ಥಿ, "ಹೌದು ಮೇಡಂ, ನೀವು ಮದುವೆ ಆಗಲೇಬೇಡಿ" ಎಂದಿದ್ದಾನೆ. 


ಇದನ್ನೂ ಓದಿ : ಗೋವಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಇಂದು ಸಂಜೆ ಪ್ರೀಮಿಯರ್ ಆಗಲಿದೆ ‘ರೆಮೋ’


ಆಗ ಮುಗುಳ್ನಕ್ಕ ರಮ್ಯಾ, ಮದುವೆ ಆಗಬಾರದು ತಾನೆ.. ಯೆಸ್ ಆಗಲ್ಲಾ. ಹ್ಯಾಪಿ ಆಗಿರೋದು ಅಥವಾ ಮದುವೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅದಕ್ಕೆ ನಾನು ಸಂತೋಷವಾಗಿರುವುದನ್ನೆ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ. ರಮ್ಯಾ ಮದುವೆ ಬಗ್ಗೆ ಹೇಳಿದ ಈ ಮಾತುಗಳು ವೈರಲ್‌ ಆಗುತ್ತಿವೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ರಮ್ಯಾ ಅವರ ಈ ವಿಡಿಯೋ ಟ್ರೆಂಡಿಂಗ್‌ ಆಗುತ್ತಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.