Kantara: ರಶ್ಮಿಕಾ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ ಮಾತು ಕೇಳಿ ಫ್ಯಾನ್ಸ್‌ ಶಾಕ್!

Rishab Shetty on Rashmika Mandanna : ಕನ್ನಡದ ನಟ ರಿಷಬ್ ಶೆಟ್ಟಿ ಈಗ ಕಾಂತಾರ ಸಿನಿಮಾ ಮೂಲಕ ಮನೆಮಾತಾಗಿದ್ದಾರೆ. ಈ ಸಿನಿಮಾ ಭಾರತೀಯರ ಹೃದಯವನ್ನು ಗೆದ್ದಿದೆ. ಇದೀಗ ರಿಷಬ್ ಶೆಟ್ಟಿಯ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಅವರು Gulte.com ನೊಂದಿಗೆ ಮಾತನಾಡುವಾಗ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಮತ್ತು ಸಮಂತಾ ರುತ್ ಪ್ರಭು ಈ ಪೈಕಿ ನಿಮ್ಮ ನೆಚ್ಚಿನ ನಟಿ ಯಾರೆಂದು ಕೇಳಿದಾಗ ಅವರು ಕೊಟ್ಟ ಉತ್ತರ ಎಲ್ಲಡೆ ವೈರಲ್‌ ಆಗುತ್ತಿದೆ.

Written by - Chetana Devarmani | Last Updated : Nov 24, 2022, 06:11 PM IST
  • ಕಾಂತಾರ ಸಿನಿಮಾ ಮೂಲಕ ಮನೆಮಾತಾಗಿರುವ ನಟ ರಿಷಬ್ ಶೆಟ್ಟಿ
  • ರಶ್ಮಿಕಾ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ ಮಾತು ಕೇಳಿ ಫ್ಯಾನ್ಸ್‌ ಶಾಕ್!
  • ನೆಚ್ಚಿನ ನಟಿ ಯಾರೆಂದು ಕೇಳಿದಾಗ ಅವರು ಕೊಟ್ಟ ಉತ್ತರ ಎಲ್ಲಡೆ ವೈರಲ್‌
Kantara: ರಶ್ಮಿಕಾ ಬಗ್ಗೆ ರಿಷಬ್‌ ಶೆಟ್ಟಿ ಹೇಳಿದ ಮಾತು ಕೇಳಿ ಫ್ಯಾನ್ಸ್‌ ಶಾಕ್!
ರಶ್ಮಿಕಾ - ರಿಷಬ್‌ ಶೆಟ್ಟಿ

Rishab Shetty on Rashmika Mandanna : ಕನ್ನಡದ ನಟ ರಿಷಬ್ ಶೆಟ್ಟಿ ಈಗ ಕಾಂತಾರ ಸಿನಿಮಾ ಮೂಲಕ ಮನೆಮಾತಾಗಿದ್ದಾರೆ. ಈ ಸಿನಿಮಾ ಭಾರತೀಯರ ಹೃದಯವನ್ನು ಗೆದ್ದಿದೆ. ಇದೀಗ ರಿಷಬ್ ಶೆಟ್ಟಿಯ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಅವರು Gulte.com ನೊಂದಿಗೆ ಮಾತನಾಡುವಾಗ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಮತ್ತು ಸಮಂತಾ ರುತ್ ಪ್ರಭು ಈ ಪೈಕಿ ನಿಮ್ಮ ನೆಚ್ಚಿನ ನಟಿ ಯಾರೆಂದು ಕೇಳಿದಾಗ ಅವರು ಕೊಟ್ಟ ಉತ್ತರ ಎಲ್ಲಡೆ ವೈರಲ್‌ ಆಗುತ್ತಿದೆ. ಅವರ ಮುಂದಿನ ಯೋಜನೆಯಲ್ಲಿ ಯಾರೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಸಂದರ್ಶಕರು ಕೇಳಿದರು. 

ಇದನ್ನೂ ಓದಿ : ಇಷ್ಟೊಂದು ಸುಂದರವಾಗಿ ಕಂಡ್ರೆ ಪಾಪ ನಮ್ಮ ಹುಡುಗ್ರ ಪಾಡೇನು ಆಶಿಕಾ?

ನಾನು ಕೀರ್ತಿ ಸುರೇಶ್ ಮತ್ತು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯಲ್ಲ. ಆದರೆ ಸಾಯಿ ಪಲ್ಲವಿ ಮತ್ತು ಸಮಂತಾ ರುತ್ ಪ್ರಭು ಅವರನ್ನು ಮೆಚ್ಚುತ್ತೇನೆ ಎಂದು ರಿಷಬ್‌ ಶೆಟ್ಟಿ ಹೇಳಿದರು. ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ರಿಷಬ್ ಶೆಟ್ಟಿ ಯಾಕೆ ಹೀಗೆ ಹೇಳಿದ್ದಾರೆ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Native Bengalureans (@nativebengalureans)

 

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ಹೊರಬಂದ ಅತ್ಯಂತ ಯಶಸ್ವಿ ತಾರೆಗಳಲ್ಲಿ ಒಬ್ಬರು ರಶ್ಮಿಕಾ. ಅವರು ಕಿರಿಕ್ ಪಾರ್ಟಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಅವರ ಪ್ರೀತಿಯು ಕೆಲವೇ ದಿನಗಳಲ್ಲಿ ಮುರಿದುಬಿತ್ತು. ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಕಾರಣಕ್ಕೆ ರಿಷಬ್‌ ಹೀಗೆ ಹೇಳಿರಬಹುದಾ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : IFFI 2022: ಗೋವಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಇಂದು ಸಂಜೆ ಪ್ರೀಮಿಯರ್ ಆಗಲಿದೆ ‘ರೆಮೋ’

ಮತ್ತೊಂದು ಕ್ಲಿಪ್ ಕೂಡ ವೈರಲ್ ಆಗುತ್ತಿದೆ. ಇದು ಕರ್ಲಿ ಟೇಲ್ಸ್‌ನ ಕಾಮ್ಯಾ ಜಾನಿ ಅವರೊಂದಿಗೆ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಸಂದರ್ಶನದ್ದಾಗಿದೆ. ನಟಿಯಾಗುವುದು ಎಂದಿಗೂ ತನ್ನ ಗುರಿಯಾಗಿರಲಿಲ್ಲ ಎಂದು ಅವರು ಹೇಳುವುದನ್ನು ಕಾಣಬಹುದು. ಪ್ರಾವಿಡೆನ್ಸ್ ಮೂಲಕ ಇಂಡಸ್ಟ್ರಿಗೆ ಬಂದೆ ಎನ್ನುತ್ತಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಅವರ ವಿಡಿಯೋ ತುಣುಕು ಸಹ ವೈರಲ್‌ ಆಗುತ್ತಿದೆ. ಅವರು ಹೇಳುತ್ತಿರುವ ಪ್ರೊಡಕ್ಷನ್ ಹೌಸ್ ಪರಂವಾ ಸ್ಟುಡಿಯೋಸ್. ಇದನ್ನು ರಕ್ಷಿತ್ ಶೆಟ್ಟಿ ಸ್ಥಾಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News