ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಟ್ರೋಲ್ (Troll) ಆಗುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಬಾಲಿವುಡ್ ನಟ ವರುಣ್ ಧವನ್ (Varun Dhawan) ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ವೈರಲ್ 'ಅರೇಬಿಕ್ ಕುತ್ತು ಚಾಲೆಂಜ್' ತೆಗೆದುಕೊಂಡಿದ್ದಾರೆ. ಇವರಿಬ್ಬರು 'ಹಲಮಿಟಿ ಹಬಿಬೋ' ಹಾಡಿಗೆ ಬೀಚ್ ಮೇಲೆ ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  


ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ತಯಾರಕರಿಗೆ J&K ಕೋರ್ಟ್ ಮಹತ್ವದ ಆದೇಶ.. ಆ ಒಂದು ದೃಶ್ಯ ತೋರಿಸದಿರಲು ಸೂಚನೆ


ಸವಾಲಿನ ಭಾಗವಾಗಿ, ಅನೇಕ ತಾರೆಯರು ಥಲಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅವರ ವೈರಲ್ ಹಾಡು 'ಹಲಮಿಟಿ ಹಬಿಬೋ'ಗೆ (Halamithi Habibo) ನೃತ್ಯ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by VarunDhawan (@varundvn)


 


ಇದರಲ್ಲಿ ಜೋಡಿಯು ಸಮುದ್ರ ದಡದಲ್ಲಿ (Beach) ಮರಳಿನ ಮೇಲೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವೇಳೆ ನಟಿ ರಶ್ಮಿಕಾ ಮಂದಣ್ಣ, ವರುಣ್ ಧವನ್ ಗೆ ಚಮಕ್ ನೀಡಿದ್ದಾರೆ. ಇದಕ್ಕೆ ಅನೇಕ ಜನ ಕಾಮೆಂಟ್ ಮಾಡಿದ್ದಾರೆ. 


ಇದನ್ನೂ ಓದಿ: ಮತ್ತೆ 'RRR' ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ.. ಮಾರ್ಚ್ 14ಕ್ಕೆ ಮತ್ತೊಂದು ಗಾನಬಜಾನ!


ತನ್ನ ಚೊಚ್ಚಲ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ, ಅಂಜನಿ ಪುತ್ರ, ಚಮಕ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಕೊನೆಯ ಬಾರಿಗೆ ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೈಸ್ ಚಿತ್ರದಲ್ಲಿ ಅಭಿನಯಿಸಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.