'ದಿ ಕಾಶ್ಮೀರ್ ಫೈಲ್ಸ್' ತಯಾರಕರಿಗೆ J&K ಕೋರ್ಟ್ ಮಹತ್ವದ ಆದೇಶ.. ಆ ಒಂದು ದೃಶ್ಯ ತೋರಿಸದಿರಲು ಸೂಚನೆ

The Kashmir Files: ಮಾರ್ಚ್​ 4ರಂದು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು.  

Written by - Chetana Devarmani | Last Updated : Mar 11, 2022, 01:44 PM IST
  • ಮಾರ್ಚ್​ 4ರಂದು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು
  • ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು
  • ಜಮ್ಮು ಮತ್ತು ಕಾಶ್ಮೀರದ ನ್ಯಾಯಾಲಯವು 'ದಿ ಕಾಶ್ಮೀರ ಫೈಲ್ಸ್' ಚಿತ್ರದ ಪ್ರವರ್ತಕರಿಗೆ ಮಹತ್ವದ ಆದೇಶ ನೀಡಿದೆ
'ದಿ ಕಾಶ್ಮೀರ್ ಫೈಲ್ಸ್' ತಯಾರಕರಿಗೆ J&K ಕೋರ್ಟ್ ಮಹತ್ವದ ಆದೇಶ.. ಆ ಒಂದು ದೃಶ್ಯ ತೋರಿಸದಿರಲು ಸೂಚನೆ title=
ದಿ ಕಾಶ್ಮೀರ್ ಫೈಲ್ಸ್

ಜಮ್ಮು ಮತ್ತು ಕಾಶ್ಮೀರದ ನ್ಯಾಯಾಲಯವು 'ದಿ ಕಾಶ್ಮೀರ ಫೈಲ್ಸ್' (The Kashmir Files)ಚಿತ್ರದ ಪ್ರವರ್ತಕರಿಗೆ ಮಹತ್ವದ ಆದೇಶ ನೀಡಿದೆ. 1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಕೊಲೆಯನ್ನು ಆಧರಿಸಿದ ಈ ಚಿತ್ರಕ್ಕೆ ಈಗ ಕೋರ್ಟ್​ನಿಂದ ನಿರ್ಬಂಧ ಎದುರಾಗಿದೆ. 

ಶುಕ್ರವಾರ ಬಿಡುಗಡೆಯಾಗಲಿರುವ ಚಲನಚಿತ್ರದಲ್ಲಿ (Movie) ಭಾರತೀಯ ಐಎಎಫ್ ಸ್ಕ್ವಾಡ್ರನ್ ಲೀಡರ್ (IAF Squadron Leader) ದಿವಂಗತ ರವಿ ಖನ್ನಾರ ಅವರ ದೃಶ್ಯಗಳನ್ನು ತೋರಿಸದಂತೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ತಂಡಕ್ಕೆ ಜಮ್ಮು ಕೋರ್ಟ್​ ನಿರ್ದೇಶನ ನೀಡಿದೆ. ದಿವಂಗತ ರವಿ ಖನ್ನಾ (Ravi Khanna) ಇರುವ ದೃಶ್ಯಗಳನ್ನು ಪ್ರದರ್ಶಿಸದಂತೆ ಗುರುವಾರ ನಿರ್ಬಂಧಿಸಿದೆ. 

ಇದನ್ನೂ ಓದಿ: ಮತ್ತೆ 'RRR' ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ.. ಮಾರ್ಚ್ 14ಕ್ಕೆ ಮತ್ತೊಂದು ಗಾನಬಜಾನ!

ಭಾರತೀಯ ವಾಯುಪಡೆಯ ಅಧಿಕಾರಿಯ ಪತ್ನಿ ನಿರ್ಮಲ್ ಖನ್ನಾ (Nirmal Khanna) ಅವರು ತಮ್ಮ ಪತಿಯನ್ನು ಸತ್ಯಕ್ಕೆ ವಿರುದ್ಧವಾಗಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕಲು ಅಥವಾ ತಿದ್ದುಪಡಿ ಮಾಡಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. "ಸಿನಿಮಾದಲ್ಲಿ ನನ್ನ ಪತಿಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಲಾಗಿದೆ. ರವಿ ಖನ್ನಾ ಅವರನ್ನು ತಪ್ಪಾದ ರೀತಿಯಲ್ಲಿ ತೋರಿಸಲಾಗಿದೆ" ಎಂದು ದೂರಿದ್ದರು. 

ಈ ಅರ್ಜಿ ವಿಚಾರಣೆ ನಡೆಸಿದ ಜಮ್ಮುವಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದೀಪಕ್ ಸೇಥಿ, "ದೂರಿನಲ್ಲಿ ಹೇಳಿರುವುದನ್ನು ಗಮನಿಸಿದ್ದೇವೆ. ರವಿ ಖನ್ನಾ ಅವರಿಗೆ ಸಂಬಂಧಿಸಿದ ದೃಶ್ಯಗಳನ್ನು ಪ್ರದರ್ಶನ ಮಾಡುವಂತಿಲ್ಲ" ಎಂದು ಆದೇಶದಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ: 'KGF-1' ರೀ ರಿಲೀಸ್‌ ಮಾಡಲು ಯಶ್ ಅಭಿಮಾನಿಗಳ ‌ಭರ್ಜರಿ ಪ್ಲ್ಯಾನ್..!

ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ, ಅನುಪಮ್​ ಖೇರ್​ (Anupam Kher) ಹಾಗೂ ಮೊದಲಾದವರು ನಟಿಸಿದ್ದಾರೆ. ರವಿ ಖನ್ನಾ ಸೇರಿ ಐಎಎಫ್​ನ ನಾಲ್ಕು ಸಿಬ್ಬಂದಿ 1990ರ ಜನವರಿ 25ರಂದು ಹುತಾತ್ಮರಾದರು. ಈ ಸಂಚಿನ ಹಿಂದೆ ಜಮ್ಮು ಕಾಶ್ಮೀರ್​ ಲಿಬರೇಷನ್​ ಫ್ರಂಟ್​ನ ಮುಖ್ಯಸ್ಥ ಯಾಸಿನ್ ಮಲಿಕ್  ಕೈವಾಡ ಇದೆ ಎನ್ನಲಾಗಿದೆ.

ಮಾರ್ಚ್​ 4ರಂದು'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ಆ ಬಳಿಕ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News