Samantha Ruth Prabhu Remuneration: ಸಮಂತಾ ರೂತ್ ಪ್ರಭು ಇಂಡಸ್ಟ್ರಿಗೆ ಬಂದು ಸುಮಾರು 12 ವರ್ಷಗಳಾಗಿವೆ. ಅವರು 2010 ರಲ್ಲಿ ಗೌತಮ್ ವಾಸುದೇವ್ ಮೆನನ್ ಅವರ ತೆಲುಗು ಚಿತ್ರ ಯೇ ಮಾಯಾ ಚೇಸವೆ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ನಾಗ ಚೈತನ್ಯ ಅಕ್ಕಿನೇನಿ ಅವರೊಂದಿಗೆ ನಟಿಸಿದರು. ಅಂದಿನಿಂದ, ಹಿಂತಿರುಗಿ ನೋಡಿದ್ದಿಲ್ಲ. ಅವರು ದಿ ಫ್ಯಾಮಿಲಿ ಮ್ಯಾನ್ 2 ನೊಂದಿಗೆ OTT ಗೆ ಪಾದಾರ್ಪಣೆ ಮಾಡಿದರು. ಅಲ್ಲಿಯೂ ತಮ್ಮ ಛಾಪು ಮೂಡಿಸಿದರು. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್‌ ಸಿನಿಮಾದಲ್ಲಿ ಮೊದಲ ಐಟಂ ಡ್ಯಾನ್ಸ್‌ ಮಾಡಿ, ಸೈ ಎನಿಸಿಕೊಂಡರು. ಬ್ಯಾಕ್-ಟು-ಬ್ಯಾಕ್ ಯಶಸ್ಸಿನ ನಂತರ, ಸಮಂತಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿದರು. ಅವರು ಈಗ ನಯನತಾರಾ ನಂತರ ದಕ್ಷಿಣದಲ್ಲಿ 2 ನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಸಮಂತಾ ಈಗ ಚಿತ್ರಗಳಿಗೆ 3 ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಪ್ರೊಡಕ್ಷನ್ ಹೌಸ್ ಮತ್ತು ಇತರ ಅಂಶಗಳ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಪುಷ್ಪಾ ಚಿತ್ರದ ಮೊದಲ ಐಟಂ ಹಾಡಿಗೆ ಸಮಂತಾ 5 ಕೋಟಿ ರೂ. ಸಂಭಾವನೆ ಪಡೆದರು.  


ಇದನ್ನೂ ಓದಿ: "ದೇವಸ್ಥಾನ ಇದೆ.. ಆದರೆ ಅದರೊಳಗೆ ಸಮಂತಾನೇ ಇಲ್ಲ" ಸ್ಯಾಮ್‌ ಟೆಂಪಲ್‌ ಫುಲ್‌ ಟ್ರೋಲ್‌ ..!


'ದಿ ಫ್ಯಾಮಿಲಿ ಮ್ಯಾನ್' ಚಿತ್ರದಲ್ಲಿನ ತನ್ನ ಪವರ್ ಫುಲ್ ಪರ್ಫಾರ್ಮೆನ್ಸ್ ಹಾಗೂ 'ಊ ಅಂಟವಾ' ಹಾಡಿನಲ್ಲಿ ಬೋಲ್ಡ್ ಡ್ಯಾನ್ಸ್ ಮೂಲಕ ಸಂಚಲನ ಸೃಷ್ಟಿಸಿದ್ದ ಸೌತ್ ನ ಸೂಪರ್ ಸ್ಟಾರ್ ಸಮಂತಾ ರುತ್ ಪ್ರಭು, ಕೆಲವು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ನಾಗಾರ್ಜುನ ಅವರ ಸೊಸೆಯಾಗಿದ್ದ ಸಮಂತಾ ಪ್ರಭು ಅವರ ಕೆಲಸ ಮತ್ತು ಅವರ ವೈಯಕ್ತಿಕ ಜೀವನದಿಂದಾಗಿ ಚರ್ಚೆಯ ವಿಷಯವಾಗಿ ಉಳಿದಿದೆ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರವೂ, ಸಮಂತಾ ಪ್ರಭು ಅವರ ಯಶಸ್ಸು ಮತ್ತು ಅವರ ಕೆಲಸವು ಹಾಗೇ ಸಾಗುತ್ತಿದೆ. 


ಈ ಬಗ್ಗೆ ಅಧಿಕೃತವಾಗಿ ಯಾವುದೇ ಅಪ್‌ಡೇಟ್ ಇಲ್ಲದಿದ್ದರೂ, ಮಾಧ್ಯಮ ವರದಿಗಳ ಪ್ರಕಾರ, ನಟಿ ಸಮಂತಾ ರುತ್ ಪ್ರಭು ಅವರ ನಿವ್ವಳ ಮೌಲ್ಯ ಸುಮಾರು 101 ಕೋಟಿ ಗೂ ಅಧಿಕ ಆಗಿದೆ. ಫಿಲ್ಮ್‌ಗೆ ಪಡೆಯುವ ಸಂಭಾವನೆ ಬಿಟ್ಟು ಕೆಲವು ಬ್ರಾಂಡ್ ಅಂಬಾಸಿಡರ್‌ ಆಗಿದ್ದು ಅಲ್ಲಿಂದಲೂ ಸಂಪಾದಿಸುತ್ತಾರೆ. ಅವರ ಆಸ್ತಿ ಮತ್ತು ಐಷಾರಾಮಿ ವಾಹನಗಳು ಈ ನಿವ್ವಳ ಮೌಲ್ಯದಲ್ಲಿ ಸೇರಿವೆ.  


ಇದನ್ನೂ ಓದಿ: ಈ ನಟಿಯನ್ನು ಒಂದು ಕಾಲದಲ್ಲಿ ದೇವತೆಯಂತೆ ಪೂಜಿಸಲಾಗುತ್ತಿತ್ತು! ಆ ಒಂದು ಫೋಟೋಶೂಟ್ ಎಲ್ಲವನ್ನೂ ಹಾಳುಮಾಡಿತು


ನಟಿ ತಮ್ಮ ಪ್ರತಿ ಚಿತ್ರಕ್ಕೆ 3 ರಿಂದ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಸಮಂತಾ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಬೃಹತ್ ಬಂಗಲೆಯನ್ನು ಹೊಂದಿದ್ದಾರೆ. ಸಮಂತಾ 2.26 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು 1.46 ಕೋಟಿ ಮೌಲ್ಯದ ಪೋರ್ಷೆ ಕೇಮನ್ ಜಿಟಿಎಸ್ ಹೊಂದಿದ್ದಾರೆ. ಸಮಂತಾ ರುತ್‌ ಪ್ರಭು ಅವರು 'ಸಾಕಿ' ಎಂಬ ಹೆಸರಿನ ತಮ್ಮದೇ ಆದ ಫ್ಯಾಷನ್ ಲೇಬಲ್ ಅನ್ನು ಹೊಂದಿದ್ದಾರೆ.  


ಇದನ್ನೂ ಓದಿ: ಲೇಡಿಸ್‌ ಮುಂದೆ ಪ್ಯಾಂಟ್ ಮೇಲೆ ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್...! ತಕ್ಷಣವೇ ಹೀಗೆ ಮಾಡೋದ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.