"ದೇವಸ್ಥಾನ ಇದೆ.. ಆದರೆ ಅದರೊಳಗೆ ಸಮಂತಾನೇ ಇಲ್ಲ" ಸ್ಯಾಮ್‌ ಟೆಂಪಲ್‌ ಫುಲ್‌ ಟ್ರೋಲ್‌ ..!

Samantha Fan : ನಟ ನಟಿಯರಿಗೆ ಫ್ಯಾನ್ಸ್‌ ಇರೋದು ಕಾಮನ್‌ ಆದರೆ ಡೈ ಹಾರ್ಡ್‌ ಪಾನ್ಸ್‌ ಇರೋದು ವಿರಳ. ನಟ ನಟಿಯರನ್ನು ದೇವರ ತರ ಪೂಜಿಸುವವರೂ ಇದ್ದಾರೆ ಅದಕ್ಕೆ ಸಾಕ್ಷಿ ಇತ್ತೀಚೆಗೆ ಅಭಿಮಾನಿಯೊಬ್ಬ ಸಮಂತಾಗೆ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾನೆ.   

Written by - Zee Kannada News Desk | Last Updated : Apr 30, 2023, 11:55 AM IST
  • ದಕ್ಷಿಣ ಭಾರತದಲ್ಲಿ ಮಾತ್ರ ಹಿರೋಯಿನ್‌ಗಳಿಗಾಗಿ ದೇವಸ್ಥಾನ ನಿರ್ಮಾಣ ಮಾಡುತ್ತಾರೆ ಅನಿಸುತ್ತೆ.
  • ಸಮಂತಾ ಅಭಿಮಾನಿಯೊಬ್ಬ ಆಕೆಯ ದೇವಸ್ಥಾನವನ್ನು ಕಟ್ಟಿಸಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.
  • ಟಾಲಿವುಡ್‌ ನಟಿಯ ದೇವಸ್ಥಾನ ಕಟ್ಟಿಸಿರುವ ಸಂದೀಪ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
"ದೇವಸ್ಥಾನ ಇದೆ.. ಆದರೆ ಅದರೊಳಗೆ ಸಮಂತಾನೇ ಇಲ್ಲ" ಸ್ಯಾಮ್‌ ಟೆಂಪಲ್‌ ಫುಲ್‌ ಟ್ರೋಲ್‌ ..!  title=

Andra Pradesh : ದಕ್ಷಿಣ ಭಾರತದಲ್ಲಿ ಮಾತ್ರ ಹಿರೋಯಿನ್‌ಗಳಿಗಾಗಿ ದೇವಸ್ಥಾನ ನಿರ್ಮಾಣ ಮಾಡುತ್ತಾರೆ ಅನಿಸುತ್ತೆ. ಹೌದು ತಮಿಳುನಾಡಿನಲ್ಲಿ ಅಭಿಮಾನಿಗಳು ಕೆಲ ನಟಿಯರಿಗೆ ದೇವಸ್ಥಾನ ಕಟ್ಟಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಖುಷ್ಬೂ, ನಿಧಿ ಅಗರ್ವಾಲ್‌, ನಯನತಾರಾ ಹಾಗೂ ನಮಿತಾಗೂ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಅದೇ ರೀತಿ ಕೆಲವು ದಿನಗಳ ಹಿಂದೆ ಸಮಂತಾ ಅಭಿಮಾನಿಯೊಬ್ಬ ಆಕೆಯ ದೇವಸ್ಥಾನವನ್ನು ಕಟ್ಟಿಸಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.

ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ಈ ರೀತಿ ದೇವಸ್ಥಾನವನ್ನು ಕಟ್ಟಿಸಿದ್ದಾನೆ ಆದರೆ ಅದು ಟ್ರೋಲಿಗರ ಕೆಂಗಣ್ಣಿಗೆ ಬಿದ್ದಿದೆ. ದೇವಸ್ಥಾನದಲ್ಲಿ ಸಮಂತಾ ಮೂರ್ತಿ ನೋಡಿ "ದೇವಸ್ಥಾನ ಇದೆ ಆದರೆ ಸಮಂತಾ ಎಲ್ಲಿ?" ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ-Pragathi Rishab Shetty: ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ...50 ವರ್ಷದ ಹಳೆಯ ಸೀರೆಯುಟ್ಟು ಕಂಗೊಳಿಸಿದ ಕಾಂತಾರ ರಾಣಿ!

ಟಾಲಿವುಡ್‌ ನಟಿಯ ದೇವಸ್ಥಾನ ಕಟ್ಟಿಸಿರುವ ಸಂದೀಪ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಅವನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಟ್ರೋಲ್‌ ಮಾಡಿ ಟಾಂಗ್‌ ನೀಡುತ್ತಿದ್ದಾರೆ. ದೇವಸ್ಥಾನವಿದೆ ಆದರೆ ಸಮಂತಾ ಎಲ್ಲಿ ಸರ್..‌, ದೇವಸ್ಥಾನ ಓಕೆ ಸಮಂತಾ ಯಾಕೆ ಇಲ್ಲ ಇಲ್ಲಿ, ಎಂದೆಲ್ಲಾ ಟ್ರೋಲ್‌ ಮಾಡುತ್ತಿದ್ದಾರೆ. 

ಆಂದ್ರಪ್ರದೇಶದ ಗುಂಟೂರಿನ ಆಲಪಾಡು ಗ್ರಾಮದ ಸಮಂತಾ ಅಪ್ಪಟ ಅಭಿಮಾನಿ ಸಂದೀಪ್‌ ಸಮಂತಾ ಹುಟ್ಟುಹಬ್ಬದಂದೇ ಸಮಂತಾ ದೇವಸ್ಥಾನವನ್ನು ಉದ್ಘಾಟನೆಯನ್ನು ಮಾಡಿದ್ದನು. ಅದ್ದೂರಿಯಾಗಿಯೇ ಕಾರ್ಯಕ್ರಮವನ್ನು ಮಾಡಿದ್ದನು. ಇದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಕೂಡಾ ಆಗಿತ್ತು. ಇದೇ ವಿಚಾರವಾಗಿ ಸ್ಯಾಮ್‌ ದೇವಸ್ಥಾನ ಕಟ್ಟಿಸಿದ ಸಂದೀಪ್‌ ಟ್ರೋಲ್‌ಗೆ ಗುರಿಯಾಗಿದ್ದಾನೆ. ಟ್ರೋಲಿಗರು " ದೇವಸ್ಥಾನ ಒಕೆ ಆದರೆ ಸಮಂತಾನೆ ಇಲ್ವಲ್ಲಾ ಅಲ್ಲಿ, ದೇವಸ್ಥಾನ ಇದೆ ಆದರೆ ಸಮಂತಾ ಎಲ್ಲಿ, ಎಂದೆಲ್ಲಾ ಟೋಲ್‌ ಮಾಡಿದ್ದಾರೆ. 

ಇದನ್ನೂ ಓದಿ-ತಮಿಳಿನ ಖ್ಯಾತ ನಟ ವಿಜಯ್ ಆಂಟೋನಿ ಸಿನಿಮಾಗೆ ಕಿಚ್ಚನ ಬಲ...ಪ್ಯಾನ್ ಇಂಡಿಯಾ ಭಿಕ್ಷುಕ-2 ಟ್ರೇಲರ್ ರಿಲೀಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News