Sameera Reddy : ʼಸ್ತನಗಳನ್ನು ಆಕರ್ಷಕವಾಗಿ ತೋರಿಸಲು ನಾನು ಪ್ಯಾಡ್ ಬಳಸಬೇಕಿತ್ತುʼ
ಇತ್ತೀಚಿಗೆ ನಟಿ ನಯನತಾರ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ನೀಡಿದ್ದ ಹೇಳಿಕೆ ಭಾರತೀಯ ಚಿತ್ರರಂಗದ ಕರಾಳತೆಯನ್ನು ಹೊರಗೆಳೆದಿತ್ತು. ಇದೀಗ, ಬಹುಭಾಷಾ ನಟಿ ಕನ್ನಡದ ʼವರದನಾಯಕʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಬಾಲಿವುಡ್‌ನ ಇನ್ನೊಂದು ಮುಖವನ್ನು ಹೊರಗೆಳೆದಿದ್ದು, ತಾವು ಅನುಭವಿಸಿದ ನೋವುಗಳನ್ನು ಸಾಲು ಸಾಲಾಗಿ ಹೇಳಿಕೊಂಡಿದ್ದಾರೆ.
Sameera Reddy : ಇತ್ತೀಚಿಗೆ ನಟಿ ನಯನತಾರ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ನೀಡಿದ್ದ ಹೇಳಿಕೆ ಭಾರತೀಯ ಚಿತ್ರರಂಗದ ಕರಾಳತೆಯನ್ನು ಹೊರಗೆಳೆದಿತ್ತು. ಇದೀಗ, ಬಹುಭಾಷಾ ನಟಿ ಕನ್ನಡದ ʼವರದನಾಯಕʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಬಾಲಿವುಡ್‌ನ ಇನ್ನೊಂದು ಮುಖವನ್ನು ಹೊರಗೆಳೆದಿದ್ದು, ತಾವು ಅನುಭವಿಸಿದ ನೋವುಗಳನ್ನು ಸಾಲು ಸಾಲಾಗಿ ಹೇಳಿಕೊಂಡಿದ್ದಾರೆ.
ಹೌದು.. ದೂರದ ಬೆಟ್ಟ ನೋಡಲು ಸುಂದರ ಎನ್ನುವಂತೆ ಬಣ್ಣದ ಲೋಕ ಥಿಯೇಟರ್‌ನಲ್ಲಿ ಸಿನಿಮಾ ನೋಡಿದಷ್ಟು ಸರಳವಲ್ಲ. ತೆರೆಯ ಹಿಂದೆ ಊಹೆಗೂ ನಿಲುಕದಂತಹ ಘಟನೆಗಳು ನಡೆದಿರುತ್ತವೆ. ಇದೀಗ ತೆರೆ ಮೇಲೆ ಅಬ್ಬರಿಸಿ ಇಂಡಿಯನ್ ಸಿನಿಮಾ ಇಂಡ್ರಸ್ಟ್ರೀಯಲ್ಲಿ ಸ್ಟಾರ್ ಆಗಿ ಮಿಂಚಿ ಸದ್ಯ ಸಿನಿರಂಗದಿಂದ ದೂರ ಉಳಿದಿರುವ ಸಮೀರಾ ರೆಡ್ಡಿ ಹೇಳಿಕೆ ಒಂದು ಬಾಲಿವುಡ್‌ನ ಕರಾಳ ಮುಖವನ್ನು ಹೊರಗೆಳೆದಿದೆ.
ಇದನ್ನೂ ಓದಿ: Nayanthara : Nayanthara : ʼಅವರು ನನ್ನನ್ನೂ ಬಿಟ್ಟಿಲ್ಲ..ʼ ಲೇಡಿಸೂಪರ್ ಸ್ಟಾರ್ ʼಲೈಂಗಿಕ ಕಿರುಕುಳʼ ಅನುಭವ..!
ದಶಕದ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದ ಚೆಲುವೆ ಸಮೀರಾ ಮುಕ್ತವಾಗಿ ಮಾತನಾಡುವ ಸ್ವಭಾವದವರು. ಕಳೆದ ಕೆಲವು ದಿನಗಳ ಹಿಂದೆ ತಮ್ಮ ಬಿಳಿ ಕೂದಲು, ಸ್ಟ್ರೆಚ್ ಮಾರ್ಕ್ಸ್ ಕುರಿತು ಒಪನ್ ಆಗಿ ಮಾತನಾಡಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದರು. ಇದೀಗ ಕಳೆದ 10 ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಅನುಭವಿಸಿದ ಕಹಿ ಘಟನೆಗಳ ಕುರಿತು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.
ಕನ್ನಡದ ವರದನಾಯಕ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ, ಅದಕ್ಕೂ ಮುಂಚೆ ಹಾಲಿವುಡ್‌ನಲ್ಲಿ ಸಖತ್ ಫೇಮಸ್. ಇದೀಗ ತಾವು ಹಿಂದಿ ಚಿತ್ರರಂಗದಲ್ಲಿ ಅನುಭವಿಸಿದ ನೋವಿನ ಕಥೆಯನ್ನು ರಿವೀಲ್ ಮಾಡಿದ್ದಾರೆ. ಸಮೀರಾ ರೆಡ್ಡಿ, 2002ರಲ್ಲಿ ಸಮೀರಾ ರೆಡ್ಡಿ, ʼಮೈನೆ ದಿಲ್ ತುಜುಕೊ ದಿಯಾʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಸಮೀರಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Sidharth Kiara wedding : ರಾಜಸ್ಥಾನ ಕೋಟೆಯಲ್ಲಿ ಫೆ.6 ರಂದು ಸಿದ್ಧಾರ್ಥ್, ಕಿರಾಯಾ ಮದುವೆ ಫಿಕ್ಸ್..!
ಇನ್ನು ಇತ್ತೀಚೆಗೆ ಸಮೀರಾ ರೆಡ್ಡಿ ಮಿಡ್‌ಡೇಗೆ ನೀಡಿದ ಸಂದರ್ಶನದಲ್ಲಿ, ಸೌಂದರ್ಯ ಹೆಚ್ಚಿಸಲು, ಸುಂದರವಾಗಿ ಕಾಣಲು ಎಲ್ಲರೂ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು. ಸ್ತನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದರು. ನಾನೂ ಸಹ ಯಾವಾಗಲೂ ಎದೆಗೆ ಪ್ಯಾಡ್ ಅನ್ನು ಧರಿಸಬೇಕಾಗಿತ್ತು. ಈ ವೇಳೆ ಸ್ತನದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ನನಗೆ ಒತ್ತಾಯ ಮಾಡಿದ್ದರು. ಆದ್ರೆ, ಒಬ್ಬ ನಟಿಯಾಗಿ ನಾನು ಇದನ್ನು ಪ್ರಶ್ನೆ ಮಾಡಿದ್ದೆ. ನಾನು ಸ್ತನ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಳ್ಳಲಿಲ್ಲ ಎಂದು ಬಾಲಿವುಡ್ ಕರಾಳತೆಯನ್ನು ಸಮೀರಾ ಬಿಚ್ಚಿಟ್ಟರು. ಅಲ್ಲದೆ ಎಷ್ಟೋ ಬಾರಿ ಅವರು ತಮ್ಮ ದೇಹದ ನೋಟವನ್ನು ಕಾಪಾಡಿಕೊಳ್ಳಲು ಒಂದು ʼಇಡ್ಲಿʼ ಮಾತ್ರ ತಿನ್ನುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.