ಬೆಂಗಳೂರು: ಬಾಲಿವುಡ್ ನಟಿ ಸಮೀರಾ ರೆಡ್ಡಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯನ್ನು ಹತ್ತಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

ಅಷ್ಟಕ್ಕೂ ಅವರು ಏಕಾಂಗಿಯಾಗಿ ಈ ಶಿಖರವನ್ನು ಹತ್ತಿದ್ದರೆ ಅದು ಆಶ್ಚರ್ಯವಾಗುತ್ತಿರಲಿಲ್ಲ, ಆದರೆ ಅವರು ತನ್ನ ಎರಡು ತಿಂಗಳ ಮಗು ನೈರಾಳೊಂದಿಗೆ ಹತ್ತುವ ಮೂಲಕ ಅಭಿಮಾನಿಗಳಿಗೆ ಥ್ರಿಲ್ ಆಗುವಂತೆ ಮಾಡಿದ್ದಾರೆ. ಈಗ ಅವರು ಶಿಖರ್ ಹತ್ತುತ್ತಿರುವ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  



'ನೈರಾಳೊಂದಿಗೆ ಮುಳ್ಳಯ್ಯನಗಿರಿ ಏರಲು ಪ್ರಯತ್ನಿಸಿದೆ. ಮಧ್ಯದಲ್ಲಿ ನನಗೆ ದಣಿವಾಗಿದ್ದರಿಂದಾಗಿ ಸ್ವಲ್ಪಹೊತ್ತು ನಿಂತೆ, ಕರ್ನಾಟಕದಲ್ಲಿಯೇ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ 6300 ಅಡಿ ಎತ್ತರವಿದೆ'ಎಂದು ಸಮೀರಾ ಬರೆದಿದ್ದಾರೆ. ಈಗ ಅವರ ಪೋಸ್ಟ್ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಹೊಸ ಅಮ್ಮಂದಿರು ಇದರಿಂದ ಪ್ರೇರಿತರಾಗಿದ್ದಾರೆ, ನನ್ನ ಪ್ರಯಾಣ ಅವರಿಗೆ ಸಕಾರಾತ್ಮಕ ಪ್ರಭಾವ ಬಿರಿದೆ ಎಂದು ತಿಳಿದುಕೊಳ್ಳಲು ರೋಮಾಂಚನವಾಗುತ್ತದೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ.