Sana Khan : ಬಿಗ್ ಬಾಸ್ ಹಿಂದಿ ಸೀಸನ್‌ 6 ಖ್ಯಾತಿಯ ಸನಾ ಖಾನ್ ಮತ್ತು ಅವರ ಪತಿ ಅನಸ್ ಸೈಯದ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ತಮ್ಮ Instagram ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ, “ಸರ್ವಶಕ್ತನಾದ ಅಲ್ಲಾಹನ ಆಶೀರ್ವಾದದೊಂದಿಗೆ, ಮೂವರು ಇರುವ ನಮ್ಮ ಕುಟುಂಬಕ್ಕೆ ನಾಲ್ಕನೇ ಸಂತೋಷ ಆಗಮಿಸುತ್ತಿದೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಕಾಯುತ್ತಿದ್ದಾನೆ. ಪ್ರೀತಿಯ ಅಲ್ಲಾ ನಮಗೆ ಒಳ್ಳೆಯದನ್ನ ಮಾಡಲಿ" ಎಂದು ಬರೆದುಕೊಂಡಿದ್ದಾರೆ.. 


COMMERCIAL BREAK
SCROLL TO CONTINUE READING

2012 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿಗ್ ಬಾಸ್ 6 ರ ನಂತರ ಸನಾ ಖಾನ್ ಮುನ್ನೆಲೆಗೆ ಬಂದರು. ನಟಿ ವಜಾ ತುಮ್ ಹೋ, ಜೈ ಹೋ ಮತ್ತು ಹಲ್ಲಾ ಬೋಲ್ ಸೇರಿದಂತೆ ಹಲವಾರು ಬಾಲಿವುಡ್ ಚಲನಚಿತ್ರಗಳ ನಟಿಸಿದ್ದಾರೆ. ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 6 ಮತ್ತು ಝಲಕ್ ದಿಖ್ಲಾ ಜಾ 7 ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ:42 ವರ್ಷದಲ್ಲಿ 500 ಕ್ಕೂ ಹೆಚ್ಚು ಸಿನಿಮಾ, 400 ಕೋಟಿ ಆಸ್ತಿಗೆ ಒಡೆಯ.. ಆದರೆ ಈಗಲೂ ಬಾಡಿಗೆ ಮನೆಯಲ್ಲೇ ಬದುಕುತ್ತಿದ್ದಾರೆ ಈ ಸ್ಟಾರ್‌ ಹೀರೋ!



2020 ರಲ್ಲಿ, ಸನಾ ಸಿನಿರಂಗವನ್ನು ತೊರೆಯುವುದಾಗಿ ನಿರ್ಧರಿಸಿದರು. ಮುಸ್ಲಿಂ ಧರ್ಮಗುರು ಮತ್ತು ಉದ್ಯಮಿ ಅನಾಸ್ ಸೈಯದ್ ಅವರನ್ನು ನವೆಂಬರ್ 2020 ರಲ್ಲಿ ನಿಕಾಹ್ ಸಮಾರಂಭದಲ್ಲಿ ವಿವಾಹವಾದರು. ದಂಪತಿಗಳು ಜುಲೈ 5, 2023 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.