Yuva Rajkumar: ಸದ್ಯಕ್ಕೆ ರಾಜ್ಯದಲ್ಲಿ ಸೆಲೆಬ್ರಿಟಿಗಳ ವಿಚ್ಛೇದನ ಸುದ್ದಿಗಳದ್ದೇ ಕಾರುಬಾರು. ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ನಿವೇದಿತಾ ಹಾಗೂ ಚಂದನ್‌ ಡಿವೋರ್ಸ್‌ನ ನಂತರ ಸದ್ದು ಮಾಡುತ್ತಿರುವ ಸುದ್ದಿ ಎಂದರೆ ಅದು ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ.


COMMERCIAL BREAK
SCROLL TO CONTINUE READING

ಮಾನಸಿಕ ಕ್ರೌರ್ಯ ಹಾಗೂ ಅಗೌರವದ ಆರೋಪಗಳನ್ನ ಹೊರಸಿ ಯುವ ರಾಜ್‌ಕುಮಾರ್‌ ಶ್ರೀದೇವಿ ಭೈರಪ್ಪರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾತನಾಡಿದ ಯುವ ಪರ ವಕೀಲರು, ಶ್ರೀದೇವಿ ನಡೆ ನುಡಿಯ ಕುರಿತು ಅನುಮಾನ ಇರುವ ಕಾರಣ ಯುವ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು.


ಇದನ್ನೂ ಓದಿ: ನಟ ಯುವರಾಜ್ ಕುಮಾರ್‌ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ...


ಇದಕ್ಕೆ ಉತ್ತರವಾಗಿ ಶ್ರೀದೇವಿ ಭೈರಪ್ಪ ಪರ ವಕೀಲರು, ಯುವರಾಜ್‌ಕುಮಾರ್‌ಗೆ ನಟಿ ಸಪ್ತಮಿ ಗೌಡ ಅವರೊಂದಿಗೆ ಸಂಬಂಧ ಇದೆ ಎಂದು ಆರೋಪ ಮಾಡಿದ್ದರು. ಯುವರಾಜ್‌ಕುಮಾರ್‌ ಹಾಗೂ ಶ್ರೀದೇವಿಯ ವಿಚ್ಛೇದನದ ನಡುವೆ ತಮ್ಮ ಹೆಸರನ್ನು ದುರ್ಬಳಕ್ಕೆ ಮಾಡಿಕೊಂಡಿದ್ದಾರೆಂಬುದು ಸಪ್ತಮಿ ಗೌಡ ಆರೋಪವಾಗಿದೆ.


ಇದೀಗ ಸಪ್ತಮಿ ಗೌಡ ಇದೇ ವಿಚಾರಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಶ್ರೀದೇವಿ ಹಾಗೂ ಅವರ ಪರ ವಕೀಲರ ವಿರುದ್ಧ ನಿರ್ಭಂದಕಾಜ್ಞೆ ನೀಡುವಂತೆ ಕೋರ್ಟ್‌ ಬಳಿ ಮನವಿ ಮಾಡಿದ್ದಾರೆ. ಸಪ್ತಮಿ ಗೌಡ ಅವರ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ ನೋಟಿಸ್‌ ಜಾರಿ ಮಾಡುವಂತೆ ಆದೇಶೀಸಿದೆ. 


ಇದನ್ನೂ ಓದಿ: ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!


ಸಪ್ತಮಿ ಗೌಡ ಯುವ ಸಿನಿಮಾದಲ್ಲಿ ಯುವರಾಜ್‌ಕುಮಾರ್‌ಗೆ ಜೋಡಿಯಾಗಿ ನಟಿಸಿದ್ದರು. ಸದ್ಯಕ್ಕೆ ವಾದ ವಿವಾದಗಳ ಮಧ್ಯೆ ಚರ್ಚೆಯಲ್ಲಿರುವ ಯುವ ಹಾಗೂ ಶ್ರೀದೇವಿ ವಿಚ್ಛೇದನ ಪ್ರಕರಣ ಮುಂದೆ ಯಾವ ತಿರುವು ಪಡೆಯಲಿದೆ ಎಂದು ಕಾದು ನೊಡಬೇಕಿದೆ.