Tharun Sudhir-Sonal Monthero: ಕನ್ನಡ ಪ್ರಖ್ಯಾತ ನಟ ಸುಧೀರ್ ಮತ್ತು ಮಾಲತಿ ಸುಧೀರ್ ಪುತ್ರ, ಖ್ಯಾತ ಚಲನಚಿತ್ರ ನಿರ್ಮಾಪಕ ತರುಣ್ ಸುಧೀರ್ ಆಗಸ್ಟ್ 11 ರಂದು ನಟಿ ಸೋನಲ್‌ ಮೊಂಥೆರೋ ಅವರನ್ನು ಮದುವೆಯಾಗಲಿದ್ದಾರೆ. ತರುಣ್ ಸುಧೀರ್ ತಮ್ಮ ಅಭಿಮಾನಿಗಳು ಮತ್ತು ಉದ್ಯಮದ ಸಹೋದ್ಯೋಗಿಗಳೊಂದಿಗೆ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  "ಆತ 3 ಮದುವೆ ವಿಚಾರ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ"- ಖ್ಯಾತ ನಟಿ ಸೆನ್ಸೇಷನಲ್ ಹೇಳಿಕೆ


ಕೆಲ ದಿನಗಳ ಹಿಂದೆ, ತರುಣ್ ಸುಧೀರ್ ತಾಯಿ, ತಮ್ಮ ಮಗನ ಮದುವೆಯ ಯೋಜನೆಗಳ ಬಗ್ಗೆ ಮಾತನಾಡಿದ್ದರು. “ಅವರು ಮದುವೆಯಾಗುತ್ತಿರುವುದು ನಿಜ, ಆದರೆ ದಿನಾಂಕಗಳನ್ನು ಇನ್ನೂ ಖಚಿತಪಡಿಸಿಲ್ಲ. ದುಬೈನಲ್ಲಿರುವ ಸೋನಾಲ್ ಸಂಬಂಧಿಕರು ಬರಬೇಕಿದೆ. ಇದು ಆಷಾಢ ಮಾಸವಾದ್ದರಿಂದ ಎಲ್ಲವನ್ನೂ ತಡೆಹಿಡಿದಿದ್ದೇವೆ. ಒಂದೆರಡು ತಿಂಗಳಲ್ಲಿ ಮದುವೆ ನಡೆಯಲಿದೆ ಎಂದುಕೊಂಡಿದ್ದೇವೆ" ಅಂತಾ ಈ ಹಿಂದೆ ಹೇಳಿದ್ದರು. 


ನಟಿ ಸೋನಲ್‌ ಮೊಂಥೆರೋ ಮೊದಲು ಮಾಡೆಲ್ ಆಗಿ ಮನ್ನಣೆ ಗಳಿಸಿದರು. ಅಂದಹಾಗೆ ಇವರ ಹಿನ್ನೆಲೆ ನೋಡುವುದಾದರೆ, ಈಕೆ ಮಂಗಳೂರು ಮೂಲದವರು. ತುಳು ಸಿನಿಮಾ ʼಎಕ್ಕಸಕʼದ ಮೂಲಕ ಸಿನಿರಂಗ ಪ್ರವೇಶಿಸಿದ ಇವರು, ಅದಕ್ಕೂ ಮೊದಲು ಆಲ್ಬಂ ಸಾಂಗ್‌ʼಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡ ಸಿನಿಮಾ ವಿಚಾರವನ್ನು ನೋಡುವುದಾದರೆ, ಅಭಿಸಾರಿಕೆ, ಪಂಚತಂತ್ರ,  ಡೆಮೊ ಪೀಸ್, ರಾಬರ್ಟ್, ಮತ್ತು ಬನಾರಸ್ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ:  ಅಂತಾರಾಷ್ಟ್ರೀಯ ಹಾಕಿ'ಗೆ ಸ್ಟಾರ್‌ ಗೋಲ್‌ ಕೀಪರ್‌ ಪಿ.ಆರ್ ಶ್ರೀಜೇಶ್ ನಿವೃತ್ತಿ


ಸೋನಾಲ್ ಓದಿದ್ದು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ. ಅಧ್ಯಯನದ ಸಮಯದಲ್ಲೇ ಮಾಡೆಲಿಂಗ್ ಕಡೆ ಗಮನಹರಿಸಿದ್ದ ಸೋನಲ್‌,  ಮಿಸ್ ಬ್ಯೂಟಿಫುಲ್ ಸ್ಮೈಲ್ 2013, ಮಿಸ್ ಕೊಂಕಣ್ 2015 ಪ್ರಶಸ್ತಿ ಗೆದ್ದಿದ್ದರು. "ಅಂಜೇ ಸರ್ಕೆನ್ ಚೆಡುನ್" ಕೊಂಕಣಿ ಆಲ್ಬಮ್ ಸಾಂಗ್ʼನಲ್ಲಿ ಮೊದಲು ಕಾಣಿಸಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ