Rajinikanth Birthday : ʼಸೂಪರ್‌ ಸ್ಟಾರ್‌ ರಜನಿಕಾಂತ್‌ʼ ಈ ಹೆಸರು ಕೇಳಿದ್ರೆ ಅಭಿಮಾನಿಗಳ ಹೃದಯದಲ್ಲಿ ಮಿಂಚಿನ ಸಂಚಲನ ಉಂಟಾಗುತ್ತದೆ. ಕಣ್ಮುಂದೆ ಸ್ಟೈಲ್‌ ಮಾಂತ್ರಿಕನ ಮುಖ ಕಾಣಿಸುತ್ತದೆ. ಬಸ್‌ ನಿರ್ವಾಹಕನಾಗಿದ್ದ ಒರ್ವ ವ್ಯಕ್ತಿ ಇಂದು ಕೋಟ್ಯಾಂತರ ಅಭಿಮಾನಿಗಳ ಹೃದಯದ ಒಡೆಯನಾಗಿ ಮೆರೆಯುತ್ತಿದ್ದಾರೆ. ಅಷ್ಟು ಎತ್ತರವೂ ಅಲ್ಲ, ಬಾಲಿವುಡ್‌ ನಟರಂತೆ ಸಿಕ್ಸ್ ಪ್ಯಾಕ್ ಹಾಗೂ ಬಣ್ಣವೂ ಇಲ್ಲ. ಆದರೆ ಅವರ ಸ್ಟೈಲ್‌, ನಟನೆ ಅವರನ್ನು ಬಹುದೊಡ್ಡ ನಟನನ್ನಾಗಿ ಮಾಡಿತು. ಇಂದು ಯುವ ನಟರೂ ಸಹ ರಜನಿ ಮುಂದೆ ಶೂನ್ಯ.


COMMERCIAL BREAK
SCROLL TO CONTINUE READING

ಹೌದು.. ತಲೈವಾ ರಜನಿಗೆ 75ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಇನ್ನೂ ಅವರ ಸ್ಟೈಲ್‌, ಸ್ಮೈಲ್‌ ಮಾಸಿಲ್ಲ. ಅವರ ಸಿನಿಮಾ ಬಿಡುಗಡೆಯಾಗುವ ತಿಂಗಳ ಮೊದಲೇ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲೇಡೆ ಸಂಭ್ರಮಾಚರಣೆ ಶುರುವಾಗುತ್ತದೆ. ಐಟಿ, ಬಿಟಿ ಕಂಪನಿಗಳಿಗೂ ರಜೆ ಕೊಡಿಸುವ ಕ್ರೇಜ್ ಅವರ ಸಿನಿಮಾಗಳಿಗಿದೆ. ಏಕೆಂದರೆ ರಜಿನಿ ಅಷ್ಟೊಂದು ಸ್ಟಾರ್ ಡಮ್ ಹೊಂದಿರುವ ವಿಶೇಷ ವ್ಯಕ್ತಿ. 


ಇದನ್ನೂ ಓದಿ: ರಿಷಬ್‌ ಮೇಲೆ ನವಾಜುದ್ದೀನ್ ಸಿದ್ದಿಕಿಗೆ ಅಸೂಯೆ : ದೊಡ್ಡ ಸ್ಟಾರ್‌ಗೆ ಏಕೆ ಇಂತ ಬುದ್ಧಿ..!


ರಜನಿಕಾಂತ್ ಅವರು ಡಿಸೆಂಬರ್ 12, 1950 ರಂದು ಮರಾಠಿ ಕುಟುಂಬದಲ್ಲಿ ಜನಿಸಿದರು. ರಜಿನಿ ಮೊದಲ ಹೆಸರು ಶಿವಾಜಿ ರಾವ್ ಗಾಯಕವಾಡ. ರಜನಿಕಾಂತ್ ಅವರಿಗೆ ನಾಲ್ವರು ಒಡಹುಟ್ಟಿದವರಿದ್ದಾರೆ. ಅದರಲ್ಲಿ ಇವರು ಮೂರನೇಯವರು. ರಜನಿಕಾಂತ್ ಅವರ ತಂದೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್. ತಾಯಿ ಜೀಜಾಬಾಯಿಯ ಇವರು ಚಿಕ್ಕವಳಿದ್ದಾಗ ತೀರಿಕೊಂಡರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ರಜನಿಕಾಂತ್ ಆರಂಭದಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅದರ ನಂತರ ಅವರು ಕೂಲಿಯಾಗಿ ಸರಕು ಎತ್ತಿದರು. ಆದಾಯದ ಕೊರತೆಯಿಂದ ಬಡಗಿ ಕೆಲಸ ಆರಂಭಿಸಿದರು. ಆ ನಂತರ ಕಷ್ಟಪಟ್ಟು ಬಿಟಿಎಸ್ ನಲ್ಲಿ ಬಸ್ ಕಂಡಕ್ಟರ್ ಕೆಲಸ ಗಿಟ್ಟಿಸಿಕೊಂಡರು. ಬಸ್ಸಿನಲ್ಲಿ ಟಿಕೆಟ್ ಮಾರಿ, ಶಿಳ್ಳೆ ಹೊಡೆದು ಪ್ರಯಾಣಿಕರಿಗೆ ಮನರಂಜನೆ ನೀಡುತ್ತಿದ್ದರು.


ರಜನಿಕಾಂತ್ ರಾಮಕೃಷ್ಣ ಮಠದಲ್ಲಿ ಓದುತ್ತಿದ್ದಾಗ ವೇದ-ಪುರಾಣಂ ನಾಟಕಗಳಲ್ಲಿ ನಟಿಸುತ್ತಿದ್ದರು. ಅಂದಿನಿಂದ ನಟನೆಯಲ್ಲಿ ಆಸಕ್ತಿ ಮೂಡಿತು. ಕಂಡಕ್ಟರ್ ಕೆಲಸ ಬಿಟ್ಟು ಮದ್ರಾಸ್ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ನಟನೆ ಕಲಿಯಲು ಆರಂಭಿಸಿದರು. ನಾಟಕದಲ್ಲಿ ದುರ್ಯೋಧನನ ಪಾತ್ರದಲ್ಲಿ ನಟಿಸಿ ನಿರ್ದೇಶಕ ಕೆ.ಬಾಲಚಂದ್ರನ್ ಅವರನ್ನು ಮೆಚ್ಚಿಸಿದರು. ಕಮಲ್ ಹಾಸನ್ ಅಭಿನಯದ 'ಅಪೂರ್ವ ರಾಗಂಗಲ್' ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಸಿನಿಮಾದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು.. ತಮ್ಮ ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳ ಮೂಲಕ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದರು.


ಇದನ್ನೂ ಓದಿ: ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ


ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ಹಿಡಿದು ಬಾಲಿವುಡ್ ಚಿತ್ರಗಳವರೆಗೆ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಆ ಕಾಲದ ಚೆಲುವೆ ಶ್ರೀದೇವಿಯೊಂದಿಗೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು. ಇಬ್ಬರೂ ಸುಮಾರು 25 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ರಜನಿಕಾಂತ್ ಅವರ ಆರೋಗ್ಯ ಸರಿಯಿಲ್ಲದಿದ್ದಾಗ ಶ್ರೀದೇವಿ ಏಳು ದಿನಗಳ ಕಾಲ ಉಪವಾಸ ಮಾಡಿದರು. 2011ರಲ್ಲಿ ರಜನಿಕಾಂತ್ ತಮ್ಮ 'ರಾಣಾ' ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಆ ವೇಳೆಗೆ ಅವರ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಈ ವಿಷಯ ಶ್ರೀದೇವಿಗೆ ತಿಳಿದಾಗ ತುಂಬಾ ನೋವಾಯಿತು. 


ರಜನಿಕಾಂತ್ ಅವರ ಆರೋಗ್ಯ ಸುಧಾರಿಸಲು ಅವರು ಶಿರಡಿಗೆ ಹೋಗಲು ನಿರ್ಧರಿಸಿದರು. ಶಿರಡಿಗೆ ಭೇಟಿ ನೀಡಿದ ನಂತರ.. ರಜನಿಕಾಂತ್ ಆರೋಗ್ಯ ಸರಿಯಾಗಲೆಂದು ಶ್ರೀದೇವಿ 7 ದಿನ ಉಪವಾಸ ಮಾಡಿದರು. ಆ ನಂತರ ರಜನಿಕಾಂತ್ ಸಂಪೂರ್ಣವಾಗಿ ಚೇತರಿಸಿಕೊಂಡು ಭಾರತಕ್ಕೆ ಮರಳಿದರು. ರಜನಿಕಾಂತ್ ಮನೆಗೆ ಹಿಂದಿರುಗಿದ ತಕ್ಷಣ, ಶ್ರೀದೇವಿ ತನ್ನ ಪತಿ ಬೋನಿ ಕಪೂರ್ ಜೊತೆ ರಜನಿಕಾಂತ ಅವರನ್ನು ಭೇಟಿಯಾಗಿ ಮಾತನಾಡಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಸ್ವತಃ ಸೂಪರ್‌ಸ್ಟಾರ್ ಹೇಳಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.