ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ

Swati Muttina Male Haniye : ರಾಜ್‌ ಬಿ ಶೆಟ್ಟಿ ನಿರ್ದೇಶನದ ಮೂರನೇ ಸಿನಿಮಾವನ್ನು ನಟಿ ರಮ್ಯಾ ನಿರ್ಮಾಣ ಮಾಡುತ್ತಿದ್ದರು. ಈ ಚಿತ್ರಕ್ಕೆ"ಸ್ವಾತಿ ಮುತ್ತಿನ ಮಳೆ ಹನಿಯೇ" ಎಂಬ ಟೈಟಲ್‌ ಇಡಲಾಗಿತ್ತು. ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.   

Written by - Chetana Devarmani | Last Updated : Dec 12, 2022, 03:31 PM IST
  • ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರ
  • "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ
  • ರಾಜ್‌ ಬಿ ಶೆಟ್ಟಿ ನಿರ್ದೇಶನದ ಮೂರನೇ ಸಿನಿಮಾ
ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ title=
ಸ್ವಾತಿ ಮುತ್ತಿನ ಮಳೆ ಹನಿಯೇ

Swati Muttina Male Haniye : ನಟಿ ರಮ್ಯಾ ನಿರ್ಮಾಣದ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ರಾಜ್‌ ಬಿ ಶೆಟ್ಟಿ ನಿರ್ದೇಶನದ ಮೂರನೇ ಸಿನಿಮಾವನ್ನು ನಟಿ ರಮ್ಯಾ ನಿರ್ಮಾಣ ಮಾಡುತ್ತಿದ್ದರು. ಈ ಚಿತ್ರಕ್ಕೆ"ಸ್ವಾತಿ ಮುತ್ತಿನ ಮಳೆ ಹನಿಯೇ" ಎಂಬ ಟೈಟಲ್‌ ಇಡಲಾಗಿತ್ತು. ರಮ್ಯಾ ಈ ಸಿನಿಮಾ ಮೂಲಕ ಮತ್ತೆ ನಟನೆಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟಿ ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ 'ಆಪಲ್ ಬಾಕ್ಸ್ ಸ್ಟುಡಿಯೊ' ಮೂಲಕ ಈ ಚಿತ್ರವನ್ನು ಪ್ರೊಡ್ಯೂಸ್‌ ಮಾಡುವುದಾಗಿ ಘೋಷಿಸಿದರು. 

ಇದನ್ನೂ ಓದಿ : Shruti Haasan Breakup : ಬ್ರೇಕಪ್ ಫೀಲಿಂಗ್‌ನಲ್ಲಿದ್ದಾರಾ ನಟಿ ಶ್ರುತಿ ಹಾಸನ್? ಯಾರಾನಾ ಸಾಂತ್ವನ ಹೇಳ್ರಪ್ಪೋ!

ಈ ಸಿನಿಮಾದ ಶೂಟಿಂಗ್‌ ಸಹ ಮುಕ್ತಾಯಗಂಡಿದೆ. ಕೇವಲ ಹದಿನಾರು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿದೆ. ಆದರೆ ಇದೀಗ ಈ ಸಿನಿಮಾಗೆ ಸಂಕಷ್ಟ ಎದುರಾಗಿದೆ. ರಮ್ಯಾ ನಿರ್ಮಾಣ ಮಾಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೆ ಚಿತ್ರದ ಶೀರ್ಷಿಕೆ ವಿರುದ್ಧ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ದೂರು ಸಲ್ಲಿಸಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಯಾರಿಗೂ ಸಹ ನೀಡಬಾರದು ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಮ್ಮ ವಕೀಲರ ಮೂಲಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ನೋಟಿಸ್‌ ನೀಡಿದ್ದಾರೆ. ವಕೀಲ ಎಸ್ ಆರ್ ಶ್ರೀನಿವಾಸ್ ಮೂರ್ತಿ ಮೂಲಕ ನೋಟಿಸ್‌ ನೀಡಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಯಾರಿಗೂ ಸಹ ನೀಡಬಾರದು. ಈ ಶೀರ್ಷಿಕೆ ನೀಡಿದ್ರೆ ಕೃತಿ ಚೌರ್ಯವಾಗುತ್ತೆ. ಈ ಹಿಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ಮಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಶೂಟಿಂಗ್ ಶೇಕಡಾ 80ರಷ್ಟು ಮುಗಿದಿತ್ತು ಎಂದು ನೋಟಿಸ್‌ನಲ್ಲಿಉಲ್ಲೇಖಿಸಲಾಗಿದೆ.

ಇದನ್ನೂ ಓದಿ : Trending Video : ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದ ನಟಿ.! ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್‌ ಗುರು?

ಈ ಸಿನಿಮಾದಲ್ಲಿ ಹಿರಿಯ ನಟ ಅಂಬರೀಶ್, ಸುಹಾಸಿನಿ ಸೇರಿದಂತೆ ಅನೇಕ ತಾರೆಯರು ಅಭಿನಯಿಸಿದ್ದರು. ಆದರೆ ನಟ ಅಂಬರೀಶ್ ವಿಧಿವಶರಾದ ಕಾರಣ ಚಿತ್ರದ ಶೂಟಿಂಗ್‌ ನಿಂತಿತ್ತು. ಈ ವಿಚಾರವನ್ನು ಸಹ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ "ಸ್ವಾತಿ ಮುತ್ತಿನ ಮಳೆ ಹನಿಯೇ" ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶಿಸಿದ ಬಣ್ಣದ ಗೆಜ್ಜೆ ಸಿನಿಮಾ ಹಾಡಿನ ಟೈಟಲ್‌ ಕೂಡ ಹೌದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News