Tamannaah Bhatia house : ಮಿಲ್ಕ್ ಬ್ಯೂಟಿ ತಮನ್ನಾ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಸಧ್ಯ ನಟಿ ಮುಂಬೈನಲ್ಲಿರುವ ತಮ್ಮ ಫ್ಲಾಟ್ ಅನ್ನು ಇಂಡಿಯನ್ ಬ್ಯಾಂಕ್‌ನಲ್ಲಿ ಸುಮಾರು 7 ಕೋಟಿ ರೂಪಾಯಿಗಳಿಗೆ ಅಡಮಾನ ಇಟ್ಟಿರುವ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಹಲವು ರೀತಿಯಲ್ಲಿ ಹಣ ಸಂಪಾದಿಸುವ ನಟಿಯ ಈ ಸ್ಥಿತಿಗೆ ಕಾರಣವೇನು..? ಎಂಬುವುದಾಗಿ ಸಾಕಷ್ಟು ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.. 


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ಹುಟ್ಟಿ ಬೆಳೆದರೂ ನಟಿ ತಮನ್ನಾಗೆ ಹೆಚ್ಚಾಗಿ ಮಿಂಚಿದ್ದು, ಸೌತ್‌ ಸಿನಿರಂಗದಲ್ಲಿ. ಸದ್ಯ ಹಿಂದಿಯಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದರೂ ಆಗಾಗ ಒಂದಷ್ಟು ದಕ್ಷಿಣ ಸಿನಿಮಾಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೊನೆಯದಾಗಿ ಕೆಜೆಎಫ್‌ ಸಿನಿಮಾದ ಹಾಡೋಂದರಲ್ಲಿ ನಟಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ:ಇತಿಹಾಸ ಸೃಷ್ಟಿಸಿದ ನಟಿ ಪವಿತ್ರ ಗೌಡ..! ಗೂಗಲ್‌ನಲ್ಲಿ ಈಕೆಯದ್ದೇ ಫುಲ್‌ ಹವಾ.. ಏಕೆ ಗೊತ್ತಾ..?


ಅಂದಹಾಗೆ, ಸುಂದರ್ ಸಿ ನಿರ್ದೇಶನದಲ್ಲಿ ತಮನ್ನಾ ನಾಯಕಿಯಾಗಿ ನಟಿಸಿದ್ದ 'ಅರ್ಮನ್ನೈ 4' ಚಿತ್ರಕ್ಕೆ ಅಭಿಮಾನಿಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ತಮನ್ನಾ ಇಬ್ಬರು ಮಕ್ಕಳ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ ರೂ 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ. 


ನಟಿ ತಮನ್ನಾ 15 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದು, ಇದೀಗ ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಸಧ್ಯ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದು... ಮನೆಯಲ್ಲಿ ತಂದೆ-ತಾಯಿ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ:19ರ ಹರೆಯದಲ್ಲೇ ಟೈಗರ್‌ ಪ್ರಭಾಕರ್‌ ಜೊತೆ ಮದುವೆ, 4ನೇ ಹೆಂಡತಿಯಂತ ತಿಳಿದು ಗರ್ಭಿಣಿಯಾಗಿದ್ದಾಗ ಡಿವೋರ್ಸ್‌..!


ತಮನ್ನಾ ಈ ವರ್ಷ ಅಥವಾ ಮುಂದಿನ ವರ್ಷ ವಿಜಯ್ ವರ್ಮಾ ಅವರನ್ನು ಮದುವೆಯಾಗುವ ನಿರೀಕ್ಷೆಯಿದೆ. ಆದರೆ ಹಠಾತ್ ಆರ್ಥಿಕ ತೊಂದರೆಯಿಂದ ತಮನ್ನಾ ಮುಂಬೈನ ಅಂಧೇರಿ ವೆಸ್ಟ್ ವೀರ ದೇಸಾಯಿ ರಸ್ತೆಯಲ್ಲಿರುವ ತಮ್ಮ ಸ್ವಂತ ಫ್ಲ್ಯಾಟ್ ಅನ್ನು ಅಡಮಾನವಿಟ್ಟು ಇಂಡಿಯನ್ ಬ್ಯಾಂಕ್‌ನಿಂದ ₹ 7.84 ಕೋಟಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.. ಆದರೆ ಇದು ಅಧಿಕೃತವಲ್ಲ..


ಅಲ್ಲದೆ, ಮುಂಬೈನ ಜುಕು ಪ್ರದೇಶದಲ್ಲಿರುವ 6065 ಚದರ ಅಡಿ ವಿಸ್ತೀರ್ಣದ ತಮ್ಮ ಕಚೇರಿಯನ್ನು 18 ಲಕ್ಷ ರೂ.ಗೆ ಬಾಡಿಗೆಗೆ ನೀಡಿದ್ದಾರಂತೆ. ಕಚೇರಿಗೆ ಮುಂಗಡವಾಗಿ 27 ಲಕ್ಷ ಪಡೆದಿದ್ದು, ಐದು ವರ್ಷಗಳ ಬಾಡಿಗೆ ಒಪ್ಪಂದವಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ:ಖ್ಯಾತ ನಟಿಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ʼಲೈಂಗಿಕ ಕ್ರಿಯೆʼ ಮಾಡುವಂತೆ ಕರೆ..! ಮುಂದೆನಾಯ್ತು..?


ನಟನೆಯಿಂದ ಬಂದ ಹಣವನ್ನು ತಮನ್ನಾ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದು, ತಮನ್ನಾ ಸ್ವಂತ ಆಭರಣ ಮಳಿಗೆಯನ್ನೂ ಹೊಂದಿದ್ದಾರೆ. ಕೆಲ ವ್ಯವಹಾರಗಳಲ್ಲಿ ನಷ್ಟ ಕಂಡಿದ್ದು, ಹಣದ ಅವಶ್ಯಕತೆಯಿಂದ ಮನೆಯನ್ನು 7 ಕೋಟಿಗೆ ಅಡಮಾನವಿಟ್ಟಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಕುರಿತು ನಟಿ ಯಾವುದೇ ಹೇಳಿಕೆ ನೀಡಿಲ್ಲ.. ಜಸ್ಟ್‌ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರಷ್ಟೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.