ಖ್ಯಾತ ನಟಿಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ʼಲೈಂಗಿಕ ಕ್ರಿಯೆʼ ಮಾಡುವಂತೆ ಕರೆ..! ಮುಂದೆನಾಯ್ತು..?

Casting couch : ಜನಪ್ರಿಯ ನಾಯಕಿಯೊಬ್ಬರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ತಾನು ಅನುಭವಿಸಿದ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.. ಯಾರು ಆ ನಟಿ..? ಕರೆ ಮಾಡಿ ಆ ರೀತಿ ಕೇಳಿದವರು ಯಾರು..? ಬನ್ನಿ ತಿಳಿಯೋಣ..
 

1 /8

ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಇದೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಯುವತಿಯರಿಗೆ ಕೆರಿಯರ್ ವಿಷಯದಲ್ಲಿ ಸಹಾಯ ಮಾಡುವುದಾಗಿ ಹೇಳಿ ಅವರನ್ನು ಬಳಸಿಕೊಂಡು ಬಿಟ್ಟವರು ಸಾಕಷ್ಟು ಮಂದಿ ಇದ್ದಾರೆ ಎಂದು ಸ್ವತಃ ಕೆಲವು ಚಿತ್ರ ನಿರ್ಮಾಪಕರೇ ಹೇಳುತ್ತಾರೆ. ಕೆಲವರು ಅದಕ್ಕೆ ಬದ್ಧರಾಗಿ ಕೆಲಸಕೊಟ್ಟವರೂ ಇದ್ದಾರೆ, ಇನ್ನೂ ಕೆಲವರು ಕೈಬಿಡುತ್ತಾರೆ.

2 /8

ಕೆಲವರಂತೂ ತಮ್ಮ ಪ್ರತಿಭೆಯನ್ನು ನಂಬಿ ಇವು ಯಾವುದಕ್ಕೂ ಒಪ್ಪಿಕೊಳ್ಳದೆ ಛಲದಿಂದ ಕೆಲಸಮಾಡಿ ಅಂತಿಮವಾಗಿ ಯಶಸ್ವಿ ಕಂಡ ನಟಿಯರೂ ಇದ್ದಾರೆ. ಆ ಮಟ್ಟಕ್ಕೆ ಬಂದ ಕೆಲವು ನಾಯಕಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಇದೇ ರೀತಿಯ ನೋವಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

3 /8

ಇತ್ತೀಚೆಗಷ್ಟೇ ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ ಜನಪ್ರಿಯರಾಗಿರುವ ನಟಿ ಸಾಯಿ ತಮ್ಹಂಕರ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ವಿಚಾರ ಹಂಚಿಕೊಂಡಿದ್ದಾರೆ.. ಮಿಸ್ ಮಾಲಿನಿಯ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, ಸಾಯಿ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

4 /8

ಸಾಯಿಯವರಿಗೆ ವೃತ್ತಿಜೀವನದ ಆರಂಭದಲ್ಲಿ ಅಪರಿಚಿತರೊಬ್ಬರು ಫೋನ್ ಕರೆ ಮಾಡಿ, ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಮಲಗುತ್ತೀರಾ ಎಂದು ನೇರವಾಗಿ ಕೇಳಿದ್ದರಂತೆ. ಅದಕ್ಕೆ ನಟಿ 'ನಿಮ್ಮ ತಾಯಿಯನ್ನು ಕಳುಹಿಸಬಹುದೇ?' ಅಂತ ಆ ವ್ಯಕ್ತಿ ಮರು ಪ್ರಶ್ನೆ ಮಾಡಿದ್ದರಂತೆ..

5 /8

ಇದರಿಂದ ಕೆಲವು ಸೆಕೆಂಡುಗಳ ಕಾಲ ಮೌನವಾಗಿದ್ದ ಆ ವ್ಯಕ್ತಿ ಮತ್ತೆ ಮಾತನಾಡಲಿಲ್ಲತೆ.. ಎಂದು ನಟಿ ಸಾಯಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆ ಅಪರಿಚಿತ ವ್ಯಕ್ತಿಗೆ ಇನ್ನು ಮುಂದೆ ನನಗೆ ನೀವು ಕರೆ ಮಾಡುವುದಿಲ್ಲ ಅಂತ ನಾನು ಅಂದುಕೊಂಡಿದ್ದೇನೆ.. ಅಂತ ಮೊಖಕ್ಕೆ ಹೊಡೆದಂತೆ ನಟಿ ಸಾಯಿ ಉತ್ತರಿಸಿದ್ದಾಗಿ ಹೇಳಿಕೊಂಡಿದ್ದಾರೆ..

6 /8

ಈ ಅನುಭವದ ನಂತರ, ತನಗೆ ಅಂತಹ ಫೋನ್ ಕರೆಗಳು ಬಂದಿಲ್ಲ, ಅವರಿಗೆ ನನ್ನ ಜೊತೆ ಆ ರೀತಿ ಮಾತನಾಡಬಾರದಿತ್ತು ಅಂತ ಅರ್ಥವಾಗಿರಬೇಕು.. ನಿಮಗೆ ಏನಾದರೂ ಈ ರೀತಿ ಆದರೆ, ಅದರ ಬಗ್ಗೆ ಧೈರ್ಯವಾಗಿ, ಸ್ಪಷ್ಟವಾಗಿ ಮತ್ತು ಮುಕ್ತವಾಗಿ ಮಾತನಾಡಿ ಎಂದು ಸಾಯಿ ಯುವ ಪ್ರತಿಭೆಗಳಿಗೆ ಸಲಹೆ ನೀಡಿದರು.

7 /8

ಅಂಹಾಗೆ, ಸಾಯಿ ಥಂಹಂಕರ್ ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಶಾಲೆ, ಕಾಲೇಜು ಓದುತ್ತಿರುವಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದರು. 17 ನೇ ವಯಸ್ಸಿನಲ್ಲಿ ಮರಾಠಿ ಟಿವಿ ಶೋಗಳಲ್ಲಿ ನಟಿಸಲು ಪ್ರಾರಂಭಿಸಿದರು. 

8 /8

ಮೊದಲು ಸಣ್ಣ ಪಾತ್ರಗಳೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಬಾಲಿವುಡ್‌ನಲ್ಲಿ ಹಿನ್ನೆಲೆ ನಟಿಯಾಗಿ ಕಾಣಿಸಿಕೊಂಡರು. ಅಮೀರ್ ಖಾನ್ ಅಭಿನಯದ 'ಗಜನಿ' ಚಿತ್ರದ ಮೂಲಕ ಸಾಯಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಸಿನ್‌ ಸ್ನೇಹಿತೆಯಾಗಿ ನಟಿಸಿದ್ದಾರೆ.