Actress Vidya Murder: ‘ಭಜರಂಗಿ’, ‘ವೇದ’, ‘ಜೈ ಮಾರುತಿ 800’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದ ನಟಿ ವಿದ್ಯಾ ಬರ್ಬರವಾಗಿ ಕೊಲೆಯಾಗಿದ್ದಾರೆ. ಪತಿ ನಂದೀಶ್‌ ಅವರೇ ವಿದ್ಯಾರನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಟಿಯಷ್ಟೆ ಅಲ್ಲದೆ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದ ವಿದ್ಯಾ ಮೈಸೂರು ನಗರ ಕಾಂಗ್ರೆಸ್​ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.


COMMERCIAL BREAK
SCROLL TO CONTINUE READING

ನಟಿ ವಿದ್ಯಾ 2018ರಲ್ಲಿ ನಂದೀಶ್ ಎಂಬುವರನ್ನು ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ಮನಸ್ತಾಪ ನಡೆಯುತ್ತಿತ್ತು. ಆಗಾಗ ಜಗಳ ಮಾಡುತ್ತಲೇ ಇದ್ದ ಈ ದಂಪತಿ ವಿಚ್ಛೇದನಕ್ಕೂ ಪ್ರಯತ್ನಿಸಿದರಂತೆ. ಆದರೆ ಪೋಷಕರು ಬುದ್ಧಿವಾದ ಹೇಳಿದ್ದರಂತೆ. ಆದರೆ ಇಬ್ಬರ ನಡುವಿನ ಜಗಳ ಮುಂದುವರೆದಿತ್ತು. ಇತ್ತೀಚೆಗಷ್ಟೇ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತಂತೆ. ಆಗ ವಿದ್ಯಾ ಗಂಡನ ಮನೆ ಮೈಸೂರಿನ ತುರುಗನೂರಿನಿಂದ ತವರು ಮನೆ ಬೆಂಗಳೂರಿನ ಶ್ರೀರಾಂಪುರಕ್ಕೆ ಬಂದಿದ್ದರಂತೆ.


ಇದನ್ನೂ ಓದಿ: Actor Shridhar: ಚೆಂದನವನದ ನಟ ಶ್ರೀಧರ್ ಅವರ ಹೆಂಡತಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!


ಮೇ 20ರಂದು ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್​ನಲ್ಲಿ ಜಗಳ ಆಗಿತ್ತಂತೆ. ಈ ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಂಪುರದಿಂದ ತುರುಗನೂರಿಗೆ ಹೋಗಿ ಜಗಳವಾಡಿದ್ದರಂತೆ. ಈ ವೇಳೆ ಪತಿ ನಂದೀಶ್‌ ಸುತ್ತಿಗೆಯಿಂದ ವಿದ್ಯಾರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸುತ್ತಿಗೆಯಿಂದ ಹೊಡೆದ ಪರಿಣಾಮ ವಿದ್ಯಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಪತ್ನಿ ಸಾವನ್ನಪ್ಪುತ್ತಲೇ ನಂದೀಶ್‌ ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ.  


ವಿಷಯ ತಿಳಿದು ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆ ಮಾಡಿ ಎಸ್ಕೇಪ್‌ ಆಗಿರುವ ನಂದೀಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದ ವಿದ್ಯಾ ಮೈಸೂರು ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದರು.  


ಇದನ್ನೂ ಓದಿ: ಕತ್ರೀನಾ ಕೈಫ್‌ ಗರ್ಭಿಣಿಯೇ.! ವೈರಲ್‌ ಆಗ್ತಿದೆ ಬೇಬಿ ಬಂಪ್‌ ಫೋಟೋ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.