Actor Shridhar: ಚೆಂದನವನದ ನಟ ಶ್ರೀಧರ್ ಅವರ ಹೆಂಡತಿ ಯಾರು ಗೊತ್ತಾ? ಇವರು ಕೂಡ ತುಂಬಾ ಫೇಮಸ್!

Actor Shridhar Real Life: ೮೦ರ ದಶಕದಲ್ಲಿ ಮಿಂಚಿದ ಟಾಪ್‌ ನಟರಲ್ಲಿ ಶ್ರೀಧರ್‌ ಕೂಡ ಒಬ್ಬರು.. ಚೆಂದನವನದ ಸಾಕಷ್ಟು ದಿಗ್ಗಜ ನಟರಂತೆ ಇವರೂ ಪುಟ್ಟಣ್ಣ ಕಣಗಾಲ್‌ ಅವರ ಗರಡಿಯಲ್ಲಿ ಪಳಗಿದವರು.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ತಿಳಿದುಕೊಳ್ಳೋಣ..

1 /5

ಅಮೃತಘಳಿಗೆ ಚಿತ್ರದಲ್ಲಿ ನಾಯಕನಾಗಿನಟಿಸುವ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಟ ಶ್ರೀಧರ್‌ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದರು..  

2 /5

ನಟ ಶ್ರೀಧರ್‌ ಬರೀ ನಟನೆಗೆ ಮಾತ್ರ ಸೀಮಿತವಾಗಿರದೇ ಭರತನಾಟ್ಯ ಪ್ರವೀಣರು ಆಗಿದ್ದರು.. ಇಂಜೀನಿಯರಿಂಗ್‌ ಪದವೀಧರರಾದ ಇವರು ಕನ್ನಡದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ..   

3 /5

ಇನ್ನು ನಟ ಶ್ರೀಧರ್‌ ಅವರ ಅದ್ಭುತ ನಟನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವಾರು ಪ್ರಶಶ್ತಿಗಳು ಒಲಿದಿವೆ.. ಸಂತ ಶಿಶುನಾಳ ಶರೀಫ ಸಿನಿಮಾದಲ್ಲಿನ ಇವರ ಅದಮ್ಯ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ..   

4 /5

ನಟ ಶ್ರೀಧರ್‌ ಅವರ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರ ಪತ್ನಿ ಹೆಸರು ಅನುರಾಧ.. ಇವರು ಕೂಡ ಭರತನಾಟ್ಯ ಕಲಾವಿದರು.. ಈ ದಂಪತಿ ಅನೇಕ ವೇದಿಕೆ ಪ್ರದರ್ಶನಗಳನ್ನು ಒಟ್ಟಿಗೆ ನಡೆಸಿಕೊಟ್ಟಿದ್ದಾರೆ..  

5 /5

ನಟ ಶ್ರೀಧರ್‌ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಚೆಂದನವನದ ಚೆಂದದ ನಟ ಇವರು..