ಅತೀ ಶೀಘ್ರದಲ್ಲಿ ಮದುವೆ ಆಗಲಿದ್ದಾರೆ ನಟಿ ಅದಿತಿ ಪ್ರಭುದೇವ್..!
ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಅದಿತಿ ಪ್ರಭುದೇವ್ ಜೊತೆ ಮಾತನಾಡಿದಾಗ, ತಮ್ಮ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಒಂದಷ್ಟು ಅಭಿಮಾನಿಗಳಿಗೆ ಖುಷಿ ನೀಡಿದರೆ, ಇನ್ನೊಂದಷ್ಟು ಜನರಿಗೆ ಬೇಸರ ತರಿಸಿದ್ದಂತೂ ಸುಳ್ಳಲ್ಲ.
ಬೆಂಗಳೂರು : ಅದಿತಿ ಪ್ರಭುದೇವ್, ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ. ಅಪ್ಪಟ ಕನ್ನಡದ ಹುಡುಗಿ. ಬೆಣ್ಣೆಯ ಹಾಗೇ ಕಾಣೋ ವೆರೀ ಕ್ಯೂಟ್ ಕ್ಯೂಟ್ ಬೆಡಗಿ. ಅದ್ಭುತವಾಗಿ ನಟನೆ ಮಾಡೋ ಮೂಲಕ ಇದೀಗ ಕರುನಾಡಿನ ಮನೆಮಗಳಾಗಿದ್ದಾರೆ ಅದಿತಿ ಪ್ರಭುದೇವ್.
ಇದ್ದದ್ದನ್ನ ನೇರವಾಗಿ ಹೇಳೋ, ನೇರನುಡಿಯ ನಾಯಕಿ ಅಂತ ಇದ್ದರೆ ಆ ಸಾಲಿನಲ್ಲಿ ಅದಿತಿ ಪ್ರಭುದೇವ್ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ. ಇದೀಗ ಬಾಗ್ಲು ತೆಗಿ ಮೇರಿ ಜಾನ್ ಅನ್ನೋ ತೋತಾಪುರಿ ಸಿನಿಮಾದ ಹಾಡಿನ ಮೂಲಕ ಮತ್ತೇ ಸುದ್ದಿಯಲ್ಲಿದ್ದಾರೆ ನಟಿ ಅದಿತಿ ಪ್ರಭುದೇವ್. ತೋತಾಪುರಿ ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಪ್ರತಿಯೊಬ್ಬರೂ ಕೂಡ ಈ ಹಾಡನ್ನ ಪ್ರತಿನಿತ್ಯ ಪ್ರತಿಕ್ಷಣ ಗುನುಗುತ್ತಿದ್ದಾರೆ.
ಇದನ್ನೂ ಓದಿ : ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆ ಬಗ್ಗೆ ಕ್ರೇಜಿಸ್ಟಾರ್ ನುಡಿದ ಭವಿಷ್ಯ ಏನು?
ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಅದಿತಿ ಪ್ರಭುದೇವ್ ಜೊತೆ ಮಾತನಾಡಿದಾಗ, ತಮ್ಮ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾವಾಗ ಮದುವೆ ಅನ್ನೋ ಪ್ರಶ್ನೆಗೆ, ಅತೀ ಶೀಘ್ರದಲ್ಲಿ ಅನ್ನೋ ಉತ್ತರ ಕೊಟ್ಟು ಪಡ್ಡೆ ಹುಡುಗರಿಗೆ ಟೆನ್ಶನ್ ಕೊಟ್ಟಿದ್ದಾರೆ.
ಯಶಸ್ ಅನ್ನೋ ಬ್ಯುಸಿನೆಸ್ ಮ್ಯಾನ್ ಜೊತೆ ಅದಿತಿ ಮದುವೆ ನಿಶ್ಚಯ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಗಿರೋ ಫೋಟೋಗಳನ್ನ ಅದಿತಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಅತೀ ಶೀಘ್ರದಲ್ಲಿ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ, ಒಂದಷ್ಟು ಅಭಿಮಾನಿಗಳಿಗೆ ಖುಷಿ ನೀಡಿದರೆ, ಇನ್ನೊಂದಷ್ಟು ಜನರಿಗೆ ಬೇಸರ ತರಿಸಿದ್ದಂತೂ ಸುಳ್ಳಲ್ಲ.
ಇದನ್ನೂ ಓದಿ : ಕಿರೀಟಿ ರೆಡ್ಡಿ ಹುಟ್ಟುಹಬ್ಬದ ದಿನವೇ ಮೊದಲ ಚಿತ್ರದ ಟೈಟಲ್ ಅನಾವರಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.