ಕಿರೀಟಿ ರೆಡ್ಡಿ ಹುಟ್ಟುಹಬ್ಬದ ದಿನವೇ ಮೊದಲ ಚಿತ್ರದ ಟೈಟಲ್ ಅನಾವರಣ

ಕಿರೀಟಿ ರೆಡ್ಡಿ ತನ್ನ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ, ಈ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡಿರಲಿಲ್ಲ. ಕಿರೀಟಿ ರೆಡ್ಡಿ ಜನುಮ ದಿನದಂದು ಈ ಚಿತ್ರದ ಟೈಟಲ್ ಅನಾವರಣಗೊಳ್ಳಲಿದೆ.  

Written by - Ranjitha R K | Last Updated : Sep 28, 2022, 12:01 PM IST
  • ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ.
  • ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೈಟಲ್ ಲಾಂಚ್
  • ನಾಳೆ ಅನಾವರಣಗೊಳ್ಳಲಿದೆ ಚಿತ್ರದ ಟೈಟಲ್
ಕಿರೀಟಿ ರೆಡ್ಡಿ ಹುಟ್ಟುಹಬ್ಬದ ದಿನವೇ ಮೊದಲ ಚಿತ್ರದ ಟೈಟಲ್ ಅನಾವರಣ title=
film title release

ಬೆಂಗಳೂರು :  ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಎಸ್.ಎಸ್. ರಾಜಮೌಳಿ ಭಾಗವಹಿಸಿ, ಚಿತ್ರ ತಂಡದ ಬೆನ್ನು ತಟ್ಟಿದ್ದರು. ಕಿರೀಟಿ ಇದೀಗ ತನ್ನ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ, ಈ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡಿರಲಿಲ್ಲ. ಕಿರೀಟಿ ರೆಡ್ಡಿ ಜನುಮ ದಿನದಂದು ಈ ಚಿತ್ರದ ಟೈಟಲ್ ಅನಾವರಣಗೊಳ್ಳಲಿದೆ.  

ಹೌದು, ಚಿತ್ರರಂಗಕ್ಕೆ ಎಸ್. ಕಿರೀಟಿ ಪ್ರವೇಶ ಜೋರಾಗಿಯೇ ಆಗಿದೆ. ಕಿರೀಟಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರೂ ಸಹ, ಸಿನಿಮಾದ ಟೈಟಲ್ ಅನಾವರಣವಾಗಿರಲಿಲ್ಲ. ಇದೀಗ ಚಿತ್ರದ ಟೈಟಲ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ವಿಶೇಷ ದಿನವನ್ನು ಕೂಡಾ ನಿಗದಿ ಪಡಿಸಿದೆ. ನಾಳೆ ಅಂದರೆ ಚಿತ್ರದ ನಾಯಕ ನಟ ಕಿರೀಟಿ ಹುಟ್ಟುಹಬ್ಬದ ದಿನವೇ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. 

ಇದನ್ನೂ ಓದಿ : BBK 9 Day 3: ವಿದೂಷಕ, ಗೆಳೆಯ, ನಾಯಕ ಅರುಣ್ ಸಾಗರ್‌! ಉಳಿದವರಿಗೆ ಸಿಕ್ಕಿದ್ದೇನು?

ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗಲಿದೆ. ನಾಳೆ ಸಂಜೆ  6.39ಕ್ಕೆ ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. 

ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು  ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ.   ಕನ್ನಡ, ತೆಲುಗು, ತಮಿಳು, ಮಲಯಾಳಂ, ನಾಲ್ಕು ಭಾಷೆಯಲ್ಲಿ  ನಿರ್ಮಾಣವಾಗುತ್ತಿರುವ ಈ ಚಿತ್ರದ ಮೂಲಕ ಕಿರೀಟಿ  ಏಕಕಾಲದಲ್ಲಿ ನಾಲ್ಕು ಇಂಡಸ್ಟ್ರಿಗೆ ಹೀರೋ ಆಗಿ ಲಾಂಚ್  ಆಗುತ್ತಿದ್ದಾರೆ. 

ಇದನ್ನೂ ಓದಿ : Mahesh Babu : ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಇನ್ನಿಲ್ಲ

ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ  ಇದೆ. ಚಿತ್ರಕ್ಕೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿದೆ.  ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News