ಬೆಂಗಳೂರು : ನಟಿ ಮಹಾಲಕ್ಷ್ಮೀ (Mahalakshmi) ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ನಟಿ. ತನ್ನ ಅದ್ಭುತ ನಟನೆಯಿಂದ ಅಪಾರ ಅಭಿಮಾನ ಬಳಗವನ್ನು ಕೂಡಾ ಹೊಂದಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮಲಯಾಳಂನಲ್ಲಿಯೂ ಹೆಸರು ಮಾಡಿದ್ದ ಮಹಾಲಕ್ಷ್ಮೀ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ಕನ್ನಡ ಚಿತ್ರದ ಮೂಲಕವೇ ಮಹಾಲಕ್ಷ್ಮೀ ಕಮ್ ಬ್ಯಾಕ್ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

‘ಟಿಆರ್ ಪಿ ರಾಮಾ’ ಚಿತ್ರದಲ್ಲಿ (films) ಮಹಾಲಕ್ಷ್ಮೀ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರವಿಪ್ರಸಾದ್ (Raviprasad) ನಿರ್ದೇಶನವಿದೆ. ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಕ್ಯಾಮರಾ ವರ್ಕ್ ಇದೆ. ಇನ್ನು ಸಹ ನಿರ್ದೇಶಕರಾಗಿ ಪ್ರವಿಣ್ ಸೂಡ  ಕೆಲಸ ಮಾಡುತ್ತಿದ್ದಾರೆ. 


ಇದನ್ನೂ ಓದಿ : Oscar 2021: ಆಸ್ಕರ್ ಸ್ಪರ್ಧೆಗೆ ನಟಿ ವಿದ್ಯಾ ಬಾಲನ್ ಕಿರುಚಿತ್ರ ನಟಖಟ್ ಎಂಟ್ರಿ


‘ಟಿಆರ್ ಪಿ ರಾಮಾ’ (TRP Rama) ಚಿತ್ರದಲ್ಲಿ ಮಹಾಲಕ್ಷ್ಮೀ ಅವರದ್ದು ಬಹಳ ಮುಖ್ಯ ಪಾತ್ರ ಎನ್ನುತ್ತಾರೆ ನಿರ್ದೇಶಕ ರವಿಪ್ರಸಾದ್. ಈ ಪಾತ್ರವನ್ನು ನಿರ್ವಹಿಸಲು ಸೂಕ್ತ ನಟಿ ಬೇಕೆಂದು ಸುಮಾರು ಒಂದು ವರ್ಷಗಳ ಕಾಲ ಹುಡುಕಾಟ ನಡೆಸಿದ್ದಾರಂತೆ. ಆರಂಭದಲ್ಲಿ ಮಹಾಲಕ್ಷ್ಮೀ ಅವರಿಗೆ ಕಥೆ ಹೇಳಿದಾಗ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲವಂತೆ. ನಂತರ ನಿರ್ದೇಶಕ ರವಿಪ್ರಸಾದ್ ಗೆ ಖುದ್ದು ಫೋನ್ (Phone) ಮಾಡಿದ ಮಹಾಲಕ್ಷ್ಮೀ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಸುಮಾರು 30 ವರ್ಷಗಳ ನಂತರ ಮಹಾಲಕ್ಷ್ಮೀ (Mahalakshmi) ನಟಿಸುತ್ತಿದ್ದು, ಚಿತ್ರದ ಕಥೆ ಅವರಿಗೂ ಇಷ್ಟವಾಗಿದೆ ಎನ್ನುತ್ತಾರೆ ನಿರ್ದೇಶಕ.


ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು (cinema) ಮಾಡಲು ಹೊರಟಿದೆ ರವಿಪ್ರಸಾದ್ ಮತ್ತವರ ತಂಡ. ಒಬ್ಬ ವ್ಯಕ್ತಿಯನ್ನು ಬಣ್ಣ ಮತ್ತು ರೂಪದಿಂದ ಗುರುತಿಸಿ, ಆ ವ್ಯಕ್ತಿಯ ಬಗ್ಗೆ ಜನ ನಿರ್ಣಯಕ್ಕೂ ಬಂದುಬಿಡುತ್ತಾರೆ. ಇದು ವ್ಯಕ್ತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುದನ್ನು ಆಧರಿಸಿ ಚಿತ್ರ ಇರಲಿದೆ. ಮಾಧ್ಯಮಗಳ ಪಾತ್ರವನ್ನು ಕೂಡಾ ಸಿನೆಮಾದಲ್ಲಿ ತೋರಿಸಲಾಗಿದೆ. 


ಇದನ್ನೂ ಓದಿ : Cinema Theater: ಸಿನಿಮಾ ಥಿಯೇಟರ್ ಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.