ಬೆಂಗಳೂರು : ಡಿ ಬಾಸ್ ದರ್ಶನ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ದರ್ಶನ್ ಅಭಿಮಾನಿಗಳು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ರಾಬರ್ಟ್ ಚಿತ್ರ ಮಾರ್ಚ್11ಕ್ಕೆ ಬಿಡುಗಡೆಯಾಗಲಿದೆ. ಇದರೊಂದಿಗೆ ಈ ಬಾರಿ ದರ್ಶನ್ ತನ್ನ ಜನುಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಕರೋನಾ ಹಿನ್ನೆಲೆಯಲ್ಲಿ ದರ್ಶನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಾರಿ ಜನುಮ ದಿನ ಆಚರಿಸಿಕೊಳ್ಳುವುದಿಲ್ಲ ಎಂದ ದರ್ಶನ್:
ಫೆ.16 ದರ್ಶನ್ (Darshan) ಹುಟ್ಟಿದ ದಿನ. ದರ್ಶನ್ ಜನುಮದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ಡಿಬಾಸ್ (D BOSS)ಅಭಿಮಾನಿಗಳು ಆಚರಿಸುತ್ತಾರೆ. ಪ್ರತಿ ವರ್ಷ ದರ್ಶನ್ ಕೂಡಾ ಬಹಳ ಸಂತೋಷದಿಂದಲೇ ತನ್ನ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕರೋನಾ (Coronavirus) ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ (Facebook) ಲೈವಲ್ಲಿ ಮಾತನಾಡಿದ ದರ್ಶನ್ ಫೆ.15ರಿಂದ 18ರವರೆಗೆ ತಾವು ಬೆಂಗಳೂರಿನಲ್ಲೇ ಇರುವುದಿಲ್ಲ. ಹಾಗಾಗಿ ಯಾರೂ ತಮ್ಮ ಮನೆಯ ಬಳಿ ಬಾರದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದಲ್ಲೂ ದರ್ಶನ್ ಹವಾ: ಉರ್ದುಗೆ ಡಬ್ ಆಗಿ ರಿಲೀಸ್ ಆಯ್ತು ಡಿಬಾಸ್ ಫಿಲ್ಮ್..!
ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ ಎಂದು ಸಲಹೆ :
ಅಲ್ಲದೆ 2020 ನ್ನು ಯಾರೂ ಮರೆಯಲು ಸಾಧ್ಯವಿಲ್ಲ. 2020ರಲ್ಲಿ ನಾನೂ ಸೇರಿ ಯಾರೂ ಕೂಡಾ ಕೆಲಸ ಮಾಡಿಲ್ಲ. ನನ್ನ ಹುಟ್ಟುಹಬ್ಬದ ದಿನದಂದೂ ಸಾಕಷ್ಟು ಊರುಗಳಿಂದ ಜನರು ಖರ್ಚು ಮಾಡಿಕೊಂಡು ಬೆಂಗಳೂರಿಗೆ ಬರುತ್ತಾರೆ. ಈ ವರ್ಷ ಪ್ರತಿ ವರ್ಷದಂತಲ್ಲ. ನೀವು ಮೊದಲು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ಕಷ್ಟಗಳನ್ನು ದೂರಾಗಿಸಿಕೊಳ್ಳಿ. ನೀವು ಸುರಕ್ಷಿತವಾಗಿರಿ. ಹುಟ್ಟುಹಬ್ಬ ಮುಂದಿನ ವರ್ಷವಾದರೂ ಆಚರಿಸಬಹುದು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ಮಾರ್ಚ್ 11ಕ್ಕೆ ರಾಬರ್ಟ್ ತೆರೆಗೆ :
ಇನ್ನು ಅಭಿಮಾನಿಗಳು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ರಾಬರ್ಟ್(Roberrt) ಚಿತ್ರ ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ ಎಂದು ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಮಾರ್ಚ್ 11ಕ್ಕೆರಾಬರ್ಟ್ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :'KGF Chapter 2' ಟೀಸರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಹೊಸ ದಾಖಲೆ
ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಚಿತ್ರ ಬಿಡುಗಡೆ ಇಲ್ಲ :
ಇದೇ ವೇಳೆ, ಒಟಿಟಿ ಕುರಿತು ಮಾತನಾಡಿದ ದರ್ಶನ್ ಯಾವುದೇ ಕಾರಣಕ್ಕೂ ನಮ್ಮ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 25 ಶೇ ಜನರಿಗೆ ಅವಕಾಶ ಸಿಕ್ಕರೂ ಪರವಾಗಿಲ್ಲ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. ನಿರ್ಮಾಪಕರು (Producer) ಕಷ್ಟಪಟ್ಟು ಚಿತ್ರ ನಿರ್ಮಾಣ ಮಾಡುತ್ತಾರೆ. ಸಿನಿಮಾಗೆ (Cinema) ಸಂಬಂಧಪಟ್ಟ ಪ್ರತಿಯೊಬ್ಬರು ಬಹಳ ಕಷ್ಟಪಟ್ಟಿರುತ್ತಾರೆ. ಹೀಗಿರುವಾಗ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಚಿತ್ರಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.