ಸಿನಿಮಾ ಅಖಾಡ ಈಗ ಮೊದಲಿನಂತಿಲ್ಲ, ದೊಡ್ಡ ದೊಡ್ಡ ಸ್ಟಾರ್‌ ನಟರ ಸಿನಿಮಾಗಳೇ ತೋಪೆದ್ದು ಹೋಗುತ್ತಿವೆ. ಅದರಲ್ಲೂ ವಿವಾದ ಮೈಮೇಲೆ ಎಳೆದುಕೊಂಡ ನಟರ ಪಾಡು ಹೀನಾಯ. ಇದಕ್ಕೆ ತಾಜಾ ಉದಾಹರಣೆ ಸಾಲು ಸಾಲಾಗಿ ಬಾಲಿವುಡ್‌ ಸಿನಿಮಾಗಳು ತೋಪೆದ್ದು ಹೋಗುತ್ತಿರುವುದು. ಇದೀಗ ಇಂತಹದ್ದೇ ಘಟನೆಗೆ ತಾಪ್ಸಿ ಪನ್ನು ಸಿನಿಮಾ ಕೂಡ ಸಾಕ್ಷಿಯಾಗಿದೆ. ಅರೆರೆ ನಟಿ ತಾಪ್ಸಿ ಮಾಡಿದ ತಪ್ಪೇನು ಅಂದ್ರಾ..? ಮುಂದೆ ಓದಿ.


COMMERCIAL BREAK
SCROLL TO CONTINUE READING

ಬಾಲಿವುಡ್‌ ಸಿನಿಮಾಗಳನ್ನ ನೋಡಲು ಜನ ಬರುತ್ತಿಲ್ಲ. ಇದಕ್ಕೂ ಮೊದಲು ಹತ್ತಾರು ಕೋಟಿ ಬಂಡವಾಳ ಹಾಕಿ, ನೂರಾರು ಕೋಟಿ ಲಾಭ ಪಡೆಯುತ್ತಿದ್ದ ಬಾಲಿವುಡ್‌ ನಿರ್ಮಾಪಕರು ಈಗ ಹಾಕಿದ ಬಂಡವಾಳ ವಾಪಸ್‌ ಪಡೆಯಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ನಟ-ನಟಿ ಏನಾದ್ರೂ ವಿವಾದ‌ ಸೃಷ್ಟಿಸುವ ಹೇಳಿಕೆ ಕೊಟ್ಟರೆ ಮುಗಿದೇ ಹೋಯಿತು. ಆ ಸಿನಿಮಾ ರಿಲೀಸ್‌ ಆದ ದಿನವೇ ತೋಪೆದ್ದು ಹೋಗುತ್ತದೆ. ಇದೇ ರೀತಿ ತಾಪ್ಸಿ ಪನ್ನು ಪ್ರೇಕ್ಷಕರಿಗೆ ಹಾಕಿದ್ದ ಆ ಒಂದು ಚಾಲೆಂಜ್‌ ಉಲ್ಟಾ ಆಗಿ ಹೋಗಿದೆ.


ಇದನ್ನೂ ಓದಿ : ಹೊಸ ಲುಕ್‌ನಲ್ಲಿ ‘ಅವತಾರ್-1’ ಜಗತ್ತಿನಾದ್ಯಂತ ಗ್ರ್ಯಾಂಡ್ ರೀ ಎಂಟ್ರಿ: ಕಾರಣ ಗೊತ್ತಾ..?


ಇದು ಬೇಕಿತ್ತಾ..?


ಬಾಲಿವುಡ್‌ ಬಾಕ್ಸ್‌ ಆಫಿಸ್‌ನಲ್ಲಿ ಇತ್ತೀಚೆಗೆ ರಿಲೀಸ್‌ ಆಗಿದ್ದ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಮಕಾಡೆ ಮಲಗಿದೆ. ಹಾಕಿದ ಬಂಡವಾಳ ವಾಪಸ್‌ ಬರೋದು ಕೂಡ ಡೌಟ್‌ ಆಗುತ್ತಿದೆ. ಸುಮಾರು ₹180 ಕೋಟಿ ವೆಚ್ಚದ ಸಿನಿಮಾ ತೋಪು ತೋಪೆದ್ದು ಹೋಗಿದೆ. ಆಮೀರ್‌ ಖಾನ್‌ ಮೈಮೇಲೆ ಎಳೆದುಕೊಂಡಿದ್ದ ವಿವಾದವೇ ಹೀನಾಯ ಸೋಲಿಗೆ ಕಾರಣ ಎನ್ನಲಾಗಿದೆ. ಈ ಹೊತ್ತಲ್ಲೇ ತಾಪ್ಸಿ ಪನ್ನು ಕೊಟ್ಟ ವ್ಯತಿರಿಕ್ತ ಹೇಳಿಕೆ ಉಲ್ಟಾ ಹೊಡೆದಿದೆ. 'ಲಾಲ್ ಸಿಂಗ್ ಚಡ್ಡಾ' ಬಾಯ್ಕಾಟ್‌ ವಿವಾದದ ಹಿನ್ನೆಲೆ ನನ್ನ ಸಿನಿಮಾವನ್ನೂ ಬಾಯ್ಕಾಟ್‌ ಮಾಡಿ ಎಂದಿದ್ದ ನಟಿ ತಾಪ್ಸಿ ಪನ್ನು ಶಾಕ್‌ ಆಗಿದ್ದಾರೆ. ಯಾಕಂದ್ರೆ ಅವರ ನಿರೀಕ್ಷಿತ ಸಿನಿಮಾ ‘ದೋಬಾರಾ’ ತೋಪೆದ್ದು ಹೋಗಿದೆ. ಹತ್ತಾರು ಕೋಟಿ ಸುರಿದಿದ್ದ ಈ ಸಿನಿಮಾ 1 ವಾರ ಕಳೆಯುತ್ತಾ ಬಂದರೂ ₹5 ಕೋಟಿ ಗಡಿಯನ್ನೂ ದಾಟಿಲ್ಲ.


ಆಗಸ್ಟ್ 19ರಂದು ‘ದೋಬಾರಾ’ ಸಿನಿಮಾ ರಿಲೀಸ್‌ ಆಗಿತ್ತು, ಮೊದಲ ದಿನವೇ ಶಾಕಿಂಗ್‌ ಕಲೆಕ್ಷನ್‌ ಮಾಡಿದ್ದ ಈ ಸಿನಿಮಾ ಕೇವಲ ₹72 ಲಕ್ಷ ಗಳಿಸಿತ್ತು. ಬಳಿಕ ಮೊದಲ ವೀಕೆಂಡ್‌ ಸಮೀಪ ಬಂದರೂ  ₹5 ಕೋಟಿ ಗಡಿ ದಾಟಿಲ್ಲ. ಸಿನಿಮಾ ಅಂದಾಜು ₹50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ. ಆದರೆ ಈವರೆಗೂ ಹಾಕಿದ ಬಂಡವಾಳದ ಅರ್ಧ ಕೂಡ ‘ದೋಬಾರಾ’ ನಿರ್ಮಾಪಕರ ಕೈಸೇರಿಲ್ಲ. ಇದು ಪ್ರೊಡ್ಯೂಸರ್‌ ಆತಂಕವನ್ನ ದುಪ್ಪಟ್ಟು ಮಾಡಿದ್ದು, ಸದ್ಯ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.


ಇದನ್ನೂ ಓದಿ : SIIMA 2022 ಗೆ ನಾಮಿನೇಟ್ ಆದ ಕನ್ನಡದ ಟಾಪ್ ನಟರು ಇವರೇ, ನೀವೂ ವೋಟ್‌ ಮಾಡಬಹುದು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.