SIIMA 2022 Nominations : ಸೈಮಾ ಅವಾರ್ಡ್ ಸಿನಿಮಾಗಳಿಗೆ ಮತ್ತು ಚಿತ್ರರಂಗದ ಕಲಾವಿದರಿಗೆ ಕೊಡುವ ಹೆಸರಾಂತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್ ಪ್ರತಿಷ್ಠಿತ ಪ್ರಶಸ್ತಿಗಳ ಪಟ್ಟಿಯಲ್ಲಿದೆ. ಮುಖ್ಯವಾಗಿ ಈ ಪ್ರಶಸ್ತಿಯನ್ನು ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಚಿತ್ರಗಳಿಗೆ ನೀಡಲಾಗುತ್ತದೆ. ಈ ಬಾರಿ ಕನ್ನಡದ ಯಾವ ನಟರು ಈ ಪ್ರಶಸ್ತಿಗೆ ನಾಮನಿರ್ದೇಶನ ಆಗಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. SIIMA 2022 ಗೆ ನಾಮಿನೇಟ್ ಆದ ಕನ್ನಡದ ಟಾಪ್ ನಟರ ಪಟ್ಟಿ ಇಲ್ಲಿದೆ.
ಈ ಬಾರಿಯ ಸೈಮಾ 2022 ಪ್ರಶಸ್ತಿಗೆ ಕನ್ನಡದ ಹೆಸರಾಂತ ನಟರು ನಾಮಿನೇಟ್ ಆಗಿದ್ದಾರೆ. ನಟ ದರ್ಶನ್, ಪುನೀತ್ ರಾಜ್‌ಕುಮಾರ್, ಗಣೇಶ್, ಧನಂಜಯ್, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಸೇರಿ ಒಟ್ಟು ಆರು ಜನ ಖ್ಯಾತ ನಟರು ಈ ಬಾರಿ ಸೈಮಾ ಅವಾರ್ಡ್‌ಗೆ ನಾಮಿನೇಟ್ ಆಗಿದ್ದಾರೆ. ರಾಬರ್ಟ್ ಸಿನಿಮಾದ ನಟನೆಗಾಗಿ ದರ್ಶನ್ ಹೆಸರು ನಾಮಿನೇಟ್ ಆಗಿದೆ. ನಟ ದರ್ಶನ್ 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಈ ಸಿನಿಮಾ 2021ರ ಮಾರ್ಚ್‌ನಲ್ಲಿ ರಿಲೀಸ್ ಆಯ್ತು. ಕೊರೊನಾ ಹಾವಳಿ ನಡುವೆಯೂ ರಾಬರ್ಟ್ ಉತ್ತಮ ಪ್ರದರ್ಶನ ಕಂಡಿತು. ಒಳ್ಳೆಯ ಕಲೆಕ್ಷನ್ ಮಾಡಿತು.
ಇದನ್ನೂ ಓದಿ: ಡ್ರಾಮಾ ಜೂನಿಯರ್ಸ್ ಸೀಸನ್ 4 ವಿನ್ನರ್ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಯುವರತ್ನ ಸಿನಿಮಾಗಾಗಿ ಪುನೀತ್ ರಾಜ್‌ಕುಮಾರ್ ಅವರು ನಾಮಿನೇಟ್ ಆಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಬಂದ ಈ ಸಿನಿಮಾ 2021 ಏಪ್ರಿಲ್‌ನಲ್ಲಿ ಬಿಡುಗಡೆಯಾಯಿತು.
SIIMA 2022 Best Actor in A Leading Role Nominations | Kannada
1. @Official_Ganesh for #Sakath
2. @NimmaShivanna for #Bhajarangi2
3. @shetty_rishab for #GarudaGamanaVrishabhaVahana
4. @dasadarshan for #Roberrt
5. @PuneethRajkumar for #Yuvarathnaa
6. @Dhananjayaka for #BadavaRascal pic.twitter.com/dWciFfz1Is— SIIMA (@siima) August 20, 2022
ಇನ್ನೂ 2022ರ ಸೈಮಾ ರೇಸ್‌ನಲ್ಲಿ ನಟ ಗಣೇಶ್ ಮತ್ತು ಡಾಲಿ ಧನಂಜಯ್ ಕೂಡ ಇದ್ದಾರೆ. ಬಡವ ರಾಸ್ಕಲ್ ಚಿತ್ರದ ಅಭಿನಯಕ್ಕಾಗಿ ನಟ ಧನಂಜಯ್ ನಾಮಿನೇಟ್ ಆಗಿದ್ದು, ಸಕ್ಕತ್ ಸಿನಿಮಾದ ನಟನೆಗಾಗಿ ನಟ ಗಣೇಶ್ ನಾಮಿನೇಟ್ ಆಗಿದ್ದಾರೆ. ಈ ಎರಡೂ ಸಿನಿಮಾಗಳು ಕೂಡ ಕಳೆ ವರ್ಷ ತೆರೆಕಂಡಿದ್ದು, ಜನರ ಮನಗೆದ್ದಿವೆ.
ಈ ಬಾರಿಯ ಸೈಮಾ 2022 ಅವಾರ್ಡ್ ಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಹೆಸರು ಸಹ ಇದೆ. ಭಜರಂಗಿ ಚಿತ್ರಕ್ಕಾಗಿ ನಟ ಶಿವರಾಜ್ ಕುಮಾರ್ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಈ ಬಾರಿ ಕನ್ನಡದ ಒಟ್ಟು ಆರು ಮಂದಿ ನಟರು ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದು, ಪ್ರಶಸ್ತಿ ಯಾರ ಮುಡಿಗೆ ಸೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Zee Kannada Ganeshotsava : ಕೊಟ್ಟೂರಿನಲ್ಲಿ ಜೀ ಕನ್ನಡ ಗಣೇಶೋತ್ಸವ
ಸೈಮಾ ವೋಟಿಂಗ್ ಹೇಗೆ?
ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಚಿತ್ರಗಳಿಗೆ ನೀವು ವೋಟ್ ಮಾಡಬಹುದು. ಸೈಮಾ ವೆಬ್ಸೈಟ್ಗೆ ತೆರಳಿ ವೋಟ್ ಮಾಡಬೇಕು ಅಥವಾ ಸೈಮಾ ಫೇಸ್ಬುಕ್ ಪೇಜ್ ಮೂಲಕವೂ ನಿಮ್ಮ ನೆಚ್ಚಿನ ನಟನಿಗೆ ವೋಟ್ ಮಾಡಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.