ಮುಂಬೈ: ಪ್ರತಿಭಾವಂತ ನಟ ನಾಗ ಚೈತನ್ಯ ಸಮಂತಾ ರುತ್ ಪ್ರಭು ಅವರಿಂದ ಬೇರ್ಪಡುವ ಘೋಷಣೆಯಾದಾಗಿನಿಂದ, ಅವರು ಮೇಡ್ ಇನ್ ಹೆವೆನ್ ನಟಿ ಸೋಭಿತಾ ಧೂಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಈಗ ಇದಕ್ಕೆ ಪೂರಕ ಎನ್ನುವಂತೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ವೈರಲ್ ಫೋಟೋದಲ್ಲಿ ನಾಗ ಚೈತನ್ಯ ಮೈಕೆಲಿನ್ ಸ್ಟಾರ್ ಬಾಣಸಿಗ ಸುರೇಂದರ್ ಮೋಹನ್ ಅವರೊಂದಿಗೆ ಪೋಸ್ ನೀಡಿದ್ದು, ಸೋಭಿತಾ ಮೇಜಿನ ಮೇಲೆ ಹಿಂಭಾಗದಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಚಿತ್ರವನ್ನು ಮೊದಲು ಫೆಬ್ರವರಿ 1 ರಂದು ಬಾಣಸಿಗರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.ಆದಾಗ್ಯೂ, ನಾಗಾ ಮತ್ತು ಸೋಭಿತಾ ಇದುವರೆಗೆ ಸಾರ್ವಜನಿಕವಾಗಿ ಪರಸ್ಪರ ಡೇಟಿಂಗ್ ಬಗ್ಗೆ ಮಾತನಾಡಿಲ್ಲ.


ಇದನ್ನೂ ಓದಿ : "ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು"-ಯತ್ನಾಳ್


ಸ್ಯಾಮ್ ಮತ್ತು ನಾಗಾ, ಅಕ್ಟೋಬರ್ 2021 ರಲ್ಲಿ, ದಂಪತಿಗಳು ಒಂದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಚ್ಚೇದನವನ್ನು ಘೋಷಿಸಿದ್ದರು.ಸಮಂತಾ ಮತ್ತು ನಾಗ ಚೈತನ್ಯ ಅವರು 2010 ರಲ್ಲಿ ಗೌತಮ್ ಮೆನನ್ ಅವರ ಯೇ ಮಾಯಾ ಚೇಸಾವೆ ಸೆಟ್‌ನಲ್ಲಿ ಪರಿಚಯವಾಗಿದ್ದರು ನಂತರ ಅದು ಪ್ರೇಮಕ್ಕೆ ತಿರುಗಿ ಅಕ್ಟೋಬರ್ 6, 2017 ರಂದು ಗೋವಾದಲ್ಲಿ ಮದುವೆಯಾಗಿದ್ದರು, ನಂತರ ಕ್ರಮವಾಗಿ ಅಕ್ಟೋಬರ್ 7, 2017 ರಂದು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.