Sushant Singh Rajput ಸಾವು ಹತ್ಯೆಯೋ ಅಥವಾ ಆತ್ಮಹತ್ಯೆಯೋ? CBIಗೆ ವರದಿ ಸಲ್ಲಿಸಿದ AIIMS
ಸುಶಾಂತ್ ಸಿಂಗ್ ರಾಜ್ಪುತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ನ ಫಾರೆನ್ಸಿಕ್ ತಂಡ, ಸಿಬಿಐ ಹಾಗೂ ಸಿಎಫ್‌ಎಸ್ಎಲ್ ತಜ್ಞರ ನಡುವೆ ಇಂದು ಸಭೆ ನಡೆದಿದೆ.
ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣದಲ್ಲಿ ಏಮ್ಸ್ ಫೋರೆನ್ಸಿಕ್ ತಂಡ, ಸಿಬಿಐ ತಂಡ ಮತ್ತು ಸಿಎಫ್‌ಎಸ್ಎಲ್ ತಜ್ಞರ ನಡುವೆ ಸಭೆ ನಡೆದಿದೆ. ಇದಕ್ಕಾಗಿ AIIMS ನ ನಾಲ್ವರು ವೈದ್ಯರು ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಯನ್ನು ತಲುಪಿದ್ದರು. ಈ ಸಭೆ ಸುಮಾರು ಎರಡು ಗಂಟೆಗಳ ಕಾಲ ನಡೆದಿದೆ. ಏಮ್ಸ್ ನಡೆಸಿದ ವಿಧಿವಿಜ್ಞಾನ ತನಿಖೆಯ ವರದಿಯನ್ನು ಸಿಬಿಐಗೆ ಸಲ್ಲಿಸಲಾಗಿದೆ. ವರದಿಗಳ ಪ್ರಕಾರ, ಸಿಬಿಐ ಈಗ ಆ ವರದಿಯನ್ನು ವಿಶ್ಲೇಷಿಸುತ್ತಿದೆ.
ಇದನ್ನು ಓದಿ- ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡಿದ್ದನ್ನು ಒಪ್ಪಿಕೊಂಡ ನಟಿ ಸಾರಾ ಅಲಿ ಖಾನ್
ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ ಆಂಗಲ್ ತನಿಖೆಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ವಿಚಾರಣೆ ನಡೆಸುತ್ತಿದೆ ಮತ್ತು ಈಗ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾ (Rakesh Asthana) ಸ್ವತಃ ಮುಂಬೈಗೆ ತಲುಪಿ ತನಿಖೆಯ ಸಮೀಕ್ಷೆ ನಡೆಸಿದ್ದಾರೆ. ಎನ್‌ಸಿಬಿ ಮೂಲಗಳ ಪ್ರಕಾರ, ಅಸ್ತಾನಾ ಭಾನುವಾರ ಮುಂಬೈ ತಲುಪಿದ್ದಾರೆ. ಅವರು ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಪ್ರಕರಣದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜಾರಿ ನಿರ್ದೇಶನಾಲಯವು ಕಳೆದ ತಿಂಗಳು ಹಲವಾರು ಬಾಲಿವುಡ್ ನಟರನ್ನು ಡ್ರಗ್ ಚಾಟ್ ನಡೆಸಿರುವ ಪಟ್ಟಿಯಲ್ಲಿ ಸೇರಿಸಿದೆ. ಪ್ರಕರಣದ ಹೊಸ ಬೆಳವಣಿಗೆಯ ಬಗ್ಗೆಯೂ ಅವರಿಗೆ ಮಾಹಿತಿ ನೀಡಲಾಗಿದೆ.
ಇದನ್ನು ಓದಿ- Sushant Singh Rajput ತನ್ನ ವೃತ್ತಿ ಜೀವನದಲ್ಲಿ ಮಾಡಿದ ಒಟ್ಟು ಗಳಿಕೆ ಎಷ್ಟು ಗೊತ್ತಾ?
NCB ಅಧಿಕಾರಿಗಳು ಈಗಾಗಲೇ ದೀಪಿಕಾ ಪದುಕೊಂಡೆ, ಸಾರಾ ಅಲಿ ಖಾನ್,ಶ್ರದ್ಧಾ ಕಪೂರ್ ಹಾಗೂ ದೀಪಿಕಾ ಮಾಜಿ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಅವರನ್ನು ಶನಿವಾರ ವಿಚಾರಣೆ ನಡೆಸಿದ್ದಾರೆ. ಇದೆ ಸರಣಿಯಲ್ಲಿ NCB ಧರ್ಮಾ ಪ್ರೊಡಕ್ಷನ್ ಮಾಜಿ ಅಧಿಕಾರಿ ಕ್ಷಿತಿಜ್ ಪ್ರಸಾದ್ ಅವರನ್ನು ಕೂಡ ಬಂಧಿಸಿದೆ. ಪ್ರಸ್ತುತ ಕ್ಷಿತಿಜ್ ಅಕ್ಟೋಬರ್ 3ರವರೆಗೆ NCB ವಶದಲ್ಲಿ ಇರಲಿದ್ದಾರೆ.
ಇದನ್ನು ಓದಿ- Disha Salian ಸಾವಿನ ಕುರಿತು ಬೆಚ್ಚಿ ಬೀಳಿಸುವ ಬಹಿರಂಗಗೊಳಿಸಿದ BJP ಶಾಸಕ ನಿತೇಶ್ ರಾಣೆ
ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ CBI
ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ(CBI) ಇದೆ ಮೊದಲ ಬಾರಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಈ ಕುರಿತು ಇಂದು ಹೇಳಿಕೆ ನೀಡಿರುವ CBI, "ತನಿಖಾ ಏಜೆನ್ಸಿ ಸುಶಾಂತ್ ಸಿಂಗ್ ರಜಪೂತ ಸಾವು ಪ್ರಕರಣದಲ್ಲಿ ವೃತ್ತಿಪರ ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿನ ಎಲ್ಲ ಕೋನಗಳನ್ನೂ ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಹಾಗೂ ಇಂದಿನ ದಿನಾಂಕದವರೆಗೆ ಯಾವುದೇ ಸಾಧ್ಯತೆಯನ್ನು ಬಿಡಲಾಗಿಲ್ಲ" ಎಂದು ಹೇಳಿದೆ.