Disha Salian ಸಾವಿನ ಕುರಿತು ಬೆಚ್ಚಿ ಬೀಳಿಸುವ ಬಹಿರಂಗಗೊಳಿಸಿದ BJP ಶಾಸಕ ನಿತೇಶ್ ರಾಣೆ

ಈ ಕುರಿತು ಹೇಳಿಕೆ ನೀಡಿರುವ ನಿತೇಶ್ ರಾಣೆ ದಿಶಾ ಸಾಲಿಯಾನ್ ಸಾವಿನ ಹಿಂದಿನ ಕಾರಣಗಳ ಕುರಿತು ರೋಹನ್ ರಾಯ್ ಗೆ ತಿಳಿದಿದೆ. ಆದರೆ, ಭಯದ ಕಾರಣ ಆತ ಓಡಾಡುತ್ತಿದ್ದಾನೆ ಎಂದಿದ್ದಾರೆ.

Last Updated : Sep 17, 2020, 10:44 AM IST
  • ದಿಶಾ ಸಾಲಿಯಾನ್ ಸಾವಿನ ರಹಸ್ಯದ ಹಿಂದಿನ ಕಾರಣಗಳು ರೋಹನ್ ರೈಗೆ ತಿಳಿದಿವೆ.
  • ಭಯದ ಕಾರಣ ಆತ ಓಡಾಡುವಂತಾಗಿದೆ ಎಂದ ಮಹಾರಾಷ್ಟ್ರದ BJP ಶಾಸಕ ನಿತೇಶ ರಾಣೆ.
  • ಜೂನ್ 8 ರಂದು ನಡೆದ ಘಟನೆಯ ಬಳಿಕ ದಿಶಾ ಸಾಲಿಯಾನ್ 100ಗೆ ಕರೆ ಮಾಡಿದ್ದರು.
Disha Salian ಸಾವಿನ ಕುರಿತು ಬೆಚ್ಚಿ ಬೀಳಿಸುವ ಬಹಿರಂಗಗೊಳಿಸಿದ BJP ಶಾಸಕ ನಿತೇಶ್ ರಾಣೆ title=

ನವದೆಹಲಿ: ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ಅವರು ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮತ್ತು ದಿಶಾ ಸಾಲಿಯನ್ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ದಿಶಾ ಸಾವಿನ ಕಾರಣಗಳ ಬಗ್ಗೆ ರೋಹನ್ ರೈಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ, ಆದರೆ ಭಯದಿಂದ ಆತ ಓಡಾಡುತ್ತಿದ್ದಾನೆ. ಜೂನ್ 8 ರ ರಾತ್ರಿ ನಡೆದ ಸತ್ಯವನ್ನು ಒಂದು ವೇಳೆ ರೋಹನ್ ಜಗತ್ತಿಗೆ ತಿಳಿಸದಿದ್ದರೆ, ನಾನು ಸಿಬಿಐಗೆ ಎಲ್ಲಾ ರಹಸ್ಯಗಳನ್ನು ಹೇಳುತ್ತೇನೆ ಎಂದು ನಿತೇಶ್ ರಾಣೆ ಹೇಳಿದ್ದಾರೆ.

ದಿಶಾ ಸುಶಾಂತ್ ಗೆ ಈ ಮಾತು ಹೇಳಿದ್ದರು
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಕಣಕವಲಿ ಕ್ಷೇತ್ರದಿಂದ BJP ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ, 'ಜೂನ್ 8 ರ ರಾತ್ರಿ ನಡೆದ ಪಾರ್ಟಿಯ ವೇಳೆ ದಿಶಾ ಸಾಲಿಯಾನ್ ಜೊತೆಗೆ ದುರ್ವ್ಯವಹಾರ ನಡೆದ ಬಳಿಕ, ದಿಶಾ ಈ ಕುರಿತು ಸುಶಾಂತ್ ಸಿಂಗ್ ರಾಜ್ಪುತ್ ಬಳಿ ಬಂದು ದೂರಿದ್ದರು. ಇದರಿಂದ ಸುಶಾಂತ್ ಕೂಡ ಆಘಾತಕ್ಕೆ ಒಳಗಾಗಿದ್ದರು. 'ದಿಶಾ ಸಾಲಿಯಾನ್ ಸಾವಿನ ಬಳಿಕ ಆಕೆಯ ಬಾಯ್ ಫ್ರೆಂಡ್ ಕಾಣೆಯಾದುದನ್ನು ನಿತೇಶ್ ರಾಣೆ ಪ್ರಶ್ನಿಸಿದ್ದಾರೆ.

Also Read- ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಕಾಲ್ ವಿವರದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಈ ಕುರಿತು ನಿತೇಶ್ ರಾಣೆ ಶಂಕೆ ವ್ಯಕ್ತಪಡಿಸಿದ್ದಾರೆ
ಮುಂಬೈನಿಂದ ಹೊರಹೋಗಲು ರೋಹನ್ ಅವರ ಮೇಲೆ ಒತ್ತಡವಿರಬಹುದು ಎಂಬ ಶಂಕೆಯನ್ನು ನಿತೇಶ್ ರಾಣೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್ ರಾಜ್ಪುತ್ ಹಾಗೂ ದಿಶಾ ಸಾಲಿಯಾನ್ (Disha Salian) ಸಾವು ಪರಸ್ಪರ ಸಂಪರ್ಕ ಹೊಂದಿವೆ. ಆದರೆ ಮುಂಬೈ ಪೊಲೀಸರು ದಿಶಾ ಸಾವಿನ ಆಂಗಲ್ ಕುರಿತು ತನಿಖೆಯನ್ನೇ ನಡೆಸಿಲ್ಲ. ವರದಿಗಳ ಪ್ರಕಾರ ಜೂನ್ 8 ರಂದು ಮಲಾಡ್ ನ ಬಹುಮಹಡಿಯ 14 ಮಹಡಿಯಿಂದ ಬೀಳುವುದರಿಂದ ದಿಶಾ ಸಾವು ಸಂಭವಿಸಿದೆ ಎನ್ನಲಾಗಿದೆ. 

ದಿಶಾ 100 ನಂಬರ್ ಗೆ ಡೈಲ್ ಮಾಡಿದ್ದರು
ದಿಶಾ ಹಾಗೂ ಸುಶಾಂತ್ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿರುವ ನಿತೇಶ್ ರಾಣೆ. "ಈ ಸಂಪೂರ್ಣ ಪ್ರಕರಣದ ಎಲ್ಲ ರಹಸ್ಯಗಳು ರೋಹನ್ ಗೆ ಗೊತ್ತಿವೆ. ಇಂತಹುದರಲ್ಲಿ ರೋಹನ್ ಪ್ರಾಣಕ್ಕೂ ಅಪಾಯವಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾಗೂ ತಾವು ಪತ್ರ ಬರೆದು ದಿಶಾ ಪಾರ್ಟ್ನರ್ ರೋಹನ್ ಗೆ ಭದ್ರತೆ ಒದಗಿಸಲು ಕೋರಿದ್ದಾಗಿ ಹೇಳಿದ್ದಾರೆ. ಜೂನ್ 8ರ ಪಾರ್ಟಿಯಲ್ಲಿ ಓರ್ವ ಶಕ್ತಿಶಾಲಿ ರಾಜಕೀಯ ಮುಖಂಡ ಕೂಡ ಶಾಮೀಲಾಗಿದ್ದರು ಎಂದು ನಿತೇಶ್ ರಾಣೆ ಈ ಮೊದಲು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲ ಜೂನ್ 8 ರಂದು ಪಾರ್ಟಿಯಲ್ಲಿ ನಡೆದ ಘಟನೆಯ ಬಳಿಕ ದಿಶಾ 100 ನಂಬರ್ ಗೆ ಡೈಲ್ ಕೂಡ ಮಾಡಿದ್ದರು ಎಂದು ನಿತೇಶ್ ಹೇಳಿದ್ದಾರೆ.

Trending News