Aishwarya rai Abhishek Bachchan: ಒಂದು ಕಾಲದಲ್ಲಿ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಐಶ್ವರ್ಯ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ, ಐಶ್ವರ್ಯ ರೈ ಎಲ್ಲರ ಮುಂದೆ ಪತಿಯಿಂದ ಮುಜುಗರಕ್ಕೀಡಾದ ವಿಡಿಯೋ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಬಾಲಿವುಡ್‌ನಲ್ಲಿ ಚಿತ್ರರಂಗದಲ್ಲಿ ಕ್ಯೂಟ್ ಕಪಲ್ ಎಂತಲೇ ಜನಪ್ರಿಯರಾಗಿದ್ದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಮದುವೆ ಬಂಧನದಿಂದ ಬೇರ್ಪಡುತ್ತಿದ್ದಾರೆ ಎಂಬ ವದಂತಿಗಳ ನಡುವೆ ಈ ಹಳೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 


ಇದನ್ನೂ ಓದಿ- ತನಗಿಂತ ಕಿರಿಯನೊಂದಿಗೆ ಲವ್, ಮದುವೆಯಾಗಿ ಮೂರೇ ತಿಂಗಳಿಗೆ ಪತಿ 'ಚಟ'ದಿಂದ ಬೇಸತ್ತ ನಟಿ!


ವಾಸ್ತವವಾಗಿ, 2016ರ 'ಸರಬ್‌ಜಿತ್‌' ಚಿತ್ರದ ಪ್ರಮೋಶನಲ್​ ಈವೆಂಟ್​ನ ವಿಡಿಯೋವೊಂದು ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ. ಬಚ್ಚನ್ ಕುಟುಂಬದವರೂ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಜರಿದ್ದ ಈ ಈವೆಂಟ್​ನಲ್ಲಿ ಮಾಧ್ಯಮದವರು ರೆಡ್ ಕಾರ್ಪೆಟ್ ನಲ್ಲಿ ಅಭಿಷೇಕ್-ಐಶ್ವರ್ಯರ ಫೋಟೋ ಕ್ಲಿಕ್ಕಿಸಲು ಕರೆಯುತ್ತಾರೆ. 


ಇದನ್ನೂ ಓದಿ- ಸೌಂದರ್ಯವನ್ನೆ ನಾಚಿಸುವ ಅಂದ.. ಮೂರು ಮಕ್ಕಳ ತಂದೆಯನ್ನು ಮದುವೆಯಾಗಿ ಜೀವನವನ್ನೆ ನರಕ ಮಾಡಿಕೊಂಡ ಈ ನಟಿ ಯಾರು ಗೊತ್ತಾ?


ಮಾಧ್ಯಮದವರ ಮನವಿಗೆ ವಿನಯಪೂರ್ವಕವಾಗಿ ಪ್ರತಿಕ್ರಿಯಿಸಿದ ಐಶ್ವರ್ಯ ರೈ ಫೋಟೋಗಾಗಿ ಪತಿಯನ್ನು ಕರೆಯುತ್ತಾರೆ. ಈ ವೇಳೆ ಐಶ್ ಮಾತು ಕೇಳಿದರೂ ಕೆಳದಂತೆ ಅಭಿಷೇಕ್ ನಿರ್ಲಕ್ಷಿಸುತ್ತಾರೆ. ಪ್ರಯತ್ನ ಬಿಡದ ಐಶ್ವರ್ಯ ಅಭಿಷೇಕ್ ಅವರನ್ನು ಮತ್ತೆ ಕರೆಯುತ್ತಾರೆ. ಕ್ಯಾಮರಾಗಳೆದುರು ಪೋಸ್ ನೀಡುತ್ತಿದ್ದಂತೆ, ಅಭಿಷೇಕ್ ಇದ್ದಕ್ಕಿದ್ದಂತೆ ಐಶ್ವರ್ಯಾರ ಕೈ ಬಿಟ್ಟು ಅಲ್ಲಿಂದ ಹೊರಟುಬಿಡುತ್ತಾರೆ. ಐಶ್ವರ್ಯ ರೈ ಏನೋ ಹೇಳಲು ಪ್ರಯತ್ನಿಸಿದರೂ ಕೂಡ ಹಿಂದಿರುಗಿ ನೋಡದ ಪತಿ ಹಾಗೆಯೇ ತೆರಳುತ್ತಾರೆ. ಈ ವಿಚಿತ್ರ ಕ್ಷಣದ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. 


ಪತಿಯಿಂದ ಮುಜುಗರಕ್ಕೀಡಾದ ವಿಶ್ವ ಸುಂದರಿ ವಿಡಿಯೋವನ್ನು ಇಲ್ಲಿ ವೀಕ್ಷಿಸಿ: 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.