ಬೆಂಗಳೂರು : ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್‌ ಸೋನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಈ ಹೊತ್ತಲ್ಲೇ ಒಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಪವರ್‌ ಸ್ಟಾರ್ ಜೊತೆ ಬಾಲಿವುಡ್ ನಟಿ ಐಶ್ವರ್ಯ ರೈ‌ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾದ್ರೆ ಯಾವುದು ಆ ಸಿನಿಮಾ ಯಾವುದು? ಅಪ್ಪು ಜೊತೆ ಐಶ್ವರ್ಯ ರೈ ನಟಿಸಲಿಲ್ಲ ಏಕೆ? ಇದರ ಕಂಪ್ಲೀಟ್‌ ಡೀಟೇಲ್ಸ್‌ ನಿಮಗಾಗಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್(Puneet Rajkumar).‌.. ಈ ಹೆಸರಲ್ಲೇ ಪವರ್‌ ಇದೆ. ಒಂದು ಗತ್ತಿದೆ. ಹೀಗೆ ಕನ್ನಡಿಗರಿಗೆಲ್ಲಾ ಪ್ರೀತಿಯ ಅಪ್ಪುವಾಗಿದ್ದ ಪುನೀತ್‌ ರಾಜ್‌ ಕುಮಾರ್‌ ಅವರು ನಮ್ಮನ್ನೆಲ್ಲಾ ಅಗಲಿ 3 ತಿಂಗಳಾಗಿದೆ. ಈ ಹೊತ್ತಲ್ಲೇ ಪುನೀತ್‌ ಅವರ ಸಿನಿ ಪಯಣದಲ್ಲಿ ನಡೆದಿದ್ದ ಒಂದೊಂದೇ ಮಹತ್ವದ ಘಟನೆಗಳು ರಿವೀಲ್‌ ಆಗುತ್ತಿವೆ.


ಇದನ್ನೂ ಓದಿ : Shivraj Kumar : ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಅಪ್ಪು ಸಮಾಧಿಗೆ ಭೇಟಿ ನೀಡಿದ ಶಕ್ತಿದಾಮದ ಮಕ್ಕಳು!


ಅಪ್ಪು ಜೊತೆ ನಟಿಸಬೇಕಿತ್ತು ಐಶ್ವರ್ಯ ರೈ!


ಅಂದಹಾಗೆ ಪವರ್‌ ಸ್ಟಾರ್‌ ಪುನೀತ್‌ ಅಭಿನಯದ 'ಅರಸು'(Arasu Movie) ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ ನ ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ದೇಶಕ ಮಹೇಶ್ ಬಾಬು ಪ್ಲ್ಯಾನ್ ಮಾಡಿದ್ರಂತೆ. ಇದೇ ಕಾರಣಕ್ಕೆ ಐಶ್ವರ್ಯಾ ರೈ ಬಚ್ಚನ್‌ರನ್ನು ಅತಿಥಿ ಪಾತ್ರಕ್ಕೆ ಕರೆತರಲು ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಈ ಪ್ಲ್ಯಾನ್‌ ಕೊನೇ ಕ್ಷಣದಲ್ಲಿ ಬದಲಾಗಿತ್ತಂತೆ.


'ಅರಸು' ಅಬ್ಬರ..!


ಅರಸು ಚಿತ್ರಕ್ಕೂ ಮೊದಲು ಪುನೀತ್ ರಾಜ್‌ಕುಮಾರ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಆಕಾಶ್‌ ಸಿನಿಮಾ ಬಂದಿತ್ತು. ಹಾಗೇ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿತ್ತು. ಈ ಕಾರಣಕ್ಕೆ  'ಅರಸು'‌ ಸಿನಿಮಾವನ್ನು ಇನ್ನೂ ಅದ್ಧೂರಿಯಾಗಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಿದ್ದರಂತೆ ಮಹೇಶ್ ಬಾಬು. ಹೀಗಾಗಿಯೇ ಐಶ್ವರ್ಯ ರೈ(Aishwarya Ra) ಅವರನ್ನು ಕ್ಲೈಮ್ಯಾಕ್ಸ್‌ಗೆ ಕರೆತರಲು ಪ್ರಯತ್ನಿಸಲಾಗಿತ್ತು.


ಭರವಸೆ ಕೂಡ ಸಿಕ್ಕಿತ್ತು 


ಐಶ್ವರ್ಯಾ ರೈ ಕುಟುಂಬಕ್ಕೆ ಆತ್ಮೀಯರಾಗಿದ್ದ ಚಂದ್ರಶೇಖರ ಸ್ವಾಮಿಜಿ(Chandrashekar Swamiji) ಅವರನ್ನು ಸಂಪರ್ಕಿಸಿ ಅರಸು ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುವಂತೆ ಮನವಿ ಮಾಡಲಾಗಿತ್ತು. ಚಂದ್ರಶೇಖರ ಸ್ವಾಮಿಜಿ ಐಶ್ವರ್ಯಾ ರೈ ತಂದೆ-ತಾಯಿಗೆ ಆತ್ಮೀಯರಾಗಿದ್ದರು. ಹೀಗಾಗಿಯೇ ಸ್ವಾಮಿಜಿಗಳೇ ಮಾತನಾಡುವ ಭರವಸೆ ನೀಡಿದ್ದರಂತೆ.


ಇದನ್ನೂ ಓದಿ : Radhe Shyam release date: ಈ ದಿನದಂದು ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'


ಖುದ್ದು ಅಣ್ಣಾವ್ರ ಕರೆ..!


ಡಾ. ರಾಜ್‌ ಕುಮಾರ್‌(Dr.Rajkumar)  ಅವರು ಕೂಡ ಚಂದ್ರಶೇಖರ ಸ್ವಾಮಿಜಿಯವರ ಬಳಿ ಮಾತಾಡಿದ್ದರಂತೆ. ಚಂದ್ರಶೇಖರ ಸ್ವಾಮಿಜಿಯವರಿಗೂ ಅಣ್ಣಾವ್ರ ಕುಟುಂಬಕ್ಕೆ ಹತ್ತಿರದ ಸಂಬಂಧವಿತ್ತು. ಹೀಗಾಗಿ ಅಣ್ಣಾವ್ರೇ ಸ್ವಾಮಿಜಿಗಳಲ್ಲಿ ಮನವಿ ಮಾಡಿಕೊಂಡಿದ್ದರಂತೆ. ಆದರೆ ಆ ಹೊತ್ತಲ್ಲಿ ಐಶ್ವರ್ಯ ರೈ ಇಂಗ್ಲಿಷ್ ಸಿನಿಮಾ 'ಪ್ರವೋಕ್ಡ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಂತೆ. ಈ ಕಾರಣಕ್ಕೆ ಐಶ್ವರ್ಯ ರೈ ಅವರನ್ನ ಅರಸು ಚಿತ್ರದ ಅತಿಥಿ ಪಾತ್ರಕ್ಕೆ ಕರೆತರುವ ಪ್ಲ್ಯಾನ್‌ ಸಕ್ಸಸ್‌ ಆಗಲಿಲ್ಲ.‌ ಇದೇ ಕಾರಣಕ್ಕೆ ಅರಸು ಚಿತ್ರದಲ್ಲಿ ಶ್ರೇಯಾ ಸರಣ್ ಐಶ್‌ ಪಾತ್ರವನ್ನ ನಿರ್ವಹಿಸಿದ್ದರು.


ಒಟ್ಟಿನಲ್ಲಿ ಅರಸು ಸಿನಿಮಾ ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವ ಸಿನಿಮಾ(Movie). ಕುಟುಂಬ ಸಮೇತ ಈ ಚಿತ್ರವನ್ನು ಆನಂದಿಸಿದ್ದವರು ಕೋಟ್ಯಂತರ ಮಂದಿ. ಇದೀಗ ಅರಸು ಬಗ್ಗೆ ದೊಡ್ಡ ಸುದ್ದಿಯೊಂದು ಸದ್ದು ಮಾಡುತ್ತಿದ್ದು, ಹಲವು ವರ್ಷಗಳ ನಂತರ ಅರಸು ಚಿತ್ರದ ನಿರ್ದೇಶಕ ಮಹೇಶ್ ಬಾಬು‌ ಸಖತ್ ಸೀಕ್ರೇಟ್‌ ರಿವೀಲ್‌ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.