Love Mocktail 2 ಟ್ರೈಲರ್​ ರಿಲೀಸ್​, ನಿಧಿಮಾ ನೆನಪಲ್ಲೇ ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ!

Love Mocktail 2 Trailer: ಲವ್​ ಮಾಕ್​ಟೈಲ್ 2 ಸಿನಿಮಾದ ಟ್ರೈಲರ್​ ಇಂದು ರಿಲೀಸ್​ ಆಗಿದೆ. ಈ ಟ್ರೈಲರ್​​ನಲ್ಲಿ ನಿಧಿಮಾ ನೆನಪಲ್ಲೇ ಆದಿ ಇದ್ದಾರೆ, ಅಲ್ಲದೇ ಮತ್ತೊಂದು ಮದುವೆಗೆ ಆದಿ ರೆಡಿಯಾಗುತ್ತಿದ್ದಾರೆ. 

Edited by - Zee Kannada News Desk | Last Updated : Feb 1, 2022, 07:27 PM IST
  • ಲವ್​ ಮಾಕ್​ಟೈಲ್ 2 ಸಿನಿಮಾದ ಟ್ರೈಲರ್​ ಇಂದು ರಿಲೀಸ್
  • ನಿಧಿಮಾ ನೆನಪಲ್ಲೇ ಆದಿ ಇದ್ದಾರೆ, ಅಲ್ಲದೇ ಮತ್ತೊಂದು ಮದುವೆಗೆ ಆದಿ ರೆಡಿ
  • ಸೆನ್ಸಾರ್ ಮಂಡಳಿಯಿಂದ 'U' ಪ್ರಮಾಣ ಪತ್ರ ಪಡೆದಿದೆ
Love Mocktail 2 ಟ್ರೈಲರ್​ ರಿಲೀಸ್​, ನಿಧಿಮಾ ನೆನಪಲ್ಲೇ ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ!   title=
ಲವ್​ ಮಾಕ್​ಟೈಲ್ 2

Love Mocktail 2 Trailer: 2020ರ ಆರಂಭದಲ್ಲಿ ರಿಲೀಸ್​ ಆದ ಲವ್​ ಮಾಕ್ಟೇಲ್​ (Love Mocktail)ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಈ ಚಿತ್ರದ ಸೀಕ್ವೆಲ್​ ಸಿದ್ಧಗೊಂಡಿದೆ. 

ಲವ್​ ಮಾಕ್​ಟೈಲ್​-1 ಸಿನಿಮಾ ಯಶಸ್ಸಿನಲ್ಲಿರುವಾಗಲೇ ಚಿತ್ರತಂಡ, ಲವ್​ ಮಾಕ್​ಟೈಲ್​ 2 ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಸಿನಿಮಾ ಕೂಡ ರೆಡಿಯಾಗಿದೆ. ಇಂದು ಲವ್​ ಮಾಕ್​ಟೈಲ್ 2 ಸಿನಿಮಾ ಸಿದ್ಧಗೊಂಡಿದೆ.

ಈ ಟ್ರೈಲರ್​​ನಲ್ಲಿ ಆದಿಗೆ ಮತ್ತೆ ನಿಧಿಮಾ ನೆನಪು ಕಾಡಿದೆ. ಆದರೆ ಇಲ್ಲೊಂದು ವಿಶೇಷವೆಂದರೆ ಅವರು ಮತ್ತೊಂದು ಮದುವೆಗೆ ಆದಿ ರೆಡಿಯಾಗುತ್ತಿದ್ದಾರೆ. ಲವ್ ಮಾಕ್ಟೇಲ್ 2 ಈಗಾಗಲೇ ಸೆನ್ಸಾರ್ ಮಂಡಳಿಯಿಂದ 'U' ಪ್ರಮಾಣ ಪತ್ರ ಪಡೆದಿದೆ. 

ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳಿಂದಲೇ ಸದ್ದು 'ಲವ್ ಮಾಕ್ಟೇಲ್ 2' ಮಾಡಿದೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಅವರೇ ನಿರ್ದೇಶನ ಮಾಡಿದ್ದು,, ನಾಯಕಿಯರಾಗಿ ಮಿಲನಾ ನಾಗರಾಜ್ ಮತ್ತು ರಾಚೆಲ್ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ (Milana Nagaraj) 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಇದನ್ನೂ ಓದಿ: ಹೊಸ ಡಿಜಿಟಲ್ ರಿಯಾಲಿಟಿ ಶೋ ನಿರ್ಮಿಸಲಿದ್ದಾರೆ ಏಕ್ತಾ ಕಪೂರ್

ಲವ್​ ಮಾಕ್ಟೇಲ್ ಯಶಸ್ಸಿನ ಬಳಿಕ ಹಲವು ಕಾಲದಿಂದ ಪ್ರೀತಿಸುತ್ತಿದ್ದ ಡಾರ್ಲಿಂಗ್​ ಕೃಷ್ಣ ಮತ್ತು ವಿಲನಾ ನಾಗರಾಜ್ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈಗ ಅವರ ಬಳಿ ಹಲವು ಸಿನಿಮಾ ಆಫರ್​ಗಳಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News