Aishwarya Abhishek divorce : ಬಾಲಿವುಡ್ ತಾರೆಯರು ತಮ್ಮ ಮದುವೆಗಳು ಮತ್ತು ಬ್ರೇಕಪ್‌ಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳ ವಿಚ್ಛೇದನ ಸಂಖ್ಯೆ ಹೆಚ್ಚಾಗಿವೆ. ಯಾರು, ಯಾವಾಗ ಬೇರ್ಪಡುತ್ತಾರೆ ಎಂದು ಊಹಿಸಲು ಕಷ್ಟವಾಗಿದೆ. ಇದೀಗ ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ವಿಚ್ಛೇದನದ ಸುದ್ದಿ ಚರ್ಚೆಯಲ್ಲಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

20 ಏಪ್ರಿಲ್ 2007 ರಂದು ಅಭಿಷೇಕ್ ಮತ್ತು ಐಶ್ವರ್ಯಾ ವಿವಾಹವಾದರು. ಅಮಿತಾಭ್ ಬಚ್ಚನ್ ಅವರ ಬಂಗಲೆ ಪ್ರತೀಕ್ಷಾದಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಿತು. ಅವರ ಮಗಳು ಆರಾಧ್ಯ 16 ನವೆಂಬರ್ 2011 ರಂದು ಜನಿಸಿದರು. ಅಭಿಷೇಕ್ ಮತ್ತು ಐಶ್ವರ್ಯಾ ರೈ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿವೆ ಎಂದು ವದಂತಿಗಳಿವೆ, ಆದರೆ ಇಬ್ಬರೂ ಅದನ್ನು ಇನ್ನೂ ಖಚಿತಪಡಿಸಿಲ್ಲ. 


ಇದನ್ನೂ ಓದಿ:ಕ್ರಿಕೆಟಿಗರು, ಬಾಲಿವುಡ್‌ ಸ್ಟಾರ್‌ ಮಕ್ಕಳು ಓದುವ ಶಾಲೆ ಯಾವುದು, ಶುಲ್ಕ ಎಷ್ಟು ಗೊತ್ತೆ..?


ಇದೀಗ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರ ಹಂತ ತಲುಪಿವೆ ಎನ್ನಲಾಗುತ್ತಿದೆ. ಸಂಬಂಧ ಕೆಟ್ಟ ಹಂತಕ್ಕೆ ಬಂದಾಗ, ದಂಪತಿಗಳು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಬೇರ್ಪಡುತ್ತಾರೆ, ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಇಂತಹ ಯಾವುದೇ ನಿರ್ಧಾರ ಕೈಗೊಂಡಿರುವ ಬಗ್ಗೆ ಇದುವರೆಗೂ ಸುಳಿವು ನೀಡುವುದಿಲ್ಲ. 


ಐಶ್ವರ್ಯಾ ಮತ್ತು ಅಭಿಷೇಕ್ ತಮ್ಮ ಮಗಳ ಕಾರಣಕ್ಕಾಗಿ ಒಟ್ಟಿಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಸುದೀರ್ಘ ಸ್ನೇಹದ ನಂತರ ಇಬ್ಬರೂ ಪರಸ್ಪರ ಜೀವನ ಸಂಗಾತಿಯಾಗಿ ಒಪ್ಪಿಕೊಂಡರು. ಇಬ್ಬರೂ 'ಗುರು', 'ಧೂಮ್ 2' ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅಲ್ಲದೆ ಇತ್ತೀಚಿಗೆ ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು, ನೆಟ್ಟಿಗರ ಈ ವಂದತಿ ಸುಳ್ಳು ಎಂದು ನಿರೂಪಿಸಿದ್ದಾರೆ. 


ಇದನ್ನೂ ಓದಿ:“ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಕಾರ್ತಿಕ್ ಬಳಿ ಸತ್ಯ ಬಾಯ್ಬಿಟ್ಟ ವಿನಯ್


ಐಶ್ವರ್ಯಾ ರೈ ಬಚ್ಚನ್ ಕುಟುಂಬವನ್ನು ತೊರೆದಿದ್ದಾರೆ ಎಂಬ ವದಂತಿ ಇದೆ. ಜಯಾ ಬಚ್ಚನ್ ಮತ್ತು ಐಶ್ವರ್ಯಾ ನಡುವೆ ಹಲವು ಸಮಸ್ಯೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಕುರಿತು ಈ ಸ್ಟಾರ್‌ ಜೋಡಿ ಎಲ್ಲಿಯೂ ಚಕಾರವೇತ್ತದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಮುಂದಿನ ದಿನ ಎನಾಗುತ್ತೆ ಅಂತ ಕಾಯ್ದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.