ಕ್ರಿಕೆಟಿಗರು, ಬಾಲಿವುಡ್‌ ಸ್ಟಾರ್‌ ಮಕ್ಕಳು ಓದುವ ಶಾಲೆ ಯಾವುದು, ಶುಲ್ಕ ಎಷ್ಟು ಗೊತ್ತೆ..?

Ambani School : ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮಹತ್ವ ಬಹಳಷ್ಟು ಹೆಚ್ಚಾಗಿದೆ. ಸಾಮಾನ್ಯ ಪ್ರಜೆಯಾಗಿರಲಿ ಅಥವಾ ದೊಡ್ಡ ಸ್ಟಾರ್ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಮಕ್ಕಳು ಉತ್ತಮ ಶಾಲೆಯಿಂದ ಓದಬೇಕೆಂದು ಬಯಸುತ್ತಾರೆ. ಅದರಂತೆ ಬಾಲಿವುಡ್‌ ಸ್ಟಾರ್‌ ಮಕ್ಕಳು, ಕ್ರಿಕೆಟಿಗರ ಮಕ್ಕಳು ಹೆಚ್ಚಾಗಿ ಒಂದೇ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಹಾಗಿದ್ರೆ ಆ ಶಾಲೆ ಯಾವುದು..? ಅಲ್ಲಿನ ಫೀ ಎಷ್ಟು ನೋಡೋಣ ಬನ್ನಿ.

Written by - Krishna N K | Last Updated : Dec 19, 2023, 06:25 PM IST
  • ಸಾಮಾನ್ಯ ಪ್ರಜೆಯಾಗಿರಲಿ ಅಥವಾ ದೊಡ್ಡ ಸ್ಟಾರ್ ಆಗಿರಲಿ ಶಿಕ್ಷಣ ಮುಖ್ಯ.
  • ಪ್ರತಿಯೊಬ್ಬರೂ ತಮ್ಮ ಮಕ್ಕಳು ಉತ್ತಮ ಶಾಲೆಯಿಂದ ಓದಬೇಕೆಂದು ಬಯಸುತ್ತಾರೆ.
  • ಬಾಲಿವುಡ್‌ ಸ್ಟಾರ್‌ ಮಕ್ಕಳು, ಕ್ರಿಕೆಟಿಗರ ಮಕ್ಕಳು ಹೆಚ್ಚಾಗಿ ಯಾವ ಶಾಲೆಯಲ್ಲಿ ಒದುತ್ತಾರೆ ಗೊತ್ತೆ..?
ಕ್ರಿಕೆಟಿಗರು, ಬಾಲಿವುಡ್‌ ಸ್ಟಾರ್‌ ಮಕ್ಕಳು ಓದುವ ಶಾಲೆ ಯಾವುದು, ಶುಲ್ಕ ಎಷ್ಟು ಗೊತ್ತೆ..? title=

Ambani School free : ಕ್ರಿಕೆಟಿಗರು, ಬಾಲಿವುಡ್ ತಾರೆಯರು, ಉದ್ಯಮಿಗಳ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯ ಜನರೇ ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ಫೀ ಕಟ್ಟಿ ಓದಿಸುತ್ತಿರುವಾಗ ಇನ್ನು ಸ್ಟಾರ್‌ಗಳು ಯಾವ ಸ್ಕೂಲ್‌ನಲ್ಲಿ ಅವರ ಮಕ್ಕಳನ್ನು ಓದಿಸುತ್ತಿರಬಹುದು ಅಲ್ಲದೆ, ಎಷ್ಟು ಹಣ ಕಟ್ಟಬಹುದು ಎಂಬ ಪ್ರಶ್ನೆ ನಿಮ್ಮ ತಲೆಗೆ ಬಂದಿದ್ಯಾ..? ಬನ್ನಿ ಈ ಕುರಿತ ಮಾಹಿತಿ ಇಲ್ಲಿದೆ.

ಹೌದು.. ಹೆಚ್ಚಿನ ಸ್ಟಾರ್ ಮಕ್ಕಳು ನೀತಾ ಅಂಬಾನಿಯ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಾರೆ. ಇಂದು ನಾವು ಈ ಶಾಲೆಯ ಬಗ್ಗೆ ನಿಮಗೆ ಹೇಳಲಿದ್ದೇವೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಅನ್ನು 2003 ರಲ್ಲಿ ಪ್ರಾರಂಭಿಸಲಾಯಿತು. ಈ ಶಾಲೆಯನ್ನು ಮುಖೇಶ್ ಅಂಬಾನಿ ಅವರ ತಂದೆಯ ನೆನಪಿಗಾಗಿ ತೆರೆಯಲಾಗಿದೆ. 

ಇದನ್ನೂ ಓದಿ: “ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಕಾರ್ತಿಕ್ ಬಳಿ ಸತ್ಯ ಬಾಯ್ಬಿಟ್ಟ ವಿನಯ್

ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ನೀತಾ ಅಂಬಾನಿ ಸ್ಥಾಪಿಸಿದ್ದಾರೆ. ಅವರ ಮಗಳು ಇಶಾ ಅಂಬಾನಿ ಸಹ-ಸಂಸ್ಥಾಪಕರಾಗಿದ್ದಾರೆ. ಈ ಶಾಲೆಯು ಭಾರತದ ಅತ್ಯಂತ ಪ್ರಸಿದ್ಧ ಶಾಲೆಗಳಲ್ಲಿ ಒಂದಾಗಿದೆ. ಇನ್ನು ಸೌಲಭ್ಯಗಳ ಬಗ್ಗೆ ಹೇಳುವುದಾದರೆ ಈ ಶಾಲೆಯಲ್ಲೂ ಹಲವಾರು ಸೌಲಭ್ಯಗಳಿವೆ. ಈ ಶಾಲೆಯಲ್ಲಿ ಅನೇಕ ಸ್ಟಾರ್ ಮಕ್ಕಳು ಓದಲು ಇದೇ ಕಾರಣ. 

ಮುಖೇಶ್ ಅಂಬಾನಿ ಅವರ ಪುತ್ರ ಮತ್ತು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಕೂಡ 2009 ರಲ್ಲಿ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಿಂದ IB ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ಮಾನದಂಡಗಳನ್ನು ತರುತ್ತಿದೆ. ಕೇವಲ 20 ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ಶಾಲೆಗಳ ಲಿಸ್ಟ್‌ನಲ್ಲಿದೆ. 

ಇದನ್ನೂ ಓದಿ:Rachitha Ram: ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಸ್ವಿಸ್ ಟ್ರಡಿಷನಲ್ ಡ್ರೆಸ್ ಧರಿಸಿ ಕುಣಿದು ಕುಪ್ಪಳಿಸಿದ ಡಿಂಪಲ್ ಕ್ವೀನ್!

ಶುಲ್ಕ ಎಷ್ಟು : ಮಾಧ್ಯಮ ವರದಿಗಳ ಪ್ರಕಾರ, ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಎಲ್‌ಕೆಜಿಯಿಂದ 7ನೇ ತರಗತಿವರೆಗೆ ವಾರ್ಷಿಕ 1 ಲಕ್ಷದ 70 ಸಾವಿರ ಶುಲ್ಕವಿದೆ. ಮಾಸಿಕವಾಗಿ ನೋಡಿದರೆ ರೂ. 14,000. 8 ರಿಂದ 10 ನೇ ತರಗತಿಗೆ ICSE ಯ ವಾರ್ಷಿಕ ಶುಲ್ಕ 1,85,000 ರೂ. ಅದೇ ರೀತಿ, IGCSE ಗೆ 8 ರಿಂದ 10 ನೇ ತರಗತಿಗೆ ವಾರ್ಷಿಕ ಶುಲ್ಕ ರೂ. 5.9 ಲಕ್ಷ. IBDP ಬೋರ್ಡ್ ಕ್ಲಾಸ್ 11 ಮತ್ತು 12 ವಾರ್ಷಿಕ ಶುಲ್ಕ 9.65 ಲಕ್ಷ ರೂ. 

ಇನ್ನು ಬಾಲಿವುಡ್‌ ಸ್ಟಾರ್‌ಗಳಾದ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಮತ್ತು ಶಾರುಖ್-ಗೌರಿ ಅವರ ಮಗ ಇಲ್ಲಿನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಇದಲ್ಲದೆ, ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಅನನ್ಯ ಪಾಂಡೆ, ಸುಹಾನಾ ಖಾನ್, ಆರ್ಯನ್ ಖಾನ್, ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಮತ್ತು ಸಾರಾ ತೆಂಡೂಲ್ಕರ್ ಸೇರಿದಂತೆ ಅನೇಕ ಸ್ಟಾರ್ ಮಕ್ಕಳು ಇದೇ ಶಾಲೆಯಲ್ಲಿ ಓದಿದ್ದಾರೆ.

ಇದನ್ನೂ ಓದಿ: ‘ಹನುಮಾನ್’ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್..! ಕನ್ನಡದಲ್ಲಿಯೂ ಬಂತು ಟ್ರೇಲರ್

ಈ ಶಾಲೆಯಲ್ಲಿ 60 ತರಗತಿ ಕೊಠಡಿಗಳಿವೆ. ಪ್ರತಿ ತರಗತಿ ಕೊಠಡಿಯು ಸಾರ್ವಜನಿಕ ವಿಳಾಸ ವ್ಯವಸ್ಥೆ, ಡಿಜಿಟಲ್ ಗಡಿಯಾರಗಳು, ಡಿಸ್ಪ್ಲೇ ಮತ್ತು ರೈಟಿಂಗ್ ಬೋರ್ಡ್, ಲಾಕರ್‌ಗಳು, ಕಸ್ಟಮ್ ನಿರ್ಮಿತ ಪೀಠೋಪಕರಣಗಳೊಂದಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ, ಮಲ್ಟಿಮೀಡಿಯಾ ಬೆಂಬಲ ಮತ್ತು AC ಅನ್ನು ಹೊಂದಿದೆ.

ಕ್ರೀಡೆಗಳಿಗೂ ಇಲ್ಲಿ ವಿಶೇಷ ಗಮನ ನೀಡಲಾಗುತ್ತದೆ. ಶಾಲೆಯು ಟೆನ್ನಿಸ್ ಮತ್ತು ಬ್ಯಾಸ್ಕೆಟ್‌ಬಾಲ್ ಅಂಕಣಗಳನ್ನು ಹೊಂದಿದೆ. ಹೊರಾಂಗಣ ಕ್ರೀಡೆಗಳಿಗೆ ಹಲವು ಆಯ್ಕೆಗಳನ್ನು ಹೊಂದಿದೆ. ಇದರ ಆಟದ ಮೈದಾನವು 2.3 ಎಕರೆಗಳಷ್ಟು ವಿಸ್ತಾರವಾಗಿದೆ. ಇದಲ್ಲದೆ, ಶಾಲೆಯಲ್ಲಿ ಕಲಾ ಕೊಠಡಿ, ಕಲಿಕಾ ಕೇಂದ್ರ, ಯೋಗ ಕೊಠಡಿ, ಪ್ರದರ್ಶನ ಕಲೆಗಳ ಕೇಂದ್ರ, ಮಲ್ಟಿಮೀಡಿಯಾ ಆಡಿಟೋರಿಯಂ ಕೂಡ ಇದೆ. ಶಾಲೆಯ ವೈದ್ಯಕೀಯ ಕೇಂದ್ರವು ರೌಂಡ್-ದಿ-ಕ್ಲಾಕ್ ಸೇವೆಗಳನ್ನು ಒದಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News