ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್ʼ ಉಪನಾಮ ಸೇರಿಸಿದ್ದಕ್ಕೆ ಗರಂ.!
Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ `ಐಶ್ವರ್ಯಾ` ಸಾಕು ಎಂದು ಉತ್ತರಿಸಿದರು.
Aishwarya Rai Bachchan Viral Video News: ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಐಶ್ವರ್ಯಾ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಆದರೆ ಇತಿಚೆಗೆ ಅವರಿಬ್ಬರು ಬೇರ್ಪಡುವ ವದಂತಿ ಶುರುವಾಗಿದೆ. ಈ ಬೆನ್ನಲ್ಲೆ ಹಳೆಯ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಐಶ್ವರ್ಯಾ ಸಂದರ್ಶನಕ್ಕೆ ಕುಳಿತಿದ್ದರು. ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ 'ಐಶ್ವರ್ಯಾ' ಸಾಕು ಎಂದು ಉತ್ತರಿಸಿದರು.
ಇದನ್ನೂ ಓದಿ: ಮುಂದಿನ ವರ್ಷವೇ ಆಂಕರ್ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !
ಐಶ್ವರ್ಯಾ ಅವರ ಉಪನಾಮ ಈಗ ಅಧಿಕೃತವಾಗಿ 'ರೈ ಬಚ್ಚನ್ ಅಲ್ಲವೇ' ಎಂದು ಆಂಕರ್ ಕೇಳಿದರು. ಇದಕ್ಕೆ ಆಕರ್ಷಕವಾಗಿ ಐಶ್ವರ್ಯಾ ಉತ್ತರಿಸಿದರು. ವೃತ್ತಿಪರವಾಗಿ 'ಐಶ್ವರ್ಯಾ ರೈ' ಎಂದು ನನ್ನನ್ನು ಕರೆಯುತ್ತಾರೆ. ಮಹಿಳೆಯರು ತಮ್ಮ ಗುರುತಿಗಾಗಿ ಗಂಡನ ಹೆಸರನ್ನು ಅವಲಂಬಿಸಬಾರದು ಎಂದು ನನ್ನ ಅತ್ತೆ ಜಯಾ ಬಚ್ಚನ್ ಹೇಳಿದ್ದರು ಎಂದು ಐಶ್ವರ್ಯಾ ಈ ವಿಡಿಯೋದಲ್ಲಿ ಹೇಳುತ್ತಾರೆ.
ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಜಯಾ ಅಮಿತಾಭ್ ಬಚ್ಚನ್ ಎಂದು ಕರೆಸಿಕೊಳ್ಳಲು ಜಯಾ ಬದರಿ ನಿರಾಕರಿಸಿದ್ದರು. ಗಂಡನ ಹೆಸರಿನಿಂದ ಕರೆದಿದ್ದಕ್ಕೆ ಕೋಪಗೊಡರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?
ಐಶ್ವರ್ಯಾ ರೈ ಬಚ್ಚನ್ ಅವರ ವೈವಾಹಿಕ ಜೀವನದ ಬಗ್ಗೆ ಬಹಳ ದಿನಗಳಿಂದ ಗಾಸಿಪ್ ನಡೆಯುತ್ತಿದೆ. ವರದಿ ಪ್ರಕಾರ, ಅಭಿಷೇಕ್ ಮತ್ತು ಐಶ್ವರ್ಯಾ ಮಧ್ಯೆ ಭೀನ್ನಾಭಿಪ್ರಾಯ ಮೂಡಿದೆ. ಮಗಳು ಆರಾಧ್ಯಗಾಗಿ ಒಟ್ಟಿಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವನ್ನು ಸುಳ್ಳು ಎಂಬಂತೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅನೇಕ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.