ನವದೆಹಲಿ : ದಕ್ಷಿಣದ ಪ್ರಮುಖ ನಿರ್ಮಾಪಕ ದಿಲ್ ರಾಜು (Dilraju) ಅವರೊಂದಿಗೆ ಹಿಂದಿ ನಟ ಅಜಯ್ ದೇವ್ ಗನ್ (Ajay Devgan) ಮುಂದಿನ ಚಿತ್ರ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಅಜಯ್ ದೇವ್ ಗನ್ ಶುಕ್ರವಾರ ಪ್ರಕಟಿಸಿದ್ದಾರೆ. ಅಜಯ್ ದೇವಗನ್ ತೆಲುಗಿನ ಹಿಟ್ ಸಿನಿಮಾ ನಂದಿ (Nandi) ಚಿತ್ರದ ರಿಮೇಕ್ ನಲ್ಲಿ ನಟಿಸಲಿದ್ದಾರೆ. ಇದು ಮೂಲತಃ ಅಪರಾಧ ಜಗತ್ತಿನ ಕತೆಯನ್ನೊಳಗೊಂಡ ಚಿತ್ರವಾಗಿದೆ. ತೆಲುಗಿನಲ್ಲಿ ಇದು ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. 


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮದ ಮೂಲಕ ಫೋಷಣೆ : 
ಅಜಯ್ ದೇವ್ ಗನ್ (Ajay Devgan) ಸಾಮಾಜಿಕ ಮಾಧ್ಯಮದ ಮೂಲಕ  ಸುದ್ದಿಯನ್ನು ಹಂಚಿಕೊಂಡಿದ್ದಾರೆ. 'ಎಲ್ಲರೊಂದಿಗೆ ಒಂದು ಪ್ರಮುಖ ಕಥೆಯನ್ನು ಹಂಚಿಕೊಳ್ಳುವ ಸಮಯ ಎಂದು ಅಜಯ್ ದೇವ್ ಗನ್ ಹೇಳಿದ್ದಾರೆ. ಹ್ಯಾಶ್‌ಟ್ಯಾಗ್ ದಿಲ್ರಾಜು ಪ್ರೊಡಕ್ಷನ್ಸ್ ಅಟ್ ದಿ ರೆಟ್ ಏಡ್ ಫಿಲ್ಮ್ಸ್ ತೆಲುಗು ಹಿಟ್ ನಂದಿ ಚಿತ್ರದ (Cinema) ಹಿಂದಿ ರಿಮೇಕ್ ಗೆ ಎಲ್ಲಾ ತಯಾರಿ ನಡೆದಿದೆ ಎಂದು ಬರೆದಿದ್ದಾರೆ. 


ಅಭಿಮಾನಿಯ ಸಂತೋಷಕ್ಕಾಗಿ ಕಮಲ್ ಹಾಸನ್ ಮಾಡಿಯೇ ಬಿಟ್ಟರು ಈ ಕೆಲಸ ..!ನಂದಿಯ ಬಗ್ಗೆ ಅಜಯ್ ಮಾತು : 


ನಂದಿಯ ಬಗ್ಗೆ ಅಜಯ್ ಮಾತು : 
'ನಂದಿ (Nandi) ಒಂದು ಪ್ರಮುಖ ಚಿತ್ರ, ಇದು ಆಡಳಿತದಲ್ಲಿನ ಕೆಲವು ನ್ಯೂನತೆಗಳನ್ನು ಬಹಿರಂಗಪಡಿಸುತ್ತದೆ. ಮೂಲ ತೆಲುಗು ಆವೃತ್ತಿಯು ಪರಿಣಾಮಕಾರಿಯಾಗಿದ್ದು ಮನಸ್ಸಿಗೆ ತಟ್ಟುವಂತ ಚಿತ್ರವಾಗಿದೆ ಎಂದಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ (remake) ಮಾಡಲು ದಿಲ್ ರಾಜು ಮತ್ತು ನಾನು ಕೈಜೋಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.


ಈ ಚಿತ್ರದ ಇತರ ತಾರಾಂಗಣದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 


ಇದನ್ನೂ ಓದಿ : Living Liquidz ಮೇಲೆ ವಂಚನೆ ಆರೋಪ ಮಾಡಿದ ನಟಿ ಶಬಾನಾ ಅಜ್ಮಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.