ನವದೆಹಲಿ : ನಟ, ರಾಜಕಾರಣಿ ಕಮಲ್ ಹಾಸನ್ (Kamal Haasan) ಅಭಿಮಾನಿಯೊಬ್ಬರು ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ವಿಚಾರ ತಿಳಿದ ಕಮಲ್ ಹಾಸನ್, ಅಭಿಮಾನಿಗೆ ವಿಡಿಯೋ ಕರೆ (Video call) ಮಾಡಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಅಭಿಮಾನಿಯೊಂದಿಗೆ ಮಾತುಕತೆ ನಡೆಸಿ ಅವರಿಗೆ ಧೈರ್ಯ ತುಂಬಿದ್ದಾರೆ. ಇದೀಗ ಅವರಿಬ್ಬರ ಮಾತುಕತೆಯ ವಿಡಿಯೀ ಸೋಷಿಯಲ್ ಮಿಡಿಯಾದಲ್ಲಿ (Social media) ವೈರಲ್ ಆಗುತ್ತಿದೆ.
ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿ :
ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿ ಸಾಕೇತ್ ಗೆ ನಟ ಕಮಲ್ ಹಾಸನ್ (Kamal Haasan) ಎಂದರೆ ಬಹಳ ಪ್ರೀತಿ ಅಭಿಮಾನ. 2004 ರಲ್ಲಿ ಬಿಡುಗಡೆಯಾದ 'ವೀರುಮಂಡಿ'ಚಿತ್ರದ ನಂತರ ಸಾಕೇತ್ ಅವರನ್ನು ಅವರ ಸ್ನೇಹಿತರು, ಕುಟುಂಬ ಸದಸ್ಯರು 'ವೀರುಮಂಡಿ' ಎಂದೇ ಕರೆಯುತ್ತಾರೆ. ಇದೀಗ ಸಾಕೇತ್ ಗೆ ಕಮಲ್ ಹಾಸನ್ ವಿಡಿಯೋ ಕರೆ (Video call) ಮಾಡಿರುವುದು ತಿಳಿಯುತ್ತಿದ್ದಂತೆ ಸಾಕೇತ್ ಗೆ ಒಂದೆಡೆ ಸಂತೋಷವಾದರೆ, ಮತ್ತೊಂದೆಡೆ ಆಶ್ಚರ್ಯ.
ಇದನ್ನೂ ಓದಿ : Living Liquidz ಮೇಲೆ ವಂಚನೆ ಆರೋಪ ಮಾಡಿದ ನಟಿ ಶಬಾನಾ ಅಜ್ಮಿ
10 ನಿಮಿಷಗಳ ಮಾತುಕತೆ :
ಕಮಲ್ ಹಾಸನ್ ತನ್ನ ಅಭಿಮಾನಿ ಸಾಕೆತ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಸುಮಾರು ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಾಕೇತ್ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ವೇಳೆ ಮಾತನಾಡಿದ ಸಾಕೇತ್ (Saketh) ತಾನು ಈ ರೋಗದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ. ಅಲ್ಲದೆ ತನ್ನ ಪುಟ್ಟ ಕಂದನಿಗಾಗಿ ಬದುಕಿರುವುದಾಗಿಯೂ ಹೇಳಿದ್ದಾರೆ.
ಸಾಕೇತ್ ಅವರ ಸೋದರಸಂಬಂಧಿ ಸಂಧ್ಯಾ ವೈದ್ಯನಾಥನ್, ಸಾಕೇತ್ ಅವರ ಆಶಯವನ್ನು ಈಡೇರಿಸಲು ಕಮಲ್ ಹಾಸನ್ ಅವರ ಕಚೇರಿಯನ್ನು (Kamal Haasan office) ಸಂಪರ್ಕಿಸಿದ್ದರು. ಸಾಕೇತ್ ಆಸೆಯನ್ನು ಈಡೇರಿಸಲು ಸಹಕರಿಸಿದ ಕಮಲ್ ಹಾಸನ್ ಕಚೇರಿ ಸಿಬ್ಬಂದಿಗೆ, ಸಂಧ್ಯಾ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ : ಸೈಕಲ್ ಮೇಲೆ ಮೊಟ್ಟೆ, ತರಕಾರಿ ಮಾರಾಟ ಮಾಡಲು ಮುಂದಾದ ನಟ ಸೋನು ಸೂದ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.