ನವದೆಹಲಿ: ಬಾಲಿವುಡ್ 'ಸಿಂಘಮ್' ಎಂದೇ ಹೆಸರಾಗಿರುವ ನಟ ಅಜಯ್ ದೇವಗನ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಪರಿಸ್ಥಿತಿಯಲ್ಲೇ ಸಿನಿಮಾ ಶೂಟಿಂಗ್'ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅಜಯ್ ದೇವಗನ್ ಅವರು ಲವ್ ರಂಜನ್ ನಿರ್ದೇಶಿಸುತ್ತಿರುವ 'ಟೋಟಲ್ ಧಮಾಲ್' ಚಿತ್ರದ ಶೂಟಿಂಗ್'ನಲ್ಲಿ ಬ್ಯುಸಿ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ನಮ್ಮ ಸೋದರ ಪತ್ರಿಕೆ ಡಿಎನ್ಎ ವರದಿ ಪ್ರಕಾರ, ಅಜಯ್ ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಅವರ ಕೈ ಬಹಳ ನೋವಾಗಿದ್ದು, ಕೆಲವೊಮ್ಮೆ ಒಂದು ಕಪ್ ಹಿಡಿದುಕೊಳ್ಳುವುದೂ ಕಷ್ಟವಾಗುತ್ತಿದೆಯಂತೆ. ಅನಾರೋಗ್ಯದ ಬಳಿಕವೂ, ಅಜಯ್ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಏಕೆಂದರೆ ಈಗಾಗಲೇ ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಚಿತ್ರೀಕರಣದಿಂದ ಬ್ರೇಕ್ ಪಡೆಯುವುದು ಅಸಾಧ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ಮಾಪಕರು ಈಗಾಗಲೇ ಇತರ ನಟರೊಂದಿಗೂ ದಿನಾಂಕ ನಿಗದಿಪಡಿಸಿರುವುದೇ ಅಜಯ್ ಚಿತ್ರೀಕರಣದಿಂದ ಬ್ರೇಕ್ ಪಡೆಯಲಾಗದಿರುವುದಕ್ಕೆ ಕಾರಣ ಎನ್ನಲಾಗಿದೆ. 


'ತಾನಾಜಿ - ದಿ ಅನಸಂಗ್ ಯೋಧ್' ಚಿತ್ರದ ತಯಾರಿಯಲ್ಲಿ ಅಜಯ್ ದೇವಗನ್
'ಟೋಟಲ್ ಧಮಾಲ್' ಚಿತ್ರದ ಹೊರತಾಗಿ, ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ತಾನಾಜಿ - ದಿ ಅನಂಗ್ ಯೋಧ್' ಸಿನಿಮಾಕ್ಕೆ ತಯಾರಿ ಮಾಡಿದ್ದಾರೆ. ಇದರಲ್ಲಿ ಅವರು ಶಿವಾಜಿ ಸೈನ್ಯದ ನಾಯಕ ಸುಬೇದಾರ್ ತನಾಜಿ ಮಲುಸೇರ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಐತಿಹಾಸಿಕ ಚಿತ್ರದ ಬಗ್ಗೆ ಮಾತನಾಡಿರುವ ಅವರು, "ಈ ಚಿತ್ರದ ಸಿದ್ಧತೆ ನಡೆಯುತ್ತಿದ್ದು, ಆಗಸ್ಟ್'ನಲ್ಲಿ ಚಿತ್ರೀಕರಣ ಆರಂಭಿಸುತ್ತೇವೆ" ಎಂದಿದ್ದಾರೆ. ಅಷ್ಟೇ ಅಲ್ಲ, ಅಜಯ್ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ಇದರಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಟಬು ಸೇರಿದಂತೆ ಇರತರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.