Ajmer 92 ಅಜ್ಮೀರ್ 92 ರ ಸಿನಿಮಾ ಟೈಟಲ್‌ ರಿವೀಲ್‌ ಆದಾಗಿನಿಂದಲೂ ವಿವಾದಗಳನ್ನು ಎದರಿಸುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ರೀತಿಯಲ್ಲಿ ಸಾಕಷ್ಟು ಟೀಕೆಗಳಿಗೆ ಒಳಗಾದ ಸಿನಿಮಾ ಇದೀಗ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 


COMMERCIAL BREAK
SCROLL TO CONTINUE READING

ಕೆಲವು ದಿನಗಳಹಿಂದೆ ಚಿತ್ರದ ಮೊದಲ ಟೀಸರ್‌ ರಿಲೀಸ್‌ ಮಾಡಿದ್ದ ಅಜ್ಮೀರ್ 92 ಚಿತ್ರತಂಡ ಇಂದು (ಜುಲೈ 17) ಟ್ರೈಲರ್‌ನ್ನು ಬಿಡುಗಡೆ ಮಾಡಿದೆ. ಇನ್ನು ಈ ಟ್ರೈಲರ್‌ನಲ್ಲಿ 1987 ಮತ್ತು 1992ರ ನಡುವೆ ಪಟ್ಟಣದ ಪ್ರಬಲ ಮತ್ತು ಪ್ರಭಾವಿ ವ್ಯಕ್ತಿಗಳಿಂದ ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್ ಮಾಡಲಾದ ರಾಜಸ್ಥಾನದ ಅಜ್ಮೀರ್‌ನ ಸುಮಾರು 250 ಹುಡುಗಿಯರ ಸಾವು ನೋವಿನ ಕಥೆಯನ್ನು ಚಲನಚಿತ್ರ ಪ್ರೇಕ್ಷಕರ ಮುಂದಿಡಲಿದೆ ಎಂದು ಹೇಳಲಾಗಿದೆ. 


Sudeep vs Darshan Fan War: ಮತ್ತೆ ಶುರುವಾಯ್ತು ದಚ್ಚು - ಕಿಚ್ಚ ಫ್ಯಾನ್ ವಾರ್, ಟ್ವಿಟರ್‌ನಲ್ಲಿ ಸ್ಟಾರ್‌ ನಟರನ್ನು ಅವಮಾನಿಸಿ ಪೋಸ್ಟ್!


ಪುಷ್ಪೇಂದ್ರ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮನೋಜ್ ಜೋಶಿ, ಕರಣ್ ವರ್ಮಾ, ಸುಮಿತ್ ಸಿಂಗ್, ಬ್ರಿಜೇಂದ್ರ ಕಲಾ ಮತ್ತು ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಉಮೇಶ್ ಕುಮಾರ್ ತಿವಾರಿ ನಿರ್ಮಿಸಿದ್ದಾರೆ ಮತ್ತು ಜುಲೈ 21 ರಂದು ತೆರೆಗೆ ಬರಲಿದೆ. ಜಮಿಯತ್ ಉಲಮಾ ಇ ಹಿಂದ್ ಸೇರಿದಂತೆ ಹಲವು ಇಸ್ಲಾಮಿಕ್ ಸಂಘಟನೆಗಳು ಇದನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ ಎನ್ನಲಾಗುತ್ತಿದೆ. 


ಇನ್ನು ಈ ಅಜ್ಮೀರ್-92 ಸಿನಿಮಾ ಮಹಿಳೆಯರಲ್ಲಿ ಸಬಲೀಕರಣದ ಭಾವನೆಯನ್ನು ಬೆಳಗಿಸಲು ಬಯಸುತ್ತದೆ, ಅವರ ಮೌನವನ್ನು ಮುರಿಯಲು ಮತ್ತು ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಧೈರ್ಯದಿಂದ ಮಾತನಾಡಲು ಪ್ರೋತ್ಸಾಹಿಸುತ್ತದೆ. ಎಂದು ಚಿತ್ರತಂಡ ತಿಳಿಸಿದೆ. 


ಇದನ್ನೂ ಓದಿ-"ನನಗೆ ನ್ಯಾಯ ಬೇಕು".. ಸುದೀಪ್‌ ವಿರುದ್ಧ ಪ್ರೊಡ್ಯೂಸರ್‌ ಕುಮಾರ್ ಪ್ರೊಟೆಸ್ಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.