Sudeep vs Darshan Fan War: ಮತ್ತೆ ಶುರುವಾಯ್ತು ದಚ್ಚು - ಕಿಚ್ಚ ಫ್ಯಾನ್ ವಾರ್, ಟ್ವಿಟರ್‌ನಲ್ಲಿ ಸ್ಟಾರ್‌ ನಟರನ್ನು ಅವಮಾನಿಸಿ ಪೋಸ್ಟ್!

Sudeep vs Darshan Fan War: ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಕನ್ನಡ ಸಿನಿರಂಗದ ಸ್ಟಾರ್‌ ನಟರು. ಎಲ್ಲಾ ಸಿನಿರಂಗಗಳಲ್ಲೂ ಇರುವಂತೆ ಚಂದನವನದಲ್ಲೂ ಆಗಾಗೆ ಫ್ಯಾನ್‌ ವಾರ್‌ ನಡೆಯುತ್ತಿರುತ್ತದೆ. ಇದೀಗ ಕಿಚ್ಚ - ದಚ್ಚು ನಡುವೆ ಮತ್ತೆ ಫ್ಯಾನ್‌ ವಾರ್‌ ಬೆಂಕಿ ಹೊತ್ತಿಕೊಂಡಿದೆ.   

Written by - Chetana Devarmani | Last Updated : Jul 17, 2023, 03:40 PM IST
  • ಮತ್ತೆ ಶುರುವಾಯ್ತು ದಚ್ಚು - ಕಿಚ್ಚ ಫ್ಯಾನ್‌ ವಾರ್‌
  • ಟ್ವಿಟರ್‌ನಲ್ಲಿ ಸ್ಟಾರ್ ನಟರನ್ನು ಅವಮಾನಿಸಿ ಪೋಸ್ಟ್!
  • ಸುದೀಪ್‌ ಮತ್ತು ದರ್ಶನ್‌ ಅಭಿಮಾನಿಗಳ ಟ್ವಿಟರ್‌ ಕದನ
Sudeep vs Darshan Fan War: ಮತ್ತೆ ಶುರುವಾಯ್ತು ದಚ್ಚು - ಕಿಚ್ಚ ಫ್ಯಾನ್ ವಾರ್, ಟ್ವಿಟರ್‌ನಲ್ಲಿ ಸ್ಟಾರ್‌ ನಟರನ್ನು ಅವಮಾನಿಸಿ ಪೋಸ್ಟ್!   title=

Sudeep vs Darshan Fan War: ಸುದೀಪ್‌ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕದನ ಶುರುವಾಗಿದೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ಅಂತ್ಯಗೊಂಡಿದೆ ಎಲ್ಲರೂ ನಿರಾಳರಾಗಯವಷ್ಟರಲ್ಲಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಟ್ವಿಟರ್‌ನಲ್ಲಿ ಸ್ಟಾರ್‌ ನಟರ ವಿರುದ್ಧ ನೆಗೆಟಿವ್‌ ಪೋಸ್ಟ್‌ ಹಾಕುವ ಮೂಲಕ ಕಿತ್ತಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ವಾಗ್ವಾದ ಶುರುವಾಗಿದೆ. 

ಟ್ಟಿಟರ್‌ನಲ್ಲಿ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್‌ ಪರಸ್ಪರ ಕೆಸರೆರಚಾಡಿಕೊಳ್ಳುತ್ತಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಸುದೀಪ್‌ - ದರ್ಶನ್‌ ಅಭಿಮಾನಿಗಳ ಜಗಳ ಈಗ ಇದ್ದಕ್ಕಿದ್ದಂತೆ ಆರಂಭವಾಗಿದೆ. ಇದಕ್ಕೆ ಕಾರಣ ನಿರ್ಮಾಪಕರು ನಟ ಸುದೀಪ್‌ ಮೇಲೆ ಅಡ್ವಾನ್ಸ್‌ ಪಡೆದು ಕಾಲ್‌ ಶೀಟ್‌ ನೀಡದ ಆರೋಪ ಮಾಡಿದ್ದು. ನಿರ್ಮಾಪಕ ಎಂ ಎನ್ ಕುಮಾರ್, ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್‌ ಇಬ್ಬರೂ ಸುದೀಪ್‌ ವಿರುದ್ಧ ಆರೋಪಿಸಿದ ಬೆನ್ನಲ್ಲೇ ಈ ಫ್ಯಾನ್‌ ವಾರ್‌ ಶುರುವಾಗಿದೆ.

ಇದನ್ನೂ ಓದಿ: ಮದುವೆಯಾಗದೇ ಗರ್ಭಿಣಿಯಾದ ನಟಿ ಸಾಯಿ ಪಲ್ಲವಿ..! ವಿಡಿಯೋ ವೈರಲ್ 

ಈ ಘಟನೆ ಬಳಿಕ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧ ನೆಗೆಟಿವ್‌ ಕಾಮೆಂಟ್‌ ಮಾಡಲು ಶುರು ಮಾಡಿದ್ದಾರೆ. ಇದನ್ನು ನೋಡಿ ಕಿಚ್ಚನ ಫ್ಯಾನ್ಸ್‌ ಆಕ್ರೋಶದ ಕಟ್ಟೆ ಒಡೆದಿದೆ, ಅವರೂ ದಚ್ಚು ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

 

 

 

 

ಸಾಮಾಜಿಕ ಮಾಧ್ಯಮಗಳಲ್ಲಿ #BanFlopStarDarshanandSaveKFI (ದರ್ಶನ್ ಬ್ಯಾನ್ ಮಾಡಿ ಕನ್ನಡ ಫಿಲ್ಮ್‌ ಇಂಡಸ್ಟ್ರಿ ರಕ್ಷಿಸಿ) ಎಂಬ ಟ್ಯಾಗ್ ಬಳಸಿ ಸುದೀಪ್‌ ಅಭಿಮಾನಿಗಳು ಮೂರು ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಅಸಮಾಧಾನಗೊಂಡಿರುವ ದರ್ಶನ್‌ ಅಭಿಮಾನಿಗಳು, ಸುದೀಪ್ ವಿರುದ್ಧ #LossMakingLordKichcha (ನಷ್ಟದ ರಾಜ ಕಿಚ್ಚ) ಎಂದು ಟ್ವೀಟ್‌ ಮಾಡಿದ್ದಾರೆ. 7 ಲಕ್ಷಕ್ಕೂ ಅಧಿಕ ಟ್ವೀಟ್‌ಗಳನ್ನು ಮಾಡಿದ್ದಾರೆ. 

 

 

 

 

 

 

ಹೀಗೆ ಸುದೀಪ್‌ ಮತ್ತು ದರ್ಶನ್‌ ಫ್ಯಾನ್ಸ್‌ ಮಧ್ಯೆ ಟ್ವೀಟ್‌ ವಾರ್‌ ಶುರುವಾಗಿದೆ. ಅಭಿಮಾನಿಗಳ ಜಗಳದ ಮಧ್ಯೆ ಇಬ್ಬರು ಸ್ಟಾರ್‌ ನಟರ ವಿರುದ್ಧ ನೆಗೆಟಿವ್‌ ಕಾಮೆಂಟ್‌ಗಳು ವೈರಲ್‌ ಆಗುತ್ತಿವೆ. ಸುದೀಪ್‌ ಮತ್ತು ದರ್ಶನ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ. ಈ ಸಂಗತಿ ಎಲ್ಲಿಗೆ ಹೋಗಿ ನಿಲ್ಲುತ್ತೋ ಎಂಬ ಆತಂಕ ನೆಟ್ಟಿಗರಲ್ಲಿ ಶುರುವಾಗಿದೆ. 

 

 

 

 

 

ಇದನ್ನೂ ಓದಿ: ಪ್ರಭಾಸ್ ನಟನೆಯ Project K ಟೈಟಲ್‌ ರಿವೀಲ್‌!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News