ಅಸ್ಸಾಂ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ Akshay Kumaar... ನೀಡಿದ ಧನಸಹಾಯ ಎಷ್ಟು ಗೊತ್ತಾ?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಸಹಾಯ ಹಸ್ತ ಚಾಚಿದ್ದಾರೆ.
ನವದೆಹಲಿ: ಪಿಎಂ ಮೋದಿ ಪಿಎಂ ಕೇರ್ ಫಂಡ್ ಘೋಷಿಸಿದಾಗ, ಅಕ್ಷಯ್ ಕುಮಾರ್ (Akshay Kumar) 25 ಕೋಟಿ ರೂ.ಗಳ ದೇಣಿಗೆಯನ್ನು ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದನ್ನು ನಿಮಗೆ ತಿಳಿದಿರುವ ಸಂಗತಿಯೇ. ಅಕ್ಷಯ್ ಕುಮಾರ್ ಸಾರ್ವಜನಿಕವಾಗಿ ತಾವು ನೀಡಿರುವ ಧನಸಹಾಯದ ಕುರಿತು ಘೋಷಣೆ ಮಾಡುವುದಿಲ್ಲ. ಆದರೆ ಪಿಎಂ ಕೇರ್ ಫಂಡ್‌ಗೆ ದೇಣಿಗೆ ನೀಡುವಂತೆ ಇತರರನ್ನು ಪ್ರೋತ್ಸಾಹಿಸಲು ಇದೇ ಮೊದಲ ಬಾರಿಗೆ ಅವರು ಘೋಷಣೆ ಮಾಡಿದ್ದರು. ಪ್ರಸ್ತುತ ಮತ್ತೆ ಅಕ್ಷಯ್ ಕುಮಾರ್ ಚರ್ಚೆಯಲ್ಲಿದ್ದಾರೆ. ಮಂಗಳವಾರ ಟ್ವೀಟ್ ವೊಂದನ್ನು ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಟ್ವೀಟ್ ನಲ್ಲಿ ಅಸ್ಸಾಂನ ಪ್ರವಾಹ ಪೀಡಿತರಿಗೆ ಅಕ್ಷಯ್ 1 ಕೋಟಿ ರೂ. ಧನಸಹಾಯ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಒಂದೆಡೆ ಅಮೀರ್ ಖಾನ್ ವಿವಾದಗಳಿಗೆ ಸಿಲುಕಿದ್ದು ಬಾಲಿವುಡ್ ಕೂಡ ಈಗಾಗಲೇ ಸುಶಾಂತ್ ಅವರ ಸಾವಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿದೆ ಇಂತಹುದರಲ್ಲಿ ಮತ್ತೊಮ್ಮೆ ಸಹಾಯ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಮೂಲಕ ಅಕ್ಷಯ್ ಚರ್ಚೆಗೆ ಬಂದಿದ್ದಾರೆ. ಅಸ್ಸಾಂ ಮಾತ್ರವಲ್ಲ, ಅಕ್ಷಯ್ ಬಿಹಾರದಲ್ಲಿ ಪ್ರವಾಹ ಪರಿಹಾರಕ್ಕಾಗಿ ಕೂಡ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅಕ್ಷಯ್ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡುವ ಮೂಲಕ ಧನಸಹಾಯ ಮಾಡುವ ಕುರಿತು ಪ್ರಸ್ತಾಪಿಸಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ, ಈ ವಿಷಯದಲ್ಲಿ ಅಕ್ಷಯ್ ಯಾವುದೇ ರೀತಿಯ ಹೇಳಿಕೆ ನೀಡಿರಲಿಲ್ಲ.
ಪಿಎಂ ಕೇರ್ ಫಂಡ್‌ಗೆ ಅಕ್ಷಯ 25 ಕೋಟಿ ರೂ. ದೇಣಿಗೆ ನೀಡಿದ ಸಂದರ್ಭದಲ್ಲಿ ಮುಂಬೈ ಪೊಲೀಸ್ ಫೌಂಡೇಶನ್ ಗೂ ಕೂಡ ಅವರು 2 ಕೋಟಿ ರೂ. ಮತ್ತು ಬಿಎಂಸಿಯ ಕರೋನಾ ಪ್ರಯತ್ನಕ್ಕೆ 3 ಕೋಟಿ ರೂ. ಧನಸಹಾಯ ಮಾಡಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ಫಾನಿ ಚಂಡಮಾರುತಕ್ಕೆ ತುತ್ತಾದ ಓಡಿಷಾದ ಸಂತ್ರಸ್ತರಿಗೂ ಕೂಡ ಅಕ್ಷಯ್ 1 ಕೋಟಿ ರೂ. ಧನಸಹಾಯ ಮಾಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಇಂತಹ ಸಹಾಯಕ್ಕಾಗಿ ಅಕ್ಷಯ್ ನೀಡಿದ್ದ ಅತ್ಯುತ್ತಮ ಸಲಹೆ ಎಂದರೆ ಅದು 'ಭಾರತ್ ಕೆ ವೀರ್'. ಅಕ್ಷಯ ತಮ್ಮ ಈ ಐಡಿಯಾವನ್ನು ಕೇಂದ್ರ ಗೃಹ ಸರ್ಕಾರಕ್ಕೂ ಕೂಡ ನೀಡಿದ್ದಾರೆ ಎನ್ನಲಾಗುತ್ತದೆ. ಈ ವೆಬ್‌ಸೈಟ್ ಮೂಲಕ, ಹುತಾತ್ಮರ ಕುಟುಂಬಕ್ಕೆ ಯಾರೇ ಆಗಲಿ ನೇರವಾಗಿ ಹಣಕಾಸಿನ ನೆರವು ನೀಡಬಹುದು, ಇದರ ಸಹಾಯದಿಂದ ಅರೆಸೇನಾಪಡೆಯ ಸೈನಿಕರ ಕುಟುಂಬಕ್ಕೆ ಇದುವರೆಗೆ ಎಷ್ಟು ಸಹಾಯ ನೀಡಲಾಗಿದೆ ಎಂಬುದನ್ನು ನೋಡಬಹುದು ಮತ್ತು ಅದರ ಆಧಾರದ ಮೇಲೆ ಅವರು ಕುಟುಂಬವನ್ನು ಆಯ್ಕೆ ಮಾಡಬಹುದು. ಈ ಮೂಲಕ ಅಕ್ಷಯ್ ಸ್ವತಃ ಐದು ಕೋಟಿ ರೂಪಾಯಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತದೆ, ನೂರಾರು ಹುತಾತ್ಮರ ಕುಟುಂಬಗಳಿಗೆ ಈ ವೆಬ್‌ಸೈಟ್ ಮತ್ತು ನಿಧಿಯ ಮೂಲಕ 15 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.
ಅಕ್ಷಯ್ ಕುಮಾರ್ ತಮ್ಮ ದೇಶಭಕ್ತಿಯ ಚಿತ್ರಗಳ ಮೂಲಕ ಮಾತ್ರವಲ್ಲದೆ 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಮತ್ತು 'ಪ್ಯಾಡ್ಮನ್' ಚಿತ್ರಗಳ ಮೂಲಕವೂ ಸಾಮಾಜಿಕ ಸಂದೇಶವನ್ನು ನೀಡುತ್ತಿದ್ದಾರೆ, ಇದಲ್ಲದೆ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿಯೂ ಕೂಡ ಹಲವು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಮೂಲಕ ನಿಜಾರ್ಥದಲ್ಲಿ ಓರ್ವ ರಾಷ್ಟ್ರಭಕ್ತ ರೂಪದಲ್ಲಿ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ.