ನವದೆಹಲಿ: ಬಾಲಿವುಡ್ ನಟಿ ಅಲಯಾ ಫರ್ನಿಚರ್ ವಾಲಾ ಮುಂಬೈನಿಂದ ಸ್ವಲ್ಪ ದೂರದಲ್ಲಿ ತನ್ನ 23 ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿದ್ದಾಳೆ.


COMMERCIAL BREAK
SCROLL TO CONTINUE READING

ತನ್ನ ಫ್ಯಾಶನ್ ಶೈಲಿಯಿಂದಲೇ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಅಲಯಾ ಈಗ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವುದರಲ್ಲಿ ಆಶ್ಚರ್ಯವೇನಿಲ್ಲ.ಅಲಯಾ ಅಲಿಬಾಗ್‌ಗೆ ತೆರಳಿದ್ದು, ಅಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಕೂಡ ಸಕ್ರೀಯವಾಗಿರುವ ಅವರು ಹಲವು ಬಹುಮುಖ ಪ್ರತಿಭೆ ಎಂದು ಹೇಳಬಹುದು.



ಈಗ ಹುಟ್ಟುಹಬ್ಬದಂದು ಅವರು ಬೆಳ್ಳಿ ಬಣ್ಣದ ಬಿಕಿನಿಯನ್ನು ಧರಿಸಿ ತನ್ನ ಹೆಸರಿನ ಮೊದಲ ಅಕ್ಷರ AF ಗಳ ನಡುವೆ ನಿಂತು ಪೋಸ್ ನೀಡಿದ್ದಾರೆ.ಅವರ ಸುತ್ತಲೂ ಬಣ್ಣ ಬಣ್ಣದ ಬಲೂನುಗಳು ಕಂಗೊಳಿಸುತ್ತಿವೆ. ತನ್ನ ಇನ್ಸ್ಟಾಗ್ರಾಂ ನಲಿ ಹುಟ್ಟುಹಬ್ಬದ ಸಂಭ್ರಮದ ಕುರಿತಾಗಿ ಅಲಯಾ "ಆಶೀರ್ವಾದ, ಕೃತಜ್ಞತೆ ಮತ್ತು ಸೂಪರ್ ಸಂತೋಷ!  ಹುಟ್ಟುಹಬ್ಬದ ಶುಭಕೋರಿಕೆಗಳಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.