ನವದೆಹಲಿ: ಬಾಲಿವುಡ್ ಉದ್ಯಮ ನಿರಂತರವಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ಸಮಯದೊಂದಿಗೆ, ಬಾಲಿವುಡ್ನಲ್ಲಿರುವ ಮಹಿಳಾ ನಟಿ ಮಣಿಯರಿಗೂ ಹೆಚ್ಚು ಮಹತ್ವ ನೀಡಲಾಗಿದೆ ಮತ್ತು ಬಾಲಿವುಡ್ನಲ್ಲಿ ಸ್ತ್ರೀ ಕೇಂದ್ರಿತ ಚಲನಚಿತ್ರಗಳನ್ನು ಮಾಡಲಾಗುತ್ತಿದೆ. ಸ್ತ್ರೀ ಕೇಂದ್ರಿತ ಚಿತ್ರಗಳಲ್ಲಿ ಕೆಲಸ ಮಾಡುವ ಅನೇಕ ನಟಿಯರಿದ್ದಾರೆ. ಅವರಲ್ಲಿ ರಾಣಿ ಮುಖರ್ಜಿ, ವಿದ್ಯಾ ಬಾಲನ್, ಶ್ರದ್ಧಾ ಕಪೂರ್ ಮತ್ತು ಕಂಗನಾ ರಾವತ್ ನಂತಹ ಅನೇಕ ನಟಿಯರ ಹೆಸರುಗಳು ಮತ್ತು ಈಗ ಆಲಿಯಾ ಭಟ್ ಹೆಸರು ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದೆ. ಇದಲ್ಲದೆ, ರಾಜಿ ಚಿತ್ರದ ಮೂಲಕ ಆಲಿಯಾ ಈ ಎಲ್ಲ ನಟಿಯರನ್ನು ಸೋಲಿಸಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆಲಿಯಾ ಭಟ್ ರ ಚಿತ್ರ 'ರಾಜಿ' ಮೊದಲ ಮಹಿಳಾ ಕೇಂದ್ರಿತ ಚಿತ್ರವಾಗಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ವ್ಯವಹಾರ ಮಾಡಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಲನಚಿತ್ರವು ಹರೀಂದರ್ ಸಿಕ್ಕಾದ 'ಕಾಲಿಂಗ್ ಸಹಮತ್' ಕಾದಂಬರಿಯನ್ನು ಆಧರಿಸಿದೆ. ಆಲಿಯಾ ಚಿತ್ರದಲ್ಲಿ ಸಹಮತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಕಥೆ ಭಾರತ ಮತ್ತು ಪಾಕಿಸ್ತಾನದ ನಡುವಿನ 1971 ರ ಯುದ್ಧವನ್ನು ಆಧರಿಸಿದೆ. ಆಲಿಯಾ ಅವರ ಅಭಿನಯವು ಚಲನಚಿತ್ರದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ.



ಕಳೆದ ವರ್ಷ ವಿದ್ಯಾ ಬಾಲನ್ ಅಭಿನಯದ 'ತುಮ್ಹಾರಿ ಸುಲು' ಸಹ ಪ್ರೇಕ್ಷಕರಿಂದ ಬಾರಿ ಜನಪ್ರಿಯತೆ ಪಡೆದಿತ್ತು. ಅಲ್ಲದೆ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಂದಾಜು 50 ಮಿಲಿಯನ್ ವಹಿವಾಟು ಸಹ ಮಾಡಿತ್ತು. ಅದೇ ಸಮಯದಲ್ಲಿ, ರಾಣಿ ಮುಖರ್ಜಿ ಅವರ ಚಲನಚಿತ್ರ 'ಹಿಚ್ಕಿ' ಬಾಕ್ಸ್ ಆಫೀಸ್ನಲ್ಲಿ ಸ್ವಲ್ಪ ಹಿಂದೆಯೇ ಬಿಡುಗಡೆಯಾಯಿತು ಮತ್ತು ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 100 ಮಿಲಿಯನ್ ಸದ್ದು ಮಾಡಿತು.