Alia Ranbir daughter : ಬಾಲಿವುಡ್‌ ಸ್ಟಾರ್‌ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಕಪೂರ್ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ವರದಿಯ ಪ್ರಕಾರ ರಣಬೀರ್ ತಮ್ಮ ಫೋನ್‌ನಲ್ಲಿದ್ದ ಮಗಳ ಫೋಟೋವನ್ನು ಪ್ರೇಸ್‌ಮೀಟ್‌ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಛಾಯಾಗ್ರಾಹಕರಿಗೆ ತೋರಿಸಿದ್ದಾರೆ. ಅವರೆಲ್ಲರೂ ಕ್ಯೂಟಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಕಪೂರ್‌ ಫ್ಯಾಮಿಲಿ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ತಮ್ಮ ಮನೆಮಗಳ ಫೋಟೋವನ್ನು ಕ್ಲಿಕ್ ಮಾಡದಂತೆ ಮನವಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ರಣಬೀರ್‌ ತಾಯಿ ನೀತು ಕಪೂರ್ ಅವರು ರಾಹಾಗೆ 2 ವರ್ಷ ತುಂಬುವವರೆಗೂ ಅವರ ಫೋಟೋಗಳನ್ನು ಕ್ಲಿಕ್ ಮಾಡದಂತೆ ಛಾಯಾಗ್ರಾಹಕರಿಗೆ ಮನವಿ ಮಾಡಿದ್ರು. ಅಲ್ಲದೆ, ಕೋವಿಡ್‌ ವೈರಸ್ ಬಗ್ಗೆ ಅತ್ಯಂತ ಜಾಗರೂಕರಾಗಿರುವ ಆಲಿಯಾ, ರಣಬೀರ್‌ ತಮ್ಮ ಮಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಇಲ್ಲಿಯವರೆಗೂ ಮಗಳ ಮುಖವನ್ನು ಹೊರಗಿನವರಿಗೆ ಯಾರಿಗೂ ತೋರಿಸಿಲ್ಲ.


ಇದನ್ನೂ ಓದಿ: Urfi Javed : ಖ್ಯಾತ ಗೀತರಚನೆಕಾರ ʼಜಾವೇದ್‌ ಅಖ್ತರ್‌ ಉರ್ಫಿ ಅಜ್ಜʼ... ನೆಟ್ಟಿಗರು ಶಾಕ್‌..!


ನವೆಂಬರ್ 6 ರಂದು ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಕೆಗೆ ಈಗ ಎರಡು ತಿಂಗಳು. ಆಲಿಯಾ ತನ್ನ ಇತ್ತೀಚಿನ ಸಂವಾದದಲ್ಲಿ, ತಾಯಿಯಾಗಿ ಪ್ರತಿ ಕ್ಷಣವು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ತಾಯಿತನದ ಬಗ್ಗೆ ಆಲಿಯಾ ಅಭಿಪ್ರಾಯ ಹಂಚಿಕೊಂಡಿದ್ದರು. ಬ್ರಹ್ಮಾಸ್ತ್ರ ಯಶಸ್ಸಿನ ನಂತರ ಇದೀಗ ಆಲಿಯಾ ಮತ್ತು ರಣಬೀರ್ ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.